Headlines

ಚಿಪ್ಸ್ ಪ್ಯಾಕೆಟ್​​ನಲ್ಲಿ ಗಾಳಿ ತುಂಬಿಸಿರುವುದು ಯಾಕೆ ಗೊತ್ತಾ? – Kannada News | This is the reason behind the air filled chips packets

ಚಿಪ್ಸ್, ಲೇಸ್ ಅಂದರೆ ಸಾಕು ಪುಟಾಣಿ ಮಕ್ಕಳ ಕಿವಿ ನೆಟ್ಟಗಾಗುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಾಯಿ ಚಪ್ಪರಿಸಿ ಸವಿಯುವ ಈ ಟಿಪ್ಸ್ ಪ್ಯಾಕೆಟ್​​ನಲ್ಲಿ (chips packet) ಈ ತಿನಿಸಿನ ಪ್ರಮಾಣ ಕಡಿಮೆಯಿರುತ್ತದೆ. ಆದರೆ ಈ ಪ್ಯಾಕೆಟ್‌ಗೆ ಗಾಳಿ ತುಂಬಿಸಿರುತ್ತಾರೆ. ಮಕ್ಕಳನ್ನು ಮರುಳು ಮಾಡಲು ಗಾಳಿ ತುಂಬಿಸಿಡುತ್ತಾರೆ ಎಂದು ದೂರುವ ಮುನ್ನ ನೀವು ಇದರ ಹಿಂದಿನ ಈ ಕಾರಣವನ್ನು ತಿಳಿದುಕೊಳ್ಳುವುದು ಒಳ್ಳೆಯದು. ಪ್ಯಾಕೆಟ್‌ನಲ್ಲಿ ಗಾಳಿ ತುಂಬಿರಲು ಕಾರಣವಿದು ಚಿಪ್ಸ್​ ಅಥವಾ ಲೇಸ್ ಪ್ಯಾಕೆಟ್​​ನಲ್ಲಿ ಸಾರಜನಕವನ್ನು ತುಂಬಿರುತ್ತಾರೆ. ಆಮ್ಲಜನಕವನ್ನು ತುಂಬಿದರೆ…

Read More

SSLC ತೃತೀಯ ಭಾಷೆಗೆ ಗ್ರೇಡ್​​ ನಿರ್ಧಾರ ಹೇಗೆ?: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಕರಡು ಅಧಿಸೂಚನೆ ಪ್ರಕಟ

ಬೆಂಗಳೂರು, ಏಪ್ರಿಲ್​​ 12: ಎಸ್​​ಎಸ್​​ಎಲ್​​ಸಿ ಪರೀಕ್ಷೆಯ ತೃತೀಯ ಭಾಷೆಗೆ ಅಂಕಗಳನ್ನು ನೀಡುವ ಬದಲು ಗ್ರೇಡ್​​ ನೀಡುವ ನಿರ್ಧಾರ ಸಂಬಂಧ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಇದೇ ವಿಚಾರ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆ ಮೌಲ್ಯಮಾಪನ ಕುರಿತ ಕರಡು ಅಧಿಸೂಚನೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡಲಾಗುತ್ತದೆ ಹಾಗೂ ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಪರಿಗಣಿಸಲಲು ನಿರ್ಧರಿಸಿರುವ ಬಗ್ಗೆ ಇತ್ತೀಚೆಗೆ…

Read More

Holi Vastu Tips: ಹೋಳಿ ಹಬ್ಬಕ್ಕೂ ಮುನ್ನ ಮನೆಯಿಂದ ಈ ವಸ್ತುಗಳನ್ನು ಹೊರ ಹಾಕಿ – Kannada News | Holi Vastu Tips: Clear Negativity, Attract Wealth and Luck for New Beginnings

ಹೋಳಿ ಹಬ್ಬವು ಬಣ್ಣಗಳ ಸಂಭ್ರಮ ಮಾತ್ರವಲ್ಲ, ಅದು ಬದುಕಿನಲ್ಲಿ ಹೊಸ ಚೈತನ್ಯವನ್ನು ತುಂಬುವ ಮಹತ್ವದ ಪರಿವರ್ತನೆಯ ಸಮಯವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಪವಿತ್ರ ಹಬ್ಬದ ಸಂದರ್ಭದಲ್ಲಿ ಮನೆಯನ್ನು ಕೇವಲ ಹೊರಗಿನಿಂದ ಸ್ವಚ್ಛಗೊಳಿಸುವುದಷ್ಟೇ ಅಲ್ಲದೆ, ಮನೆಯೊಳಗೆ ಅಡಗಿರುವ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕುವುದು ಅತ್ಯಗತ್ಯ. ಮನೆಯಲ್ಲಿ ಸಂಗ್ರಹವಾಗಿರುವ ಅನಗತ್ಯ ವಸ್ತುಗಳು ನಮ್ಮ ಏಕಾಗ್ರತೆಯನ್ನು ಕುಗ್ಗಿಸಿ, ಆರ್ಥಿಕ ಪ್ರಗತಿಗೆ ಅಡ್ಡಿಯಾಗಬಹುದು. ಉದಾಹರಣೆಗೆ, ಮನೆಯಲ್ಲಿ ಒಣಗಿದ ಅಥವಾ ಸತ್ತ ಸಸ್ಯಗಳು ಇರುವುದು ದುಃಖ ಮತ್ತು ಕುಂಠಿತ ಬೆಳವಣಿಗೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇವುಗಳ…

Read More

ಧನುಷ್ ಜತೆ ಡೇಟಿಂಗ್ ಗಾಸಿಪ್: ಪ್ರೀತಿ ಬಗ್ಗೆ ಮನಸಾರೆ ಮಾತನಾಡಿದ ಮೃಣಾಲ್ ಠಾಕೂರ್ – Kannada News | Mrunal Thakur talks about love amid gossip of her dating with Dhanush

ನಟಿ ಮೃಣಾಲ್ ಠಾಕೂರ್ ಅವರು ನಟ ಧನುಷ್ (Dhanush) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಇದೆ. ಸದ್ಯಕ್ಕಂತೂ ಈ ಬಗ್ಗೆ ಅವರಿಬ್ಬರು ಸಾವರ್ಜನಿಕವಾಗಿ ಮಾತನಾಡಿಲ್ಲ. ಆದರೂ ಹಲವು ಅಂತೆ-ಕಂತೆಗಳು ಕೇಳಿಬರುತ್ತಿವೆ. ಬಾಲಿವುಡ್​​ನಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಡಿಮ್ಯಾಂಡ್ ಹೊಂದಿರುವ ಮೃಣಾಲ್ ಠಾಕೂರ್ (Mrunal Thakur) ಅವರು ಈಗ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಎಲ್ಲರಿಗೂ ಪ್ರೀತಿ ಆಗಬೇಕು ಎಂದು ಅವರು ಹೇಳಿದ್ದಾರೆ. ಅಂದಹಾಗೆ, ಅವರು ಈ ವಿಷಯ ಮಾತನಾಡಿರುವುದು ಹೊಸ ಹಾಡಿನ ಪ್ರಚಾರದ ವೇಳೆ. ಮೃಣಾಲ್ ಠಾಕೂರ್…

Read More

ಹೆತ್ತ ಮಗನನ್ನೇ ಕೊಂದ ತಂದೆ: ಕೊಲೆ ರಹಸ್ಯ ಭೇದಿಸಿದ್ದು ಮೃತನ ಸ್ನೇಹಿತರು! – Kannada News | Chikkodi Man Kills Alcoholic Son, Friends Expose Chilling Murder Plan

ಬೆಳಗಾವಿ, ಜನವರಿ 08: ಕುಡಿದು ಬಂದು ಕಿರಿ ಕಿರಿ ಮಾಡುತ್ತಾನೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗನಿಗೆ ಚಟ್ಟ ಕಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಇಂದಿರಾನಗರದಲ್ಲಿ ನಡೆದಿದೆ. ಕಿರಣ್​ ಆಲೂರೆ (31) ಮೃತ ಯುವಕನಾಗಿದ್ದು, ಆರೋಪಿ ನಿಜಗುಣಿ ಮತ್ತು ಉಸ್ಮಾನ್​​ ಮುಲ್ಲಾ ಎಂಬವರನ್ನು ಪ್ರಕರಣ ಸಂಬಂಧ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಶೇಷ ಅಂದ್ರೆ ಕಿರಣ್​​ ಕೊಲೆ ರಹಸ್ಯವನ್ನು ಇಲ್ಲಿ ಭೇದಿಸಿರೋದು ಆತನ ಸ್ನೇಹಿತರು ಅನ್ನೋದು ಗಮನಾರ್ಹ. ಮದ್ಯದ ದಾಸನಾಗಿದ್ದ ಮಗ ಕಿರಣ್​​ನ…

Read More

Viral: ಸಂಬಳ 1.7 ಲಕ್ಷ ರೂ ಇದ್ರೂ, ಉಳಿತಾಯ 2,520 ರೂ; ನೆಟ್ಟಿಗರಲ್ಲಿ ಸಲಹೆ ಕೋರಿದ ದಂಪತಿ – Kannada News

ಈಗಿನ ದುಬಾರಿ ದುನಿಯಾದಲ್ಲಿ ನಗರದಲ್ಲಿ ಬದುಕು ಕಷ್ಟಕರ. ದುಡಿದ ಹಣವನ್ನೆಲ್ಲವೂ ಮನೆ ಖರ್ಚಿಗೆ ಸಾಕಾಗುತ್ತದೆ. ದಂಪತಿಯಿಬ್ಬರೂ ಹೊರಗೆ ಹೋಗಿ ದುಡಿಯುತ್ತಿದ್ದರೂ ಹಣಕಾಸಿನ ನಿರ್ವಹಣೆ (Financial management) ಕಷ್ಟಕರವಾಗಿರುತ್ತದೆ. ಈ ದಂಪತಿಯದ್ದು ಅದೇ ಪರಿಸ್ಥಿತಿ. 30ರ ಹರೆಯದ ದಂಪತಿಯ ಒಟ್ಟು ಮಾಸಿಕ ಆದಾಯ 1.7 ಲಕ್ಷ ರೂ ಆಗಿದ್ರೂ, ಪ್ರತಿ ತಿಂಗಳ ಕೊನೆಯಲ್ಲಿ ಕೇವಲ 2,520ರೂ ಉಳಿತಾಯ ಮಾಡುತ್ತಾರಂತೆ. ಆರ್ಥಿಕ ಸಲಹೆ ಕೋರಿ ಮಾಡಿದ ಪೋಸ್ಟ್ ರೆಡ್ಡಿಟ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. personalfinanceindia ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ….

Read More

ಲವರ್​ಗಾಗಿ ಪತಿಗೆ ಚಟ್ಟಕಟ್ಟಿದ್ದ ಪತ್ನಿ ಪೊಲೀಸ್ ಬಲೆಗೆ: ಅಪಘಾತವೆಂದು ಬಿಂಬಿಸಿ ಗಂಡನ ಶವದೆದುರು ಹೈಡ್ರಾಮಾ ಮಾಡಿದ್ದ ಮಹಿಳೆ

ದೇವನಹಳ್ಳಿ, ಫೆಬ್ರವರಿ 5: ಪ್ರಿಯಕರನಿಗಾಗಿ ಹೆಂಡತಿಯೇ ಗಂಡನನ್ನು ಹತ್ಯೆ ಮಾಡಿ ಅಪಘಾತವೆಂದು ಬಿಂಬಿಸಿ ನಾಟಕವಾಡಿದ್ದ ಪ್ರಕರಣವನ್ನು ಸೂಲಿಬೆಲೆ ಪೊಲೀಸರು ಬಯಲಿಗೆಳೆದಿದ್ದಾರೆ. ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆ ಹೊಸಕೋಟೆ ತಾಲೂಕಿನ ಸಿದ್ದೇನಹಳ್ಳಿ ಗ್ರಾಮದಲ್ಲಿ ಜನವರಿ 24ರಂದು ನಡೆದ ಕೊಲೆ ರಹಸ್ಯ ಕೊನೆಗೂ ಬಯಲಾಗಿದ್ದು, ಮಹಿಳೆ ಪುಷ್ಪಾ ಮತ್ತು ಆಕೆಯ ಪ್ರಿಯಕರ ದೇವರಾಜ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಲವರ್ ದೇವರಾಜ್​ಗಾಗಿ ಪುಷ್ಪಾ ತನ್ನ ಪತಿ ಅಶೋಕ್ (40) ಅನ್ನು ಸಂಚು ರೂಪಿಸಿ ಕೊಲೆ ಮಾಡಿದ್ದಳು. ಇದೀಗ ಆಘಾತಕಾರಿ ರಹಸ್ಯ ಬಯಲಾಗಿದ್ದು,…

Read More

ಚರ್ಮದ ಮೇಲೆ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಅವು ಮಧುಮೇಹ ಬರುವ ಮುನ್ಸೂಚನೆಯಾಗಿರಬಹುದು – Kannada News | Diabetes Symptoms on Skin: What You Need to Know

ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ಸಂಬಂಧಿತ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವುದನ್ನು ನೀವು ನೋಡಿರಬಹುದು. ಮೊದಲೆಲ್ಲಾ ಈ ರೋಗ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತು ಆದರೆ ಈಗ ಹಾಗಲ್ಲ, ಸಣ್ಣ ವಯಸ್ಸಿನವರಲ್ಲಿಯೇ ಈ ಸಮಸ್ಯೆ ಕಂಡುಬರುತ್ತಿದೆ. ಮಧುಮೇಹ ಸಾಮಾನ್ಯವಾಗಿ ಅನಿಯಂತ್ರಿತ ರಕ್ತದಲ್ಲಿನ ಸಕ್ಕರೆ ಮಟ್ಟಕ್ಕೆ ಸಂಬಂಧಿಸಿದೆಯಾದರೂ ಇದರ ಪರಿಣಾಮ ಚರ್ಮ ಸೇರಿದಂತೆ ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟ ದೀರ್ಘಕಾಲದವರೆಗೆ ಹೆಚ್ಚಾಗಿದ್ದರೆ, ಅದು ದೇಹದಲ್ಲಿನ ರಕ್ತದ ಹರಿವು ಮತ್ತು ತೇವಾಂಶದ ಸಮತೋಲನದ ಮೇಲೆ ಪರಿಣಾಮ…

Read More

ರಾಜಮೌಳಿಯ ಐಮ್ಯಾಕ್ಸ್ ಥಿಯೇಟರ್ ಕನಸು ನನಸು ಮಾಡಿದ ನಟ ಮಹೇಶ್ ಬಾಬು

‘ಬಾಹುಬಲಿ’ ಮತ್ತು ‘ಆರ್‌ಆರ್‌ಆರ್’ ಖ್ಯಾತಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಅವರ ಬಹುದಿನಗಳ ಹಂಬಲವೊಂದು ಕೊನೆಗೂ ಈಡೇರುತ್ತಿದೆ. ತಮ್ಮ ಬಹುನಿರೀಕ್ಷಿತ ‘ವಾರಣಾಸಿ’ (Varanasi) ಚಿತ್ರದ ಪ್ರಚಾರದ ವೇಳೆ ಹೈದರಾಬಾದ್‌ನಲ್ಲಿ ಐಮ್ಯಾಕ್ಸ್ (IMAX) ಸ್ಕ್ರೀನ್ ಇಲ್ಲದಿರುವ ಬಗ್ಗೆ ರಾಜಮೌಳಿ ಬಹಿರಂಗವಾಗಿ ಬೇಸರ ಹೊರಹಾಕಿದ್ದರು. ದೊಡ್ಡ ಬಜೆಟ್​ನ ಮತ್ತು ದೃಶ್ಯ ವೈಭವದ ಸಿನಿಮಾಗಳನ್ನು ನೀಡುವ ಟಾಲಿವುಡ್‌ನಲ್ಲೇ ಒಂದು ಪ್ರೀಮಿಯಂ ಲಾರ್ಜ್-ಫಾರ್ಮ್ಯಾಟ್ ಥಿಯೇಟರ್ ಇಲ್ಲದಿರುವುದು ಆಶ್ಚರ್ಯ ತಂದಿದೆ ಎಂದು ಅವರು ಹೇಳಿದ್ದರು. ಆದರೆ ಆ ಕೊರತೆಯನ್ನು ಮಹೇಶ್ ಬಾಬು ನೀಗಿಸಿದ್ದಾರೆ….

Read More

ಮಂಗಳೂರು ನಗರಕ್ಕೇ ಎಂಟ್ರಿಕೊಟ್ಟ ಚಿರತೆ: ಕದ್ರಿ ಬಳಿ ಚಿರತೆ ಓಡಾಟದ ವಿಡಿಯೋ ವೈರಲ್

ಮಂಗಳೂರು, ಫೆಬ್ರವರಿ 25: ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಚಿರತೆ ಕಾಣಿಸಿಕೊಂಡ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಇದೀಗ ಮಂಗಳೂರು ನಗರಕ್ಕೇ ಚಿರತೆ ಎಂಟ್ರಿ ಕೊಟ್ಟಿದೆ. ಮಂಗಳೂರಿನ ಕದ್ರಿ ಡಾಕ್ಟರ್ಸ್ ಕಾಲೊನಿಯಲ್ಲಿ ಮಧ್ಯರಾತ್ರಿ ಚಿರತೆ ಒಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಎರಡು ವರ್ಷದ ಹಿಂದೆ ಇದೇ ಜಾಗದಲ್ಲಿ ಕಾಡುಕೋಣ ಪತ್ತೆಯಾಗಿತ್ತು. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More