ಕರ್ನಾಟಕ ಹವಾಮಾನ ವರದಿ: ಮಳೆರಾಯನ ಅವಾಂತರಕ್ಕೆ ಹಾರಿ ಹೋಯ್ತು ಸೂರು! ಇಂದೂ ವರುಣನ ಆರ್ಭಟ ಜೋರು
ಬೆಂಗಳೂರು, ಮಾರ್ಚ್ 25: ಮಂಗಳವಾರ ಸುರಿದ ಮಳೆಯಿಂದಾಗಿ (Weather Forecast) ಹಲವೆಡೆ ಅವಾಂತಗಳು ಸೃಷ್ಟಿಯಾಗಿವೆ. ಜೋರಾದ ಗಾಳಿಗೆ ಮನೆ ಮೇಲಿನ ಸೂರು ಸಹ ಹಾರಿ ಹೋಗಿದ್ದು, ಜನರು ಕಂಗಾಲಾಗಿದ್ದಾರೆ. ಇಂದೂ ಸಹ ರಾಜ್ಯದೆಲ್ಲೆಡೆ ಗುಡುಗು ಸಹಿತ ಮಳೆಯಿರಲಿದ್ದು, ಹವಾಮಾನ ಇಲಾಖೆ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಿದೆ. ಜೋರು ಗಾಳಿ ಮಳೆಗೆ ಗದಗದಲ್ಲಿ ಅವಾಂತರ ಗದಗ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಭಾರಿ ಗಾಳಿ, ಗುಡುಗು ಸಹಿತ ಮಳೆಯ ಅಬ್ಬರದಿಂದ ಹಲವು ಕಡೆ ಅವಾಂತರಗಳು ಸಂಭವಿಸಿವೆ. ವಿಶೇಷವಾಗಿ…