ವೆನೆಜುವೆಲಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕಕ್ಕೆ ರಷ್ಯಾದ ಸಂಸದರ ಎಚ್ಚರಿಕೆ – Kannada News | Russian MP Zhuravlev warning to US after Venezuelan oil tanker seize
ನವದೆಹಲಿ, ಜನವರಿ 8: ಉತ್ತರ ಅಟ್ಲಾಂಟಿಕ್‌ನಲ್ಲಿ ಯುಎಸ್ ಪಡೆಗಳು ರಷ್ಯಾದ ಧ್ವಜ ಹೊತ್ತ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡ ನಂತರ ಇಂದು ರಷ್ಯಾದ (Russia) ಸಂಸದ ಅಲೆಕ್ಸಿ ಜುರಾವ್ಲೆವ್ ಅವರು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಾಸ್ಕೋದ ಸಮುದ್ರಗಳಲ್ಲಿ ಅಮೆರಿಕ ಕಾನೂನುಬಾಹಿರ ಕ್ರಮಗಳನ್ನು ಮುಂದುವರಿಸಿದರೆ ನಮ್ಮ ದೇಶದ ಮಿಲಿಟರಿ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ. ಹಾಗೇ, ಅಮೆರಿಕದ ಹಡಗುಗಳನ್ನೂ ಮುಳುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಿಂದೆ ಬೆಲ್ಲಾ 1 ಎಂದು ಕರೆಯಲಾಗುತ್ತಿದ್ದ ಟ್ಯಾಂಕರ್ ಮರಿನೆರಾವನ್ನು ವಶಪಡಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಜುರಾವ್ಲೆವ್, ಅಮೆರಿಕವು ನಿರ್ಭಯದಿಂದ…