MI vs LSG, IPL 2026: ರೋಚಕತೆ ಸೃಷ್ಟಿಸಿದ ಇಂದಿನ ಮುಂಬೈ-ಲಕ್ನೋ ಐಪಿಎಲ್ ಪಂದ್ಯ: ಸೋತ ತಂಡ ಟೂರ್ನಿಯಿಂದ ಔಟ್ – Kannada News | MI vs LSG, IPL 2026 Today’s thrilling Match between Mumbai vs Lucknow The losing team is out of the tournament

ಬೆಂಗಳೂರು (ಮೇ. 04): ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 47 ನೇ ಪಂದ್ಯ ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಲಿದೆ. ಎರಡೂ ತಂಡಗಳು ಪ್ಲೇಆಫ್ ತಲುಪುವ ತಮ್ಮ ಮರೆಯಾಗುತ್ತಿರುವ ಆಸೆಯನ್ನು ಪುನರುಜ್ಜೀವನಗೊಳಿಸಲು ಹೋರಾಡಲಿದೆ. ಈ ಪಂದ್ಯವು ಋತುವಿನಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ತಂಡಗಳ ನಡುವೆ ನಡೆಯುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2026 ರಲ್ಲಿ 8 ಪಂದ್ಯಗಳಲ್ಲಿ 6 ರಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ…

Read More

ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡೆ – Kannada News | DK Shivakumar and KN Rajanna Meet; Watch Video

ಬೆಂಗಳೂರು, ಡಿಸೆಂಬರ್​ 20: ರಾಜ್ಯ ರಾಜಕೀಯದಲ್ಲಿ ಪಟ್ಟದಾಟ ಜೋರಾಗಿದೆ. ಈ ಮಧ್ಯೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬೆಂಗಳೂರಿನ ಖಾಸಗಿ ಅತಿಥಿ ಗೃಹದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​​ ಮತ್ತು ಮಾಜಿ ಸಚಿವ ಕೆ.ಎನ್ ರಾಜಣ್ಣ ಭೇಟಿ ಮಾಡಿದ್ದಾರೆ. ಕಾಂಗ್ರೆಸ್​ ನಾಯಕರ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಅಪೆಕ್ಸ್ ಬ್ಯಾಂಕ್ ಚುನಾವಣೆ ವಿಚಾರವಾಗಿ ಚರ್ಚೆ ಮಾಡಿರುವ ಸಾಧ್ಯತೆ ಎನ್ನಲಾಗುತ್ತಿದೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. Source link

Read More

ಮೊಹಮ್ಮದ್ ಫರ್ಮಾನ್ ಜೊತೆ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಮದುವೆ

2025ರ ಕುಂಭಮೇಳದ ಸಮಯದಲ್ಲಿ ತನ್ನ ಸೌಂದರ್ಯದಿಂದಲೇ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಭೋಸ್ಲೆ (Monalisa Bhosle) ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬುಧವಾರ (ಮಾರ್ಚ್ 11) ಸಂಜೆ ಕೇರಳದ ತಿರುವನಂತಪುರಂ ಸಮೀಪದ ದೇವಸ್ಥಾನವೊಂದರಲ್ಲಿ ನಟ ಮೊಹಮ್ಮದ್ ಫರ್ಮಾನ್ ಅವರೊಂದಿಗೆ ಮೊನಾಲಿಸಾ ವಿವಾಹ (Monalisa Bhosle Marriage) ನೆರವೇರಿದೆ. ಮೊನಾಲಿಸಾ ಮತ್ತು ಮೊಹಮ್ಮದ್ ಫರ್ಮಾನ್ (Muhammad Farman) ಅವರದ್ದು ಅಂತರ್ ಧರ್ಮೀಯ ವಿವಾಹವಾಗಿದ್ದು, ಮನೆಯವರ ವಿರೋಧದ ನಡುವೆ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ತಿರುವನಂತಪುರಂನ ಅರುಮನೂರಿನಲ್ಲಿರುವ ಮಂದಿರದಲ್ಲಿ ನಡೆದ…

Read More

ಅತ್ತ ಗೆದ್ದು ಬಿಎಸ್​​ವೈ ಭೇಟಿಯಾದ ಜೀವರಾಜ್: ಇತ್ತ ಸಿಎಂ ಭೇಟಿ ಮಾಡಿದ ರಾಜೇಗೌಡ – Kannada News | Sringeri Postal Ballots Recount: DN Jeevaraj meets BS Yediyurappa affter win; Rajegowda Meets Siddaramaiah

ಡಿ.ಎನ್. ಜೀವರಾಜ್, ಟಿ.ಡಿ. ರಾಜೇಗೌಡImage Credit source: tv9 kannada ಚಿಕ್ಕಬಳ್ಳಾಪುರ, ಮೇ 04: ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ (Sringeri Postal Ballots Recount) ಕೊನೆಗೂ ಬಿಜೆಪಿ ನಾಯಕ ಡಿ.ಎನ್. ಜೀವರಾಜ್ (MLA DN Jeevaraj)​​ ಗೆಲುವು ಸಾಧಿಸಿದ್ದಾರೆ. ಜಯಗಳಿಸಿದ ಬೆನ್ನಲ್ಲೇ ಡಿ.ಎನ್. ಜೀವರಾಜ್​​ ಇಂದು ಬೆಂಗಳೂರಿನ ಧವಳಗಿರಿಯಲ್ಲಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ಬಿಜೆಪಿ…

Read More

ಹೆಬ್ಬಾಳ ಮೇಲ್ಸೆತುವೆ ಹೊಸ ಲೂಪ್ ಓಪನ್: ಎಸ್ಟೀಮ್ ಮಾಲ್, ತುಮಕೂರು ರಸ್ತೆ ವಾಹನಗಳ ‌ಮೇಖ್ರೀ ಸರ್ಕಲ್ ಪ್ರವೇಶ ತುಂಬಾ ಸುಲಭ – Kannada News | Hebbal Flyover New Loop Opens: Easy Access to Mekhri Circle for Esteem Mall and Tumakuru Road Vehicles

ಹೆಬ್ಬಾಳ ಮೇಲ್ಸೆತುವೆ ಹೊಸ ಲೂಪ್ ಓಪನ್ ಬೆಂಗಳೂರು, ಡಿಸೆಂಬರ್ 27: ತುಂಬಾ ವರ್ಷಗಳಿಂದ ಕಾಯುತ್ತಾ ಇದ್ದ ವಾಹನ ಸವಾರರಿಗೆ ಕೊನೆಗೂ ಶುಭ ಸುದ್ದಿ ಸಿಕ್ಕಿದೆ. ಹೆಬ್ಬಾಳ ಮೇಲ್ಸೇತುವೆಯ (Hebbal Flyover) ಮತ್ತೊಂದು ಹೊಸ ಲೂಪ್ ರ್ಯಾಂಪ್ ಸಂಚಾರಕ್ಕೆ ಮುಕ್ತ ಆಗಿದೆ. ಇದರಿಂದ ಎಸ್ಟೀಮ್ ಮಾಲ್ ಮತ್ತು ತುಮಕೂರು ರಸ್ತೆ ವಾಹನ ಸವಾರರು ಮೇಖ್ರಿ ಸರ್ಕಲ್ ಪ್ರವೇಶಿಸುವುದಕ್ಕೆ ತುಂಬಾ ಅನುಕೂಲಕವಾಗಲಿದೆ. ಜತೆಗೆ, ಯಲಹಂಕ, ಜಕ್ಕೂರು, ಸಹಕಾರ ನಗರದಿಂದ ನಗರದ ಪ್ರವೇಶಕ್ಕೆ ತುಂಬಾ ಅನುಕೂಲವಾಗಲಿದೆ. ಕಳೆದ ಆಗಸ್ಟ್ ನಲ್ಲಿ ಕೆಆರ್…

Read More

WPL 2026: ಒಂದೇ ಓವರ್​ನಲ್ಲಿ 32 ರನ್..! 22 ಎಸೆತಗಳಲ್ಲಿ 50 ರನ್ ಚಚ್ಚಿದ ಹ್ಯಾರಿಸ್; ವಿಡಿಯೋ

ಯುಪಿ ವಾರಿಯರ್ಸ್​ ತಂಡ ನೀಡಿರುವ 144 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ಭರ್ಜರಿ ಆರಂಭ ಕಂಡಿತು. ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಸ್ಫೋಟಕ ಬ್ಯಾಟರ್ ಗ್ರೇಸ್ ಹ್ಯಾರಿಸ್ ಅಜೇಯ ಶತಕದ ಜೊತೆಯಾಟ ಕಟ್ಟಿದ್ದಾರೆ. ಅದರಲ್ಲೂ ಕೇವಲ 8 ಓವರ್​ಗಳಲ್ಲಿ ತಂಡ ಶತಕದ ಗಡಿ ದಾಟಿತು. ಈ ವೇಳೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಗ್ರೇಸ್ ಹ್ಯಾರಿಸ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅದರಲ್ಲೂ ವೆಸ್ಟ್ ಇಂಡೀಸ್​ನ ಸ್ಟಾರ್ ಆಲ್‌ರೌಂಡರ್ ಡಿಯಾಂಡ್ರಾ ಡಾಟಿನ್ ಬೌಲ್​ ಮಾಡಿದ ಪವರ್​ ಪ್ಲೇನ…

Read More

ಟೀಮ್ ಇಂಡಿಯಾದ ವಿಶ್ವ ದಾಖಲೆಯ ನಾಗಾಲೋಟಕ್ಕೆ ಬ್ರೇಕ್! – Kannada News | India Taste T20I Series Defeat For First Time In 1,050 Days

ಟೀಮ್ ಇಂಡಿಯಾದ ವಿಶ್ವ ದಾಖಲೆಯ ನಾಗಾಲೋಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಬ್ರೇಕ್ ಹಾಕಿರುವುದು ಮತ್ಯಾರೂ ಅಲ್ಲ, ಐರ್ಲೆಂಡ್ ತಂಡ. ಬೆಲ್​ಫಾಸ್ಟ್​ನಲ್ಲಿ ನಡೆದ ಭಾರತದ ವಿರುದ್ಧದ 2 ಪಂದ್ಯಗಳ ಟಿ20 ಸರಣಿಯನ್ನು ಐರ್ಲೆಂಡ್ ತಂಡವು 2-0 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಭಾರತದ ಸತತ 16 ಟಿ20 ಸರಣಿಗಳ ಅಜೇಯ ನಾಗಾಲೋಟಕ್ಕೆ ಐರ್ಲೆಂಡ್ ಬ್ರೇಕ್ ಹಾಕಿದೆ. ಆಗಸ್ಟ್ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಸೋಲಿನ ನಂತರ, ಟೀಮ್ ಇಂಡಿಯಾ ಕಳೆದ 1,050 ದಿನಗಳಿಂದ (ಸುಮಾರು 3 ವರ್ಷಗಳು)…

Read More

ಉಡುಪಿಯಲ್ಲಿ ಅಬ್ಬರಿಸಿದ ವರುಣ: ಮಣಿಪಾಲ ರಸ್ತೆಯಲ್ಲಿ ನೀರು ನಿಂತು ಸವಾರರ ಪರದಾಟ – Kannada News | Heavy Rains Lash Udupi After Heatwave; Waterlogging on Manipal Road Disrupts Commuters

ಉಡುಪಿ, ಮೇ 07: ಬಿಸಿಲಿನ ತಾಪಕ್ಕೆ ತೀವ್ರವಾಗಿ ತತ್ತರಿಸಿದ್ದ ಪೊಡವಿಗೊಡೆಯನ ನಾಡು ಉಡುಪಿಯ ಜನಕ್ಕೆ ವರುಣ ತಂಪೆರೆದಿದ್ದಾನೆ. ಮುಂಜಾನೆಯಿಂದಲೆ ಜಿಲ್ಲೆಯ ಹಲವು ಕಡೆ ಮಳೆಯಾಗಿದ್ದು, ಏಕಾಏಕಿ ಸುರಿದ ಮಳೆಗೆ ವಾಹನ ಸವಾರರು ಪರದಾಟ ನಡೆಸಿರುವ ಪ್ರಸಂಗ ನಡೆದಿದೆ. ಉಡುಪಿ ನಗರದಲ್ಲಿಯೂ ಉತ್ತಮ ಮಳೆಯಾದ ಪರಿಣಾಮ ಮಣಿಪಾಲ ರಸ್ತೆಯ ಕೆಲವೆಡೆ ರಸ್ತೆಯಲ್ಲಿಯೇ ಹಳ್ಳದ ರೀತಿ ನೀರು ಹರಿದಿರುವ ದೃಶ್ಯಗಳು ಕಂಡುಬಂದಿವೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

‘ಕೆಡಿ’ ರೀತಿ ಸಿನಿಮಾ ಮಾಡೋಕೆ ತುಂಬಾ ತಾಕತ್ತು ಬೇಕು: ಆರ್. ಚಂದ್ರು ಮೆಚ್ಚುಗೆ – Kannada News | R Chandru shares his review after watching KD Movie Jogi Prem Dhruva Sarja

‘ಕೆಡಿ’ ಸಿನಿಮಾದ (KD Movie) ಸೆಲೆಬ್ರಿಟಿ ಶೋ ನಡೆದಿದೆ. ಚಿತ್ರ ನೋಡಿದ ಅನೇಕರು ಭೇಷ್ ಎಂದಿದ್ದಾರೆ. ಆರ್. ಚಂದ್ರು, ಪ್ರಮೋದ್ ಶೆಟ್ಟಿ, ಉಪೇಂದ್ರ, ತರುಣ್ ಸುಧೀರ್, ಮಿಲನಾ ನಾಗರಾಜ್, ಮಾನ್ವಿತಾ ಹರೀಶ್, ಪಿ. ರವಿಶಂಕರ್, ಎಸ್. ಮಹೇಂದರ್ ಮುಂತಾದವರು ಸೆಲೆಬ್ರಿಟಿ ಶೋನಲ್ಲಿ ಭಾಗಿಯಾಗಿದ್ದಾರೆ. ಆರ್. ಚಂದ್ರು ಅವರು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ‘ಈ ರೀತಿಯ ಸಿನಿಮಾ ಮಾಡೋಕೆ ತುಂಬಾ ಗುಂಡಿಗೆ ಬೇಕು. ಅಷ್ಟು ದೊಡ್ಡ ದೃಶ್ಯಕಾವ್ಯವನ್ನು ಕಟ್ಟಿಕೊಡುವುದು ಸುಲಭ ಅಲ್ಲ. ಅದಕ್ಕೆ ಎಷ್ಟು ಶ್ರಮ ಇದೆ ಅಂತ…

Read More

ಈ ರಾಶಿಗಳ ಮೇಲೆ ಗ್ರಹಗಳ ಶುಭಫಲ, ಇಂದು “ಓಂ ಗುಣಾಕರಾಯ ನಮಃ” ಮಂತ್ರ ಜಪ ಮಾಡಿ – Kannada News | Astrologer Dr. Basavaraj Guruji Predicts Zodiac Fortunes for January 29, 2026

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ನೀಡಿದ್ದಾರೆ. ವಿಶ್ವಾಸುನಾಮ ಸಂವತ್ಸರ, ಉತ್ತರಾಯಣ, ಮಾಘಮಾಸ, ಶಿಶಿರ ಋತು, ಶುಕ್ಲಪಕ್ಷ ಏಕಾದಶಿ, ಮೃಗಶಿರಾ ನಕ್ಷತ್ರ, ಐಂದ್ರ ಯೋಗ ಮತ್ತು ಭದ್ರಕರಣ ಈ ದಿನದ ವೈಶಿಷ್ಟ್ಯಗಳಾಗಿವೆ. ರಾಹುಕಾಲವು ಮಧ್ಯಾಹ್ನ 1:59 ರಿಂದ 3:26 ರವರೆಗೆ ಇರಲಿದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಹಾಗೂ ಶುಭ ಕಾಲವು ಮಧ್ಯಾಹ್ನ 12:33 ರಿಂದ 1:59 ರವರೆಗೆ ಇರುತ್ತದೆ. ಈ ದಿನ ರವಿ ಮಕರ…

Read More