ತೊಂದರೆ ಇದ್ದಿದ್ದು ಬಲಗೈಯಲ್ಲಿ, ಬಾಲಕನ ಎಡಗೈಗೆ ಶಸ್ತ್ರ ಚಿಕಿತ್ಸೆ ಮಾಡಿ ಬೆರಳು ಕತ್ತರಿಸಿದ ವೈದ್ಯರು
ಮುಂಬೈ, ಮಾರ್ಚ್ 30: ಸಮಸ್ಯೆ ಇರುವ ಬಲಗೈಗೆ ಬಿಟ್ಟು ವೈದ್ಯರು ಬಾಲಕನ ಎಡಗೈಗೆ ಶಸ್ತ್ರ ಚಿಕಿತ್ಸೆ(Operation) ಮಾಡಿದ್ದಲ್ಲದೆ, ಬೆರಳನ್ನು ಕೂಡ ಕತ್ತರಿಸಿರುವ ಘಟನೆ ಮಹಾರಾಷ್ಟ್ರದ ಪಂಢರಪುರದಲ್ಲಿ ನಡೆದಿದೆ. ಸಾಮಾನ್ಯವಾಗಿ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವಾಗ ರೋಗಿಯ ಸಮಸ್ಯೆಯ ಬಗ್ಗೆ ಇದ್ದ ಫೈಲ್ ಅನ್ನು ಒಮ್ಮೆ ಓದಿದ ಬಳಿಕವೇ ಆಪರೇಷನ್ ಮಾಡುತ್ತಾರೆ. ಆದರೆ ಈ ವೈದ್ಯರು ಹಾಗೆ ಮಾಡಲೇ ಇಲ್ಲ. ಬಾಲಕ ಪೋಸ್ಟಾಕ್ಸಿಯಲ್ ಪಾಲಿಡಾಕ್ಟಿಲಿಯಿಂದ ಬಳಲುತ್ತಿತ್ತು, ಎರಡೂ ಕೈಗಳಲ್ಲಿ ಹೆಚ್ಚುವರಿ ಕಿರುಬೆರಳುಗಳಿದ್ದವು, ಬಲಗೈಯ ಒಂದು ಬೆರಳಿನಲ್ಲಿ ಬಿಗಿತ, ನೋವು…