ಹೈಕಮಾಂಡ್ ಮಾತು ಯಾರು ಕೇಳಬೇಕು? : ಸಿಎಂ ಸಿದ್ದರಾಮಯ್ಯ, ಸುನಿಲ್ ಕುಮಾರ್ ನಡುವೆ ಜಟಾಪಟಿ
ಬೆಂಗಳೂರು, ಮಾ.25: ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ತೀವ್ರ ಚರ್ಚೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರ ಪ್ರಶ್ನೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಹೈಕಮಾಂಡ್ ನಿರ್ಧಾರಗಳ ಕುರಿತು ಎದ್ದ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಪಕ್ಷ ನಿಷ್ಠೆ ಮತ್ತು ರಾಜಕೀಯ ತತ್ವಗಳನ್ನು ಹೆಚ್ಚು ಗೌರವಿಸುತ್ತೇನೆ. ನೀವು ಮೋದಿ ಅವರನ್ನು ಕೇಳಿ ಎಲ್ಲ ಮಾಡುತ್ತೀರಾ? ಎಂದು ಸಿಎಂ ಹೇಳದಾಗ, ಶಾಸಕ ಸುನಿಲ್ ಕುಮಾರ್ “ನಾನು ಮೋದಿಯವರ ಭಕ್ತ, ನಾನು ಹೈಕಮಾಂಡ್ನ ಭಕ್ತ, ನಾನು ಒಬ್ಬ…