ಯುವಕನ ನೃತ್ಯಕ್ಕೆ ಮರುಳಾದ ಗಜರಾಜ! ಕಾಡಾನೆಯೂ ಹೆಜ್ಜೆ ಹಾಕಿದ ಅಪರೂಪದ ದೃಶ್ಯ
ಒಡಿಶಾ, ಮಾ.27: ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಸುದ್ದಿಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಆದರೆ, ಇದರ ನಡುವೆ ಮನುಷ್ಯ ಮತ್ತು ಆನೆಯ ನಡುವಿನ ಅಚ್ಚರಿಯ ಬಾಂಧವ್ಯವನ್ನು ಸಾರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಯುವಕನೊಬ್ಬನ ನೃತ್ಯವನ್ನು ಕಂಡ ಕಾಡಾನೆಯೊಂದು, ಅಷ್ಟೇ ಪ್ರೀತಿಯಿಂದ ಪ್ರತಿಕ್ರಿಯಿಸಿ ತಾನೂ ಹೆಜ್ಜೆ ಹಾಕಿರುವ ಮನಮೋಹಕ ದೃಶ್ಯವಿದು. ಒಡಿಶಾದ ಕಿಯೋಂಜರ್ ಜಿಲ್ಲೆಯ ಚಂಪುಆ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ರಸ್ತೆಯ ಪಕ್ಕದಲ್ಲಿ ನಿಂತಿದ್ದ ಒಂಟಿ ಸಲಗವೊಂದರ…