Headlines

ಅಣ್ಣಾಮಲೈ ನಮ್ಮ ಪಕ್ಷದ ಕಾರ್ಯಕರ್ತರ ಬ್ರೈನ್ ವಾಶ್ ಮಾಡುತ್ತಿದ್ದಾರೆ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಆರೋಪ – Kannada News

ಚೆನ್ನೈ, ಜೂನ್ 6: ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಮಾಜಿ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ (Annamalai) ಅವರು ಬಿಜೆಪಿಗೆ ರಾಜೀನಾಮೆ ನೀಡಿದ ಮರುದಿನವೇ ತಮಿಳುನಾಡು ಬಿಜೆಪಿ ನೂತನ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ತೀವ್ರ ಆಪಾದನೆ ಮಾಡಿದ್ದಾರೆ. ಅಣ್ಣಾಮಲೈ ಬಿಜೆಪಿಯ ಕೆಲವು ಸದಸ್ಯರ ಬ್ರೈನ್‌ವಾಶ್ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಮಾಜಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ರಾಜೀನಾಮೆಯ ನಂತರ ಯಾರೊಬ್ಬರಿಗೂ ಪಕ್ಷ ತೊರೆಯಲು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೈನಾರ್…

Read More

ಬಿಸಿಲಿನ ತಾಪಕ್ಕೆ ‘ಬೆಂದಕಾಳೂರು’ ವಿಲ ವಿಲ! ಮಣ್ಣಿನ ಮಡಿಕೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಬೆಂಗಳೂರು, ಮಾರ್ಚ್​ 09: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದೆಲ್ಲೆಡೆ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರು ಬಿಸಿಲಿನ ತಾಪದಿಂದ ತತ್ತರಿಸಿ ಹೋಗಿದ್ದಾರೆ. ಫೆಬ್ರವರಿಯಿಂದಲೇ ಆರಂಭವಾದ ಬೇಸಿಗೆಯ ತಾಪ ಇನ್ನೂ ಕಡಿಮೆಯಾಗದೇ ಇರುವ ಹಿನ್ನೆಲೆ, ತಂಪಿಗಾಗಿ ಜನರು ಮಣ್ಣಿನ ಮಡಿಕೆ ಮತ್ತು ಎಳನೀರಿನ ಮೊರೆ ಹೋಗುತ್ತಿರುವ ದೃಶ್ಯಗಳು ಮಾರುಕಟ್ಟೆಗಳಲ್ಲಿ ಕಂಡು ಬರುತ್ತಿವೆ. ಮಣ್ಣಿನ ಮಡಿಕೆ, ಎಳನೀರಿಗೆ ಹೆಚ್ಚಿನ ಬೇಡಿಕೆ ಬೇಸಿಗೆ ಕಾಲ ಆರಂಭವಾದಾಗಲೇ ಬೆಂಗಳೂರಿನ ಜನರು ಮಣ್ಣಿನ ಮಡಿಕೆ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಾರೆ….

Read More

ಒಂದೇ ಒಂದು ರನ್​ನಿಂದ ಸಾರ್ವಕಾಲಿಕ ದಾಖಲೆ ತಪ್ಪಿಸಿಕೊಂಡ ಬಾಬರ್ ಆಝಂ – Kannada News | Babar Azam one run short of breaking PSL record

ಇದಾಗ್ಯೂ ಈ ಬಾರಿ ಬಾರಿಸಿದ 588 ರನ್​ಗಳೊಂದಿಗೆ ಬಾಬರ್ ಆಝಂ ಟಿ20 ಕ್ರಿಕೆಟ್​ನಲ್ಲಿ 12 ಸಾವಿರ ರನ್​ಗಳನ್ನು ಪೂರೈಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಇನಿಂಗ್ಸ್​ಗಳ ಮೂಲಕ 12000 ರನ್​ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಗೇಲ್ 343 ಇನಿಂಗ್ಸ್​ಗಳ ಮೂಲಕ 12 ಸಾವಿರ ರನ್​ ಪೂರೈಸಿದ್ದರೆ, ಬಾಬರ್ ಆಝಂ 338 ಇನಿಂಗ್ಸ್​ಗಳ ಮೂಲಕ ಈ ಸಾಧನೆ ಮಾಡಿದ್ದಾರೆ. Source link

Read More

ಕೊಟ್ಟ ಮಾತು ಉಳಿಸಿಕೊಳ್ತೇವೆ: ವಿಧಾನಸಭೆಯಲ್ಲಿ ವಿಜಯ್ ಮೊದಲ ಭಾಷಣ – Kannada News | Thalapathy Vijay first speech at Tamil Nadu assembly

ದಳಪತಿ ವಿಜಯ್ (Thalapathy Vijay) ಸಿಎಂ ಆಗಿ ಇತ್ತೀಚೆಗಷ್ಟೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಇಂದು (ಮೇ 15) ಮೊದಲ ವಿಧಾನಸಭೆ ಅಧಿವೇಶದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲ ಶಾಸಕರು ಇಂದು ಸ್ಪೀಕರ್ ಎದುರು ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ವಿಜಯ್ ಅವರು ಸದನವನ್ನು ಉದ್ದೇಶಿಸಿ ಇದೇ ಮೊದಲ ಬಾರಿಗೆ ಭಾಷಣ ಮಾಡಿದ್ದಾರೆ. ತಮ್ಮ ಭಾಷಣದಲ್ಲಿ ಅವರು ತಾವು ಚುನಾವಣೆಗೆ ಮುಂಚೆ ಕೊಟ್ಟಿದ್ದ ಮಾತುಗಳನ್ನು ಉಳಿಸಿಕೊಳ್ಳಲಿದ್ದೇವೆ ಎಂದು ಸಹ ಹೇಳಿದ್ದಾರೆ. ವಿಡಿಯೋ ನೋಡಿ.. ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…

Read More

ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ – Kannada News | PM Narendra Modi Arrives in Melbourne for Australia Visit

ಮೆಲ್ಬೋರ್ನ್, ಜುಲೈ 8: ಭಾರತದ ಪ್ರಧಾನಿ ಮೋದಿ (PM Modi) 3 ರಾಷ್ಟ್ರಗಳ ಪ್ರವಾಸಕ್ಕಾಗಿ ಇಂಡೋನೇಷ್ಯಾಗೆ ತೆರಳಿದ್ದರು. ಅಲ್ಲಿನ ಪ್ರವಾಸ ಮುಗಿಸಿ ಆಸ್ಟ್ರೇಲಿಯಾಗೆ ತೆರಳಿರುವ ಪ್ರಧಾನಿ ಮೋದಿ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಮಂತ್ರಿಯವರ ಪರವಾಗಿ ಅಲ್ಲಿನ ವಸತಿ ಮತ್ತು ನಗರಾಭಿವೃದ್ಧಿ ಸಚಿವೆ ಕ್ಲೇರ್ ಒ’ನೀಲ್ ಹಾಗೂ ಆಸ್ಟ್ರೇಲಿಯಾ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಪ್ರಧಾನಿ ಮೋದಿ ಅವರ ಆಗಮನದಿಂದ ಮೆಲ್ಬೋರ್ನ್‌ನಲ್ಲಿರುವ ಭಾರತೀಯ ಸಮುದಾಯದಲ್ಲಿ ಭಾರಿ…

Read More

ಬಿಸಿಎಂ ಹಾಸ್ಟೆಲ್​​​​​ನಲ್ಲಿ ಹುಡುಗ-ಹುಡುಗಿಯರಿಂದ ಬಿಂದಾಸ್ ಎಣ್ಣೆ ಪಾರ್ಟಿ, ವಿಡಿಯೋ ವೈರಲ್

ಕಲಬುರಗಿ, (ಜೂನ್ 10): ಗ್ರಾಮೀಣ ಭಾಗದ ಬಡ ಮಕ್ಕಳಿಗಾಗಿ ಅನೂಕೂಲವಾಗಲೆಂದು ಸರ್ಕಾರಗಳು ವಸತಿ ನಿಲಯಗಳನ್ನು (ಹಾಸ್ಟೆಲ್​) ನಿರ್ಮಿಸುತ್ತಿವೆ. ಆದ್ರೆ, ಕಲಬುರಗಿಯಲ್ಲಿ (Kalaburagi) ಬಿಸಿಎಂ ಮಹಿಳಾ ಹಾಸ್ಟೆಲ್ ನಲ್ಲಿ ಬಿಂದಾಸ್ ಆಗಿ ಮಧ್ಯ ಸೇವೆನೆ ಮಾಡಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ಹೌದು… ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿ ಹಾಸ್ಟೆಲ್ ನದ್ದು ಎನ್ನಲಾಗುತ್ತಿರೋ ಈ ವಿಡಿಯೋ ಭಾರೀ ವೈರಲ್ ಆಗಿದೆ. ಇನ್ನು ವಿದ್ಯಾರ್ಥಿನಿ ಬೀಯರ್ ಕುಡಿಯುತ್ತಿರೋ ದೃಶ್ಯ ವೈರಲ್ ಬೆನ್ನಲ್ಲೇ ಇದನ್ನೇ ವಾರ್ಡನ್ ಬಂಡವಾಳ ಮಾಡಿಕೊಂಡಿಕೊಂಡಿದ್ದು, ಪ್ರಕರಣ…

Read More

ಪ್ರವಾಸಿಗರ ಕಣ್ಣಿಗೆ ಬಿದ್ದ ಅಪರೂಪದ ‘ಬಿಳಿ ಜಿಂಕೆ’! – Kannada News | Rare White Deer Spotted During Safari in Ajjipura, Chamarajanagar; Video Goes Viral

ಚಾಮರಾಜನಗರ, ಮೇ 02: ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಸಫಾರಿ ಕೇಂದ್ರದಲ್ಲಿ ಪ್ರವಾಸಿಗರಿಗೆ ಅತಿ ಅಪರೂಪದ ಬಿಳಿ ಜಿಂಕೆ ದರ್ಶನ ನೀಡಿದೆ. ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ಈ ಮನಮೋಹಕ ದೃಶ್ಯ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಕಳೆದ ವಾರವಷ್ಟೇ ಇದೇ ಸಫಾರಿ ಪಾಯಿಂಟ್‌ನಲ್ಲಿ ಕಪ್ಪು ಚಿರತೆ (Black Panther) ಕಾಣಿಸಿಕೊಂಡು ಕುತೂಹಲ ಮೂಡಿಸಿತ್ತು. ಇದೀಗ 30 ಸಾವಿರದಲ್ಲೊಂದರಂತೆ ಕಾಣ ಸಿಗುವ ಹಾಲು ಬಿಳುಪಿನ ಜಿಂಕೆಯನ್ನು ಕಂಡು ಪ್ರವಾಸಿಗರು ರೋಮಾಂಚನಗೊಂಡಿದ್ದಾರೆ….

Read More

ಸಾಯಿ ಪಲ್ಲವಿ ಮೊದಲ ಹಿಂದಿ ಸಿನಿಮಾಕ್ಕೆ ಆಮಿರ್ ಖಾನ್ ಅಡ್ಡಗಾಲು? – Kannada News | Sai Pallavi’s debut Hindi movie release delayed due to Aamir Khan

ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತದ ಬಲು ಜನಪ್ರಿಯ ನಟಿ. ‘ಪುಷ್ಪ’ ನಿರ್ದೇಶಕ ಸುಕುಮಾರ್ ಅವರು ಸಾಯಿ ಪಲ್ಲವಿಯನ್ನು ಪವನ್ ಕಲ್ಯಾಣ್ ಅವರಿಗೆ ಸಹ ಹೋಲಿಸಿದ್ದರು, ಅಷ್ಟು ದೊಡ್ಡ ಅಭಿಮಾನಿ ವರ್ಗವನ್ನು ಸಾಯಿ ಪಲ್ಲವಿ ಹೊಂದಿದ್ದಾರೆ. ಭಿನ್ನ ಸಿನಿಮಾಗಳ ಆಯ್ಕೆ, ಸಿನಿಮಾಗಳ ಹೊರಗೆ ಅವರ ವ್ಯಕ್ತಿತ್ವ, ನಿಲವುಗಳು ಸಾಯಿ ಪಲ್ಲವಿಗೆ ದೊಡ್ಡ ಅಭಿಮಾನಿ ವರ್ಗವನ್ನು ಸಂಪಾದಿಸಿ ಕೊಟ್ಟಿವೆ. ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ನಟಿಸಿರುವ ಸಾಯಿ ಪಲ್ಲವಿ, ಇದೀಗ ಮೊದಲ ಬಾರಿಗೆ ಹಿಂದಿಗೆ ಕಾಲಿರಿಸಿದ್ದು, ಎರಡು…

Read More

ಬೆಂಗಳೂರು, ಮುಂಬೈನಲ್ಲಿ ರಾಜೇಶ್ ಎಕ್ಸ್ಪೋರ್ಟ್ಸ್ ಕಚೇರಿಗಳ ಮೇಲೆ ಇಡಿ ದಾಳಿ; ಮಹತ್ವದ ಸಾಕ್ಷ್ಯಗಳು ವಶಕ್ಕೆ – Kannada News | Rajesh Exports Ltd, ED raids Bangalore and Mumbai offices of REL, seize important documents

ರಾಜೇಶ್ ಎಕ್ಸ್​ಪೋರ್ಟ್ಸ್ ಕಂಪನಿಯ ಒಡೆಯ ರಾಜೇಶ್ ಮೆಹ್ತಾImage Credit source: Hemant Mishra/Mint via Getty Images ಬೆಂಗಳೂರು, ಜೂನ್ 24: ಜಾರಿ ನಿರ್ದೇಶನಾಲಯವು (ED) ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮುಂಬೈನಲ್ಲಿರುವ ರಾಜೇಶ್ ಎಕ್ಸ್‌ಪೋರ್ಟ್ಸ್‌ನ (REL- Rajesh Exports Ltd) ಒಟ್ಟು 9 ಕಚೇರಿಗಳ ಮೇಲೆ ದಾಳಿ ನಡೆಸಿದೆ. ಆಭರಣಗಳನ್ನು ರಫ್ತು ಮಾಡುವ ಸಂಸ್ಥೆಯಾದ ರಾಜೇಶ್ ಎಕ್ಸ್​ಪೋರ್ಟ್ಸ್ ಕೆಲ ಅಕ್ರಮಗಳನ್ನು ಎಸಗಿರುವುದು ತನಿಖೆಗಳಿಂದ ಬೆಳಕಿಗೆ ಬಂದಿದೆ. ವಿದೇಶದ ವಹಿವಾಟುಗಳಿಗೆ…

Read More

Horoscope Today: ಇಂದು ಈ ರಾಶಿಯವರಿಗೆ ಅನಾರೋಗ್ಯ ಚಿಂತೆ ಕಾಡಬಹುದು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 27, ಬುಧವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನವು ಪರಾಭವನಾ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋರು, ಶುಕ್ಲ ಪಕ್ಷದ ಏಕಾದಶಿ, ಹಸ್ತ ನಕ್ಷತ್ರ, ವ್ಯತಿಪಾತ ಯೋಗ ಮತ್ತು ಭದ್ರಕರಣದಿಂದ ಕೂಡಿದೆ. ಬುಧವಾರದ ಏಕಾದಶಿಯು ವಿಷ್ಣುವಿನ ಕೃಪೆಗೆ ಪಾತ್ರವಾಗಲು ಉತ್ತಮ ದಿನವಾಗಿದೆ.   Source link

Read More