Headlines

ಮೂವರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ, ದುಡುಕಿನ‌ ನಿರ್ಧಾರಕ್ಕೆ 3 ಜೀವಗಳು ಬಲಿ – Kannada News | Mother kills three children in Bagalkot, then attempts suicide for Family Dispute

ಪರಿಶೀಲನೆ ಮಾಡುತ್ತಿರುವ ಪೊಲೀಸ್ರು ಬಾಗಲಕೋಟೆ, (ಫೆಬ್ರವರಿ 01): ಮಹಿಳೆಯೊಬ್ಬರು (Woman) ತನ್ನ ಮೂವರು ಮಕ್ಕಳನ್ನು ಕೊಂದು ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಬಾಗಲಕೋಟೆ (Bagalkot) ಜಿಲ್ಲೆ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ರೂಪಾ ಎನ್ನುವ ಮಹಿಳೆ ತನ್ನ ಮೂರು ಮಕ್ಕಳನ್ನು ನೇಣಿಗೆ ಹಾಕಿ ಕೊಂದು ಬಳಿಕ ತಾನೂ ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸಮೃದ್ಧಿ(5), ಪ್ರೀತಮ್(4), ಸುಕ್ಷಿತ್(2) ಮೃತ ಮಕ್ಕಳು. ಇನ್ನು ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ರೂಪಾ…

Read More

‘ಅವತಾರ್’ ಮ್ಯಾಜಿಕ್ ಕಡಿಮೆ ಆಯ್ತೆ, ಮುಂಗಡ ಬುಕಿಂಗ್ ಮಂಕು – Kannada News | Avatar 3 movie not getting good response in Indian box office

‘ಅವತಾರ್’ ಸಿನಿಮಾ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳಲ್ಲಿ ಒಂದು. ಇದೀಗ ‘ಅವತಾರ್’ ಸಿನಿಮಾ ಸರಣಿಯ ಮೂರನೇ ಸಿನಿಮಾ ‘ಅವತಾರ್: ಫೈರ್ ಆಂಡ್ ಆಶ್’ ನಾಳೆ (ಡಿಸೆಂಬರ್ 19) ಬಿಡುಗಡೆ ಆಗಲಿದೆ. ಪ್ರತಿ ಬಾರಿ ‘ಅವತಾರ್’ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಭಾರಿ ಕ್ರೇಜ್ ಸೃಷ್ಟಿಯಾಗುತ್ತಿತ್ತು. ಇದಕ್ಕೆ ಭಾರತ ಸಹ ಹೊರತಾಗಿರಲಿಲ್ಲ. ಆದರೆ ಈ ಬಾರಿ ಯಾಕೋ ಕ್ರೇಜ್ ಅಷ್ಟಾಗಿ ಕಾಣುತ್ತಿಲ್ಲ. ಇದೀಗ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾದ ಅಡ್ವಾನ್ಸ್…

Read More

ಸಾಯಿ ಪಲ್ಲವಿ ಮೊದಲ ಹಿಂದಿ ಸಿನಿಮಾಕ್ಕೆ ಆಮಿರ್ ಖಾನ್ ಅಡ್ಡಗಾಲು? – Kannada News | Sai Pallavi’s debut Hindi movie release delayed due to Aamir Khan

ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತದ ಬಲು ಜನಪ್ರಿಯ ನಟಿ. ‘ಪುಷ್ಪ’ ನಿರ್ದೇಶಕ ಸುಕುಮಾರ್ ಅವರು ಸಾಯಿ ಪಲ್ಲವಿಯನ್ನು ಪವನ್ ಕಲ್ಯಾಣ್ ಅವರಿಗೆ ಸಹ ಹೋಲಿಸಿದ್ದರು, ಅಷ್ಟು ದೊಡ್ಡ ಅಭಿಮಾನಿ ವರ್ಗವನ್ನು ಸಾಯಿ ಪಲ್ಲವಿ ಹೊಂದಿದ್ದಾರೆ. ಭಿನ್ನ ಸಿನಿಮಾಗಳ ಆಯ್ಕೆ, ಸಿನಿಮಾಗಳ ಹೊರಗೆ ಅವರ ವ್ಯಕ್ತಿತ್ವ, ನಿಲವುಗಳು ಸಾಯಿ ಪಲ್ಲವಿಗೆ ದೊಡ್ಡ ಅಭಿಮಾನಿ ವರ್ಗವನ್ನು ಸಂಪಾದಿಸಿ ಕೊಟ್ಟಿವೆ. ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ನಟಿಸಿರುವ ಸಾಯಿ ಪಲ್ಲವಿ, ಇದೀಗ ಮೊದಲ ಬಾರಿಗೆ ಹಿಂದಿಗೆ ಕಾಲಿರಿಸಿದ್ದು, ಎರಡು…

Read More

ಮುರಿಯಿತು 34 ವರ್ಷಗಳ ಸ್ನೇಹ: ಎಆರ್ ರೆಹಮಾನ್ ಕೈಬಿಟ್ಟ ಮಣಿರತ್ನಂ

ಮಣಿರತ್ನಂ ಮತ್ತು ಎಆರ್ ರೆಹಮಾನ್ (AR Rahman) ಜೋಡಿ ಭಾರತದ ಅತ್ಯುತ್ತಮ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ಜೋಡಿ. ಈ ಜೋಡಿ ನೀಡಿರುವ ಸಿನಿಮಾ ಮತ್ತು ಹಾಡುಗಳು ಮೂರು ದಶಕಗಳ ಬಳಿಕ ಈಗಲೂ ಟ್ರೆಂಡಿಂಗ್​​ನನಲ್ಲಿವೆ. ಆದರೆ ಈಗ ಬರೋಬ್ಬರಿ 34 ವರ್ಷಗಳ ಬಳಿಕ ಈ ಸ್ನೇಹ ಮುರಿದಂತಿದೆ. 1992ರ ‘ರೋಜಾ’ ಸಿನಿಮಾದಿಂದ ಆರಂಭಿಸಿ ಇತ್ತೀಚೆಗಿನ ‘ಥಗ್ ಲೈಫ್’ ಸಿನಿಮಾದ ವರೆಗೆ ಮಣಿರತ್ನಂ ಅವರ ಎಲ್ಲ ಸಿನಿಮಾಗಳಿಗೆ ಎಆರ್ ರೆಹಮಾನ್ ಸಂಗೀತ ನೀಡಿದ್ದರು. ಆದರೆ ಇದೀಗ ಮಣಿರತ್ನಂ ತಮ್ಮ…

Read More

‘ಪುಷ್ಪ 2’ ದಾಖಲೆ ಅಳಿಸಿ ಹಾಕಿದ ‘ಧುರಂಧರ್’; ರಣವೀರ್ ಸಿಂಗ್ ಈಗ ಬಾಕ್ಸ್ ಆಫೀಸ್ ಸುಲ್ತಾನ – Kannada News | Ranveer Singh starrer Dhurandhar movie beats Pushpa 2 Hindi Collection

ಸೂಪರ್ ಹಿಟ್ ‘ಧುರಂಧರ್’ (Dhurandhar) ಸಿನಿಮಾ ಈಗಲೂ ಅನೇಕ ಕಡೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಿಂದ ರಣವೀರ್ ಸಿಂಗ್ (Ranveer Singh) ಅವರು ಬಾಕ್ಸ್ ಆಫೀಸ್ ಸುಲ್ತಾನ ಎನಿಸಿಕೊಂಡಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ಈ ಚಿತ್ರ ಪಾತ್ರವಾಗಿದೆ. ಇಷ್ಟು ದಿನಗಳ ಕಾಲ ‘ಪುಷ್ಪ 2’ (Pushpa 2) ಸಿನಿಮಾ ಹೊಂದಿದ್ದ ದಾಖಲೆಯನ್ನು ಈಗ ‘ಧುರಂಧರ್’ ಸಿನಿಮಾ ಅಳಿಸಿ ಹಾಕಿದೆ. ಭಾರತದಲ್ಲಿ ಈ ಚಿತ್ರದ ಕಲೆಕ್ಷನ್ 831…

Read More

ಮಹಿಳೆಗೆ ಇಷ್ಟವಿಲ್ಲದಿದ್ದರೆ 30ನೇ ವಾರದಲ್ಲೂ ಗರ್ಭಪಾತ ಮಾಡಿಸಿಕೊಳ್ಳಬಹುದು; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು – Kannada News | Cannot force a woman to become Mother Supreme Court allows minor to terminate 30 week pregnancy

ನವದೆಹಲಿ, ಫೆಬ್ರವರಿ 6: ಒಂದುವೇಳೆ ಗರ್ಭಿಣಿಗೆ ಏಳೂವರೆ ತಿಂಗಳು (30 ವಾರ) ತುಂಬಿದ ಬಳಿಕವೂ ಆ ಮಗು ಬೇಡವೆನಿಸಿದರೆ ಗರ್ಭಪಾತ (Abortion) ಮಾಡಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಭಾರತದಲ್ಲಿ 5 ತಿಂಗಳವರೆಗೆ ಮಾತ್ರ ಗರ್ಭಪಾತಕ್ಕೆ ಅನುಮತಿಯಿದೆ. ಆದರೆ, ಇದೀಗ ವಿಶೇಷ ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಹುಟ್ಟದೇ ಇರುವ ಮಗುವಿನ ಹಕ್ಕಿಗಿಂತಲೂ ತಾಯಿಯ ಹಕ್ಕು ಬಹಳ ಮುಖ್ಯ ಎಂದು ಹೇಳಿರುವ ನ್ಯಾಯಪೀಠ ಮಹಿಳೆಯನ್ನು ತಾಯಿಯಾಗಲು…

Read More

Hardik Pandya: ನನಗೆ ಧೈರ್ಯ ಸಿಕ್ಕಿದೆ, ತಂಡದಲ್ಲಿ ಬದಲಾವಣೆ ಮಾಡ್ತೀನಿ ಅಷ್ಟೇ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡ ಸೋಲನುಭವಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್​ಗಳಲ್ಲಿ 240 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 222 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಹಾರ್ದಿಕ್ ಪಾಂಡ್ಯ ಪಡೆ 18 ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್…

Read More

Video: ಕಾರಿನಲ್ಲೇ ಸುಟ್ಟು ಹೋದ ಧಾರವಾಡದ ಮಾಜಿ ಶಾಸಕನ ಪುತ್ರ

ಧಾರವಾಡ, ಮಾ.24: ಜಿಲ್ಲೆಯ ರಾಮಾಪುರ ಅರಣ್ಯ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಅವರ ಶವವು ಕಾರಿನಲ್ಲೇ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆಯು ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದು, ಇದು ಪೂರ್ವನಿಯೋಜಿತ ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಕಾರಿಗೆ…

Read More

ಮತ್ತೆ ಬರುತ್ತಿದೆ ‘ಅಗ್ನಿಸಾಕ್ಷಿ’ ಧಾರಾವಾಹಿ: ಶಮಂತ್ ಗೌಡ ಹೇಳಿದ್ದೇನು?

ಈ ಹಿಂದೆ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ (Serial) ನಟಿಸಿದ್ದ ಮಾಜಿ ಬಿಗ್​​ಬಾಸ್ ಸ್ಪರ್ಧಿ ಶಮಂತ್ ಇದೀಗ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಪ್ರಸಾರವಾಗಿದ್ದ ‘ಅಗ್ನಿಸಾಕ್ಷಿ’ ಧಾರಾವಾಹಿ ಸಖತ್ ಹಿಟ್ ಆಗಿತ್ತು, ಲಕ್ಷಾಂತರ ಮನೆ ಮಂದಿಯ ಮನ ಗೆದ್ದಿತ್ತು. ಇದೀಗ ಅದೇ ಹೆಸರಿನಲ್ಲೇ ಧಾರಾವಾಹಿ ಮತ್ತೆ ಬರುತ್ತಿದೆ. ಈ ಬಾರಿ ಒಬ್ಬ ಅಹಂಕಾರಿ ನಾಯಕ ಹಾಗೂ ಸ್ವಾಭಿಮಾನಿ ನಾಯಕಿಯ ನಡುವೆ ನಡೆಯುವ ಕತೆಯನ್ನು ಒಳಗೊಂಡಿದೆ. ಶಮಂತ್, ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಧಾರಾವಾಹಿ ಬಗ್ಗೆ ಅವರೇನು ಹೇಳಿದರು?…

Read More

Ugadi Bhavishya 2026: ಯುಗಾದಿ ವರ್ಷ ಭವಿಷ್ಯ; ಈ ವರ್ಷ ವೃಷಭ ರಾಶಿಯವರಿಗೆ ಹೇಗಿರಲಿದೆ?

ಯುಗಾದಿ ಭವಿಷ್ಯ 2026 ರ ಪ್ರಕಾರ, ವೃಷಭ ರಾಶಿಯವರಿಗೆ ಈ ವರ್ಷ ಸ್ಥಿರತೆ ಮತ್ತು ಬೆಳವಣಿಗೆಯನ್ನು ತರಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ ವೇದಬ್ರಹ್ಮ ಶ್ರೀ ಕೆ. ವೆಂಕಟೇಶ್ ಶರ್ಮಾ ಗುರೂಜಿ ಅವರು ವಿವರವಾದ ಭವಿಷ್ಯ ನುಡಿದಿದ್ದಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಯಶಸ್ಸು ನಿಧಾನವಾಗಿ ಆದರೆ ಖಚಿತವಾಗಿ ಸಿಗಲಿದೆ. ಹಣಕಾಸು ಉಳಿತಾಯಕ್ಕೆ ಇದು ಉತ್ತಮ ಸಮಯವಾಗಿದ್ದು, ಉತ್ತಮ ಸಂಪಾದನೆ ಇರುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿ ನೆಲಸಲಿದೆ. ತಂದೆ-ತಾಯಿಗಳ ಸೇವೆ ಮಾಡಿದಷ್ಟು ಪುಣ್ಯ ಈ ರಾಶಿಯವರಿಗೆ…

Read More