‘ದಿ ಕೇರಳ ಸ್ಟೋರಿ 2’ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ – Kannada News | The Kerala Story 2 movie Releasing on OTT on May 8
‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ 2023 ರಲ್ಲಿ ಬಿಡುಗಡೆ ಆಗಿತ್ತು. ಕೇರಳದಲ್ಲಿ ನಡೆದ ಮತಾಂತರರ ಬಗೆಗಿನ ಸಿನಿಮಾ ಇದೆಂದು ಹೇಳಲಾದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಗೆಲುವು ಕಂಡಿತ್ತು. ಸಾಕಷ್ಟು ವಿರೋಧವೂ ಸಹ ಸಿನಿಮಾಕ್ಕೆ ವ್ಯಕ್ತವಾಗಿತ್ತು. ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆ ಆಯ್ತು. ಈ ಸಿನಿಮಾಕ್ಕೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೂ ಬಾಕ್ಸ್ ಆಫೀಸ್ನಲ್ಲಿ ತಕ್ಕ ಮಟ್ಟಿಗೆ ಉತ್ತಮ…