Headlines

Vaidurya Gemstone: ಕೇತು ದೋಷದಿಂದ ಮುಕ್ತಿ ಮತ್ತು ಹಠಾತ್ ಸಂಪತ್ತು ಪಡೆಯಲು ಈ ರತ್ನ ಧರಿಸಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತುವನ್ನು ಮೋಕ್ಷ ಕಾರಕ, ಆಧ್ಯಾತ್ಮಿಕತೆಯ ಅಧಿಪತಿ ಮತ್ತು ಹಠಾತ್ ಘಟನೆಗಳ ಪ್ರೇರಕ ಎಂದು ಕರೆಯಲಾಗುತ್ತದೆ. ಜಾತಕದಲ್ಲಿ ಕೇತು ದುರ್ಬಲನಾಗಿದ್ದಾಗ ಅಥವಾ ಕೇತು ಮಹಾದಶೆ ನಡೆಯುತ್ತಿರುವಾಗ ಜೀವನದಲ್ಲಿ ಅನಿರೀಕ್ಷಿತ ಏರಿಳಿತಗಳು ಎದುರಾಗುವುದು ಸಹಜ. ಇಂತಹ ಸಂದರ್ಭದಲ್ಲಿ ವೈಡೂರ್ಯ ಅಥವಾ ‘ಬೆಕ್ಕಿನ ಕಣ್ಣಿನ ರತ್ನ’ವು ಕೇವಲ ಒಂದು ಆಭರಣವಾಗಿ ಉಳಿಯದೆ, ಧರಿಸಿದವರ ಪಾಲಿಗೆ ರಕ್ಷಣಾತ್ಮಕ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ವ್ಯಕ್ತಿಯನ್ನು ದುಷ್ಟ ಶಕ್ತಿಗಳಿಂದ ಕಾಪಾಡುವುದಲ್ಲದೆ, ಆರ್ಥಿಕ ಸ್ಥಿರತೆಯನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವೈಡೂರ್ಯ ರತ್ನದಿಂದ ಲಭಿಸುವ…

Read More

Viral Video: ಜಿಂದಾಲ್ ಟವರ್ ಏರಿ 282 ಅಡಿ ಎತ್ತರದಲ್ಲಿ ವ್ಯಕ್ತಿಯ ಅಪಾಯಕಾರಿ ಸಾಹಸ – Kannada News | A Misstep from Disaster: Man Detained After Scaling Jindal Tower Without Safety Gear

ಹರಿಯಾಣ, ಜನವರಿ 21: ವ್ಯಕ್ತಿಯೊಬ್ಬ ಹರಿಯಾಣದ ಹಿಸಾರ್​ನಲ್ಲಿರುವ ಜಿಂದಾಲ್ ಟವರ್ ಏರಿ ಅಪಾಯಕಾರಿ ಸಾಹಸ(Stunt) ಮಾಡಿರುವ ವಿಡಿಯೋ ವೈರಲ್ ಆಗಿದೆ. ರಾಜಸ್ಥಾನದ ಮೋನು ಎಂಬ ಯುವಕ 282 ಅಡಿ ಎತ್ತರದ ಟವರ್ ಹತ್ತಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ಅಧಿಕಾರಿಗಳ ಪ್ರಕಾರ, ಜನವರಿ 18 ರ ಭಾನುವಾರದಂದು ಈ ಘಟನೆ ನಡೆದಿದ್ದು, ಮೋನು ಜಿಂದಾಲ್ ಟವರ್ ಪ್ರವೇಶಿಸಲು ಭದ್ರತಾ ನಿರ್ಬಂಧಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ….

Read More

44 ಲಕ್ಷ ರೂ. ವಿಮಾ ಹಣಕ್ಕಾಗಿ ಪತ್ನಿಯ ಭೀಕರ ಕೊಲೆ: ಅಪಘಾತವೆಂದು ಬಿಂಬಿಸಲು ಹೋಗಿ ಜೈಲುಪಾಲಾದ ಗಂಡ – Kannada News | Insurance Greed Ends in Tragedy as Husband Held Over Woman’s Death in UP

ಹಮೀರ್‌ಪುರ, ಆಗಸ್ಟ್ 03: ಹಣದ ದುರಾಸೆಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಹೆಸರಿನಲ್ಲಿದ್ದ 44 ಲಕ್ಷ ರೂ. ವಿಮಾ ಮೊತ್ತವನ್ನು ಪಡೆಯಲು ಆಕೆಯನ್ನೇ ಭೀಕರವಾಗಿ ಕೊಲೆ(Murder) ಮಾಡಿ, ನಂತರ ಅಪಘಾತವೆಂದು ಬಿಂಬಿಸಲು ಮೃತದೇಹದ ಮೇಲೆ ಕಾರು ಹರಿಸಿ ಸುಟ್ಟುಹಾಕಿರುವ ಪೈಶಾಚಿಕ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ರೀಟಾ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಅಮರ್ ಸಿಂಗ್ ಹಾಗೂ ಆತನ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಕಾಣೆಯಾಗಿದ್ದಾಳೆ ಎಂದು ಆರೋಪಿ…

Read More

ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್‌ ಡಾ.ವಹೀದಾ ಸುಲ್ತಾನಾ ನಿಧನ – Kannada News | Mangaluru university retired professor dr Waheeda Sultan Passes Away From heart attack On August 6th In Mysuru

ಮಂಗಳೂರು, (ಆಗಸ್ಟ್ 06): ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರೊಫೆಸರ್‌ ಡಾ.ವಹೀದಾ ಸುಲ್ತಾನಾ (70) ನಿಧನರಾಗಿದ್ದಾರೆ. ಮೈಸೂರು ಕಲ್ಯಾಣಗಿರಿ ನಿವಾಸಿಯಾಗಿರುವ ಡಾ.ವಹೀದಾ ಸುಲ್ತಾನಾ ಅವರಿಗೆ ಇಂದು (ಆಗಸ್ಟ್ 06) ಹೃದಯಾಘಾತವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಸುಮಾರು 3 ದಶಕಗಳ ಕಾಲ ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿದ್ದು, ವಿಭಾಗ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದರು. ಅವರು ಪತಿ, ಇಬ್ಬರು ಸಹೋದರರು, ಮೂವರು ಸಹೋದರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ…

Read More

ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ – Kannada News | This is why Darshan did not act in Bheema Theeradalli movie

ನಿರ್ಮಾಪಕ ಅಣಜಿ ನಾಗರಾಜ್, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಒಟ್ಟಾಗಿ 2012ರಲ್ಲಿ ‘ಭೀಮ ತೀರದಲ್ಲಿ’ (Bheema Theeradalli) ಸಿನಿಮಾ ಮಾಡಿದ್ದರು. ಅವರ ಜೊತೆ ದರ್ಶನ್ ಆಪ್ತವಾಗಿದ್ದರೂ ಕೂಡ ಆ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು ದುನಿಯಾ ವಿಜಯ್. ಹಾಗಾದ್ರೆ, ದರ್ಶನ್ (Darshan) ಜೊತೆ ಈ ಸಿನಿಮಾವನ್ನು ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಓಂ ಪ್ರಕಾಶ್ ರಾವ್ ಮತ್ತು ಅಣಜಿ ನಾಗರಾಜ್ ಅವರು ಉತ್ತರಿಸಿದ್ದಾರೆ. ‘ಈ ಕತೆಯನ್ನು ತಂದಿದ್ದೇ ದುನಿಯಾ ವಿಜಯ್. ಪಾತ್ರಕ್ಕಾಗಿ ವಿಜಯ್ ಅವರು ಅದಾಗಲೇ ಡ್ರೆಸ್…

Read More

ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ, ಇದು ದೇಶವನ್ನು ಅಸ್ಥಿರಗೊಳಿಸುವ ಪಿತೂರಿ: ಪ್ರತಾಪ್ ಸಿಂಹ – Kannada News | Pratap Simha Alleges NEET Protest Conspiracy, Targets Congress and ‘Deep State’ in Mysuru

ಮೈಸೂರು, ಜುಲೈ 24: ನೀಟ್ ಪರೀಕ್ಷೆಗೆ ಸಂಬಂಧಿಸಿದ ಪ್ರತಿಭಟನೆಗಳು ಭಾರತವನ್ನು ಅಸ್ಥಿರಗೊಳಿಸುವ ವ್ಯವಸ್ಥಿತ ಪಿತೂರಿಯ ಭಾಗವಾಗಿವೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ರಾಜ್ಯ ಮತ್ತು ದೆಹಲಿಯ ಕಾಂಗ್ರೆಸ್‌ನೊಂದಿಗೆ ಸೇರಿಕೊಂಡು ಪ್ರತಿಭಟನೆಗಳನ್ನು ನಡೆಸುತ್ತಿದೆ ಎಂದರು. ಮೈಸೂರಿನಲ್ಲಿ ಮಾತನಾಡಿದ ಅವರು, ನೀಟ್ ಮರುಪರೀಕ್ಷೆ ನಡೆದು, ಫಲಿತಾಂಶ ಪ್ರಕಟಗೊಂಡು ಹಲವು ದಿನಗಳ ನಂತರ ಪ್ರತಿಭಟನೆಗಳು ಆರಂಭವಾಗಿವೆ. ಇದು ಪೂರ್ವಯೋಜಿತ ಹುನ್ನಾರ ಎಂದು ಅಭಿಪ್ರಾಯಪಟ್ಟರು. ಹಿಂದೆ ಸಿಎಎ ಮತ್ತು ಕೃಷಿ ಮಸೂದೆಗಳ ವಿರುದ್ಧ ನಡೆದ…

Read More

ಮುರಿದು ಬಿತ್ತು ‘ರಾಧಾ ರಮಣ’ ಧಾರಾವಾಹಿ ನಟಿ ಅನುಷಾ ಹೆಗಡೆ ದಾಂಪತ್ಯ – Kannada News | Actress Anusha Hegde announce divorce with husband Prathap Singh

ಸಿನಿಮಾ ರಂಗದಲ್ಲಿ (Sandalwood) ದಾಂಪತ್ಯ ವಿಚ್ಛೇದನ ಎಂಬುದು ಸಾಮಾನ್ಯ ಆಗಿಬಿಟ್ಟಿದೆ. ಇತ್ತೀಚೆಗೆ ಟಿವಿ ಲೋಕದಲ್ಲೂ ಸಹ ಇದು ಸಾಮಾನ್ಯ ಎನಿಸಿಕೊಳ್ಳುತ್ತಿದೆ. ಕಳೆದ ವರ್ಷ ಕೆಲವಾರು ಕಿರುತೆರೆ ನಟ-ನಟಿಯರು ವಿಚ್ಛೇದನ ಪಡೆದಿದ್ದು ಸುದ್ದಿ ಆಗಿತ್ತು. ಇದೀಗ ನಟಿ ಅನುಷಾ ಹೆಗಡೆ ಸಹ ಅದೇ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಅನುಷಾ ಅವರ ವಿವಾಹ ಭಾರಿ ಸದ್ದು ಮತ್ತು ಸುದ್ದಿ ಆಗಿತ್ತು. ಆದರೆ ಅವರ ದಾಂಪತ್ಯ ಆರೇ ವರ್ಷಕ್ಕೆ ಮುರಿದು ಬಿದ್ದಿದೆ. ಅನುಷಾ ಹೆಗಡೆ ಅವರು ಈ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ….

Read More

ಕೇವಲ 11 ಕೋಟಿಗೆ ಐವರು ಮ್ಯಾಚ್ ವಿನ್ನರ್ಸ್​; ಆರ್​ಸಿಬಿ ಲೆಕ್ಕಾಚಾರಕ್ಕೆ ಥಂಡಾ ಹೊಡೆದ ಉಳಿದ ಫ್ರಾಂಚೈಸಿಗಳು

ಹಾಲಿ ಚಾಂಪಿಯನ್ ಆರ್‌ಸಿಬಿ (RCB) ಕಳೆದ ಆವೃತ್ತಿಯಲ್ಲಿ ತನ್ನ ಅಮೋಘ ಪ್ರದರ್ಶನವನ್ನು ಎಲ್ಲಿಗೆ ನಿಲ್ಲಿಸಿತ್ತೋ ಅದನ್ನು ಈ ಆವೃತ್ತಿಯಲ್ಲೂ ಮುಂದುವರೆಸಿದೆ. ಆಡಿದ ಮೊದಲ ಎರಡು ಪಂದ್ಯಗಳನ್ನು ಗೆದ್ದು ಐಪಿಎಲ್ 2026 (IPL 2026) ರ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎಸ್‌ಆರ್‌ಹೆಚ್ ವಿರುದ್ಧದ ತನ್ನ ಮೊದಲ ಪಂದ್ಯವನ್ನು ಆರು ವಿಕೆಟ್‌ಗಳಿಂದ ಗೆದ್ದುಕೊಂಡಿದ್ದ ಆರ್‌ಸಿಬಿ, ತನ್ನ ಎರಡನೇ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು 43 ರನ್‌ಗಳಿಂದ ಸೋಲಿಸಿತು. ಆರ್​ಸಿಬಿಯ ಈ ಬಲಿಷ್ಠ ಪ್ರದರ್ಶನಕ್ಕೆ 2025 ರ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್​ಸಿಬಿ…

Read More

ಕೋಪದಲ್ಲಿ ಕೋರ್ಟ್ ಕಡತ ಎಸೆದ ವಕೀಲ, ಕೆಂಡಾಮಂಡಲವಾದ ನ್ಯಾಯಮೂರ್ತಿ – Kannada News | Andhra High Court: Lawyer Throws Files, Justice Orders Contempt Action

ಅಮರಾವತಿ, ಮೇ 06: ಆಂಧ್ರಪ್ರದೇಶ ಹೈಕೋರ್ಟ್‌ನ ನ್ಯಾಯಾಲಯ(Court)ದ ಕೊಠಡಿಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟ ಅಪರೂಪದ ಘಟನೆಯೊಂದು ಜರುಗಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಯುವ ವಕೀಲರೊಬ್ಬರು ವರ್ತಿಸಿದ ರೀತಿಯಿಂದ ನ್ಯಾಯಮೂರ್ತಿ ಟಿ. ರಾಜಶೇಖರ್ ರಾವ್  ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಕೀಲರನ್ನು ನ್ಯಾಯಾಂಗ ನಿಂದನೆ ಆರೋಪದ ಮೇಲೆ ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ. ನ್ಯಾಯಮೂರ್ತಿ ಟಿ. ರಾಜಶೇಖರ್ ರಾವ್ ಅವರ ಪೀಠದ ಮುಂದೆ ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದಾಗ, ಯುವ ವಕೀಲರು ತಮ್ಮ ವಾದದ ಭರದಲ್ಲಿ ನ್ಯಾಯಪೀಠದ ಮೇಲಿದ್ದ ಕಡತಗಳನ್ನು (Files) ಎಸೆದಿದ್ದಾರೆ….

Read More

ಒಟಿಟಿಗಳ ಲಾಭಕೋರತನಕ್ಕೆ ಪ್ರೇಕ್ಷಕ ಹೈರಾಣು: ಸಿಗಲಿದೆಯೇ ಮುಕ್ತಿ? – Kannada News | Will Amazon Prime and other OTTs stop playing ads

ಕೋವಿಡ್ ಬಳಿಕ ಭಾರತ ಸೇರಿದಂತೆ ವಿಶ್ವದಾದ್ಯಂತ ಒಟಿಟಿ (OTT) ವೇದಿಕೆಗಳು ಭಾರಿ ಪ್ರಚಲಿತಕ್ಕೆ ಬಂದವು. ಈಗಂತೂ ಭಾರತವೊಂದರಲ್ಲೇ ಸುಮಾರು 100ಕ್ಕೂ ಹೆಚ್ಚು ಒಟಿಟಿ ವೇದಿಕೆಗಳು ಸಕ್ರಿಯವಾಗಿವೆ. ಆದರೆ ಅವುಗಳಲ್ಲಿ ಪ್ರಮುಖವಾದುವು ಸುಮಾರು 15 ರಿಂದ 20 ಎನ್ನಬಹುದು. ಕೋವಿಡ್ ಸಮಯದಲ್ಲಿ ಹಾಗೂ ಅದಾದ ಕೆಲ ವರ್ಷಗಳ ಬಳಿಕ ಪ್ರೇಕ್ಷಕನನ್ನು ಪ್ರಭು ಎಂದು ಪರಿಗಣಿಸಿ ಸೇವೆ ನೀಡುತ್ತಿದ್ದ ಒಟಿಟಿಗಳು ಈಗ ವರಸೆ ಬದಲಿಸಿವೆ. ಸಬ್​ಸ್ಕ್ರಿಪ್ಷನ್ ಪಡೆದ ಬಳಿಕವೂ ಜಾಹೀರಾತುಗಳನ್ನು ಪ್ರದರ್ಶಿಸುತ್ತಿವೆ. ಜಾಹೀರಾತು ಬೇಡವೆಂದರೆ ವಾರ್ಷಿಕ ಮೊತ್ತದ ಮೇಲೆ ಮತ್ತೆ…

Read More