ರೋಹಿತ್ ಶರ್ಮಾರ ‘ದುರಾದೃಷ್ಟ’ಕ್ಕೆ ಬ್ರೇಕ್ ಹಾಕಿದ ಹಾರ್ದಿಕ್ ಪಾಂಡ್ಯ
IPL 2026: ಬರೋಬ್ಬರಿ 13 ವರ್ಷಗಳ ಬಳಿಕ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ನಲ್ಲಿ ಮೊದಲ ಮ್ಯಾಚ್ ಗೆದ್ದಿದೆ. ಅಂದರೆ ಕಳೆದ ಹದಿಮೂರು ವರ್ಷಗಳಲ್ಲಿ ಮುಂಬೈ ಪಡೆ ತನ್ನ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿರಲಿಲ್ಲ. ಇಂತಹದೊಂದು ಅನ್ಲಕ್ಕಿ ಓಪನಿಂಗ್ಗೆ ನಾಂದಿಯಾಡಿದ್ದು ಮಾಜಿ ನಾಯಕ ರೋಹಿತ್ ಶರ್ಮಾ ಎಂಬುದು ವಿಶೇಷ. ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಬಾರಿ ಮೊದಲ ಮ್ಯಾಚ್ ಗೆದ್ದಿದ್ದು 2012 ರಲ್ಲಿ. ಅದು ಸಹ ಹರ್ಭಜನ್ ಸಿಂಗ್ ನಾಯಕತ್ವದಲ್ಲಿ. ಇದಾದ ಬಳಿಕ 2013 ರಲ್ಲಿ ರೋಹಿತ್ ಶರ್ಮಾ…