Video: ಬಂಡೆಯ ಸಂದಿಯಲ್ಲಿ ಸಿಲುಕಿದ ಬಾಲಕನ ತಲೆ, ಕಣ್ಣೆದುರೇ ಹೆಡೆ ಎತ್ತಿ ನಿಂತ ನಾಗರಹಾವು – Kannada News | Boy Rescued After Getting Trapped in Narrow Crevice in Odisha
ನಯಾಗಢ, ಮೇ 07: ಒಡಿಶಾದ ನಯಾಗಢದಲ್ಲಿ ಜೇನುತುಪ್ಪ ತರಲು ಹೋದ ಶಿಬಾ ಪ್ರಧಾನ್ ಎಂಬ ಬಾಲಕನ ಪಾಲಿಗೆ ಕಾಡು ದುಃಸ್ವಪ್ನವಾಯಿತು. ಬಂಡೆಯ ಬಿರುಕಿನಲ್ಲಿದ್ದ ಜೇನುಗೂಡು ತೆಗೆಯಲು ಹೋದಾಗ, ಬಾಲಕನ ತಲೆ ಇಕ್ಕಟ್ಟಾದ ಸಂದಿಯಲ್ಲಿ ಸಿಲುಕಿಕೊಂಡಿತು. ಆತಂಕದ ವಿಷಯವೆಂದರೆ, ಅದೇ ಕಿರಿದಾದ ಜಾಗದಲ್ಲಿ ಬಾಲಕನ ಮುಖದ ಮುಂದೆಯೇ ಭೀಕರ ವಿಷಪೂರಿತ ಹಾವೊಂದು ಹೆಡೆ ಎತ್ತಿ ಕುಳಿತಿತ್ತು. ಅತ್ತ ಕದಲಲಾಗದೆ, ಇತ್ತ ಹಾವಿನ ಭಯದಿಂದ ಬಾಲಕ ಎಂಟು ಗಂಟೆಗಳ ಕಾಲ ಸಿಲುಕಿಯೇ ಇದ್ದ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಎರಡು…