ಪ್ರತ್ಯೇಕ ಅಪಘಾತ: ಮೂರು ವಷರ್ದ ಬಾಲಕಿ ಸೇರಿ ಇಬ್ಬರು ಸಾವು, 12 ಮಕ್ಕಳಿಗೆ ಗಾಯ
ಕೋಲಾರ/ಮಂಡ್ಯ, ಮಾರ್ಚ್ 27: ಮಂಡ್ಯ, ಕೋಲಾರ ಮತ್ತು ರಾಮನಗರದಲ್ಲಿ ನಡೆದಿರುವ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂರು ವರ್ಷದ ಬಾಲಕಿ ಸೇರಿ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಒಟ್ಟು 12 ಮಕ್ಕಳಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಕೆರೆ ಕಟ್ಟೆ ಬಳಿ ಟೆಂಪೋ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಮೂರು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಕ್ರುತ್ಯಾರೆಡ್ಡಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಬೆಂಗಳೂರಿಗೆ ತರಕಾರಿ ತಲುಪಿಸುವ ತರಾತುರಿಯಲ್ಲಿ ಟೆಂಪೋ ಚಾಲಕನ ಅತಿ ವೇಗದ ಚಾಲನೆಯೇ…