ಯಾರೋ ಸಿಂಪಲ್ ಸುಧಾ ಗಂಡ ಅಂತೆ:ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ – Kannada News | Labour Day 2026: Congress MLC BK Hariprasad Opposes Infosys Founder Narayana Murthy’s 75 Hour Work Statement

ಬೆಂಗಳೂರು, (ಮೇ,1): ವಾರಕ್ಕೆ 75 ಗಂಟೆಗಗಳ ಕಾಲ ಕೆಲಸ ಮಾಡಬೇಕು ಎಂದಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿ (Infosys Founder Narayana Murthy) ಅವರ ವಿರುದ್ದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (Congress MLC BK Hariprasad) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾರ್ಮಿಕ ದಿನಾಚರಣೆ (Labour Day 2026) ಕಾರ್ಯಕ್ರಮದ ವೇಳೆ ಕೆಲಸ ಅವಧಿ ಪ್ರಸ್ತಾಪಿಸಿದ್ದು, ಡಾ.ಬಿ.ಆರ್.ಅಂಬೇಡ್ಕರ್ ದಿನಕ್ಕೆ 8 ಗಂಟೆ ಕೆಲಸ ಮಾಡಬೇಕು ಅಂದ್ರು. ಆದ್ರೆ, ಆಯಮ್ಮ ಯಾರೋ ಸಿಂಪಲ್ ಸುಧಾ ಅಂತೆ…

Read More

ಒಮನ್​ ಕರಾವಳಿಯಲ್ಲಿ ತೈಲ ಟ್ಯಾಂಕರ್‌ ಮೇಲೆ ದಾಳಿ; ಓರ್ವ ಭಾರತೀಯ ಸಾವು – Kannada News | Indian mariner killed after oil tanker attack in Oman coast

ನವದೆಹಲಿ, ಮಾರ್ಚ್ 2: ಒಮನ್ ಮೇಲೂ ಇರಾನ್ ದಾಳಿ (Iran Attack) ನಡೆಸಿದೆ. ಒಮನ್ ಕರಾವಳಿಯಲ್ಲಿ ಮಾನವರಹಿತ ಡ್ರೋನ್ ಹಡಗು ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಭಾರತೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಇರಾನ್- ಇಸ್ರೇಲ್ ನಡುವಿನ ಯುದ್ಧದಲ್ಲಿ ಮೊದಲ ಭಾರತೀಯನ ಸಾವಾಗಿದೆ. ಈ ದಾಳಿಯಿಂದಾಗಿ ಬೆಂಕಿ ಕಾಣಿಸಿಕೊಂಡು ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಸ್ಥಳಾಂತರಿಸಬೇಕಾಯಿತು. ಆದರೆ, ಈ ದುರಂತದಲ್ಲಿ ಓರ್ವ ಭಾರತೀಯ ಮೃತಪಟ್ಟಿದ್ದಾರೆ. ಇಸ್ರೇಲ್ ಮತ್ತು ಇರಾನ್ ನಡುವಿನ ಹಗೆತನವು ಹೆಚ್ಚುತ್ತಲೇ ಇದೆ. ಅಧಿಕಾರಿಗಳ ಪ್ರಕಾರ,…

Read More

ಅಸ್ಸಾಂನಲ್ಲಿ ಇಂದು ಅಭಿವೃದ್ಧಿಯ ಹಬ್ಬ: ಸಾವಿರಾರು ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ – Kannada News | Assam Infrastructure Boom: PM Unveils Multi Crore Projects for Northeast Progress

ಗುವಾಹಟಿ, ಫೆ.14: ಈಶಾನ್ಯ ಭಾರತದ ಪ್ರವೇಶ ದ್ವಾರವೆಂದೇ ಕರೆಯಲ್ಪಡುವ ಅಸ್ಸಾಂ ರಾಜ್ಯದಲ್ಲಿ (Assam Infrastructure projects) ಇಂದು ಅಭಿವೃದ್ಧಿಯ ಹಬ್ಬ. ಅಸ್ಸಾಂನ ಸಂಪರ್ಕ ವ್ಯವಸ್ಥೆ, ಇಂಧನ ಮತ್ತು ಕ್ರೀಡಾ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಇಂದು ಚಾಲನೆ ಸಿಗಲಿದೆ. ಅಸ್ಸಾಂನ ರೈಲ್ವೇ ಮಾರ್ಗಗಳ ವಿದ್ಯುದ್ದೀಕರಣ ಮತ್ತು ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣಾ ಯೋಜನೆಗಳಿಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಲಿದ್ದಾರೆ. ಇದು ಈಶಾನ್ಯ ರಾಜ್ಯಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಉನ್ನತ…

Read More

ರಾಧಿಕಾ ಜೊತೆ ಮುಂಬೈನಲ್ಲಿ ಯಶ್ ಸುತ್ತಾಟ; ಗಮನ ಸೆಳೆದ ಹೊಸ ಲುಕ್

ರಾಕಿಂಗ್ ಸ್ಟಾರ್ ಯಶ್ ಅವರು ಹಲವು ವರ್ಷಗಳ ಬಳಿಕ ಪ್ರೇಕ್ಷರ ಎದುರು ಹೊಸ ಲುಕ್​​ನಲ್ಲಿ ಬಂದಿದ್ದಾರೆ. ‘ಕೆಜಿಎಫ್ 2’ ಸಿನಿಮಾ (KGF 2 Movie) ಕೆಲಸ ಆರಂಭ ಆದಾಗಿನಿಂದಲೂ ಅವರು ಉದ್ದನೆಯ ಗಡ್ಡ ಹಾಗೂ ಉದ್ದ ಕೂದಲು ಬಿಟ್ಟಿದ್ದರು. ಅದೇ ರೀತಿಯ ಲುಕ್ ‘ಟಾಕ್ಸಿಕ್’ ಚಿತ್ರದಲ್ಲೂ ಮುಂದುವರಿಯಿತು. ಈ ಚಿತ್ರದ ‘ಟಿಕೆಟ್’ ಹೆಸರಿನ ಪಾತ್ರದ ಲುಕ್​​ಗಾಗಿ ಅವರು ಗಡ್ಡ ಹಾಗೂ ಕೂದಲನ್ನು ಕತ್ತರಿಸಿ ಸಣ್ಣದಾಗಿಸಿಕೊಂಡಿದ್ದಾರೆ. ಈಗ ಈ ಲುಕ್​​ನ ಅನಾವರಣ ಆಗಿರುವುದರಿಂದ ಯಶ್ ಅದನ್ನು ಸಾರ್ವಜನಿಕವಾಗಿ ತೋರಿಸಿದ್ದಾರೆ….

Read More

ಸಾವಿನ ಬಗ್ಗೆ ಪದೇ ಪದೇ ಸುಳ್ಳು ಸುದ್ದಿ: ನಟ ದೊಡ್ಡಣ್ಣ ಹೇಳಿದ್ದೇನು?

ದೊಡ್ಡಣ್ಣ (Doddanna), ಕನ್ನಡ ಚಿತ್ರರಂಗದ ಹಿರಿಯ ನಟ. ಹಿರಿಯ ನಟರಾಗಿರುವ ಜೊತೆಗೆ ಚಿತ್ರರಂಗದ ಏಳ್ಗೆಗೆ ಸಂಬಂಧಿಸಿದ ಇತರೆ ಕಾರ್ಯಗಳಲ್ಲಿಯೂ ಮುಂದಾಳತ್ವ ವಹಿಸುತ್ತಾರೆ. ಜೊತೆಗೆ ಆಗಾಗ್ಗೆ ರಾಜಕೀಯ ವೇದಿಕೆಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ದೊಡ್ಡಣ್ಣ ಅವರು ಈಗಲೂ ಉತ್ಸಾಹದ ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಪದೇ ಪದೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಣ್ಣ ನಿಧನದ ಸುದ್ದಿಗಳನ್ನು ಕೆಲ ಕಿಡಿಗೇಡಿಗಳು ಪದೇ ಪದೇ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೆ ಕೆಲ ಕಿಡಿಗೇಡಿಗಳು ದೊಡ್ಡಣ್ಣ ಅವರ ನಿಧನ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಟಿವಿ9 ಜೊತೆಗೆ ಮಾತನಾಡಿರುವ…

Read More

ಇರಾನ್​ನ 140 ಮಿಲಿಯನ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಂತೆ ಅಮೆರಿಕ!

ವಾಷಿಂಗ್ಟನ್, ಮಾರ್ಚ್ 21: ಮಧ್ಯಪ್ರಾಚ್ಯ ಯುದ್ಧದಿಂದ ಜಗತ್ತಿನಾದ್ಯಂತ ಕಚ್ಚಾ ತೈಲ, ಅಡುಗೆ ಅನಿಲ ಸೇರಿದಂತೆ ತೀವ್ರ ಇಂಧನ ಬಿಕ್ಕಟ್ಟು ಎದುರಾಗಿದೆ. ಇಂಥ ಸನ್ನಿವೇಶದಲ್ಲಿ ಇದೀಗ ಅಮೆರಿಕ ಮಹತ್ವದ ಹೇಳಿಕೆ ನೀಡಿದೆ. ಸಮುದ್ರದಲ್ಲಿ ಸಿಲುಕಿರುವ, ಇರಾನ್‌ಗೆ ಸೇರಿದ 140 ಮಿಲಿಯನ್ ಬ್ಯಾರೆಲ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿ ಇಂಧನ ಪೂರೈಕೆಯನ್ನು ಸುಗಮಗೊಳಿಸುವುದಾಗಿ ಅಮೆರಿಕದ ಖಜಾನೆ ಸಚಿವ ಸ್ಕಾಟ್ ಬೆಸೆಂಟ್ (Scott Bessent) ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ ಸಂದೇಶದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ ಅಷ್ಟೇ ಅಲ್ಲದೆ…

Read More

Daily Devotional: ಶ್ರೀರಾಮನವಮಿಯನ್ನು ಹೇಗೆ ಆಚರಿಸಬೇಕು? ಇಲ್ಲಿದೆ ಮಾಹಿತಿ

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಶ್ರೀರಾಮನವಮಿಯನ್ನು ಆಚರಿಸುವುದು ಹೇಗೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುವ ಶ್ರೀರಾಮ ನವಮಿಯು ಹಿಂದೂ ಧರ್ಮದ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ತ್ರೇತಾಯುಗದಲ್ಲಿ ಶ್ರೀ ಮಹಾವಿಷ್ಣುವು ಮರ್ಯಾದಾ ಪುರುಷೋತ್ತಮ ಶ್ರೀರಾಮನಾಗಿ ಜನಿಸಿದ ಶುಭ ದಿನವಿದು. ಸೂರ್ಯೋದಯದಲ್ಲಿ ನವಮಿ ತಿಥಿ ಇರುವುದರಿಂದ ಇಡೀ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ. ಈ ದಿನ ಪುನರ್ವಸು ನಕ್ಷತ್ರವೂ ಇರುತ್ತದೆ. ಈ ಹಬ್ಬವನ್ನು ದೇಶಾದ್ಯಂತ ವಿಜೃಂಭಣೆಯಿಂದ…

Read More

ಶಾಸಕ ಯತ್ನಾಳ್​​ ಪುತ್ರನ ಆರತಕ್ಷತೆಯಲ್ಲಿ ಜನವೋ ಜನ!: ವಿವಿಧ ಗಣ್ಯರು, ಮಠಾಧೀಶರು ಭಾಗಿ

ವಿಜಯಪುರ, ಮಾರ್ಚ್​​ 15: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ರ ರಾಮನಗೌಡ ಅವರ ಅದ್ದೂರಿ ವಿವಾಹ ಆರತಕ್ಷತೆ ಕಾರ್ಯಕ್ರಮವು ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಆವರಣದಲ್ಲಿ ವಿಜೃಂಭಣೆಯಿಂದ ಜರುಗಿತು. ರಾಮನಗೌಡ ಹಾಗೂ ಅಬೋಲಿ ಅವರ ವಿವಾಹೋತ್ಸವದ ಆರತಕ್ಷತೆಯಲ್ಲಿ ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. ನಾಡಿನ ವಿವಿಧ ಮಠಾಧೀಶರು, ರಾಜಕಾರಣಿಗಳು ಹಾಗೂ ಅನೇಕ ಗಣ್ಯ ವ್ಯಕ್ತಿಗಳು ಆಗಮಿಸಿ ನೂತನ ದಂಪತಿಗಳನ್ನು ಶುಭ ಹಾರೈಸಿದ್ದಾರೆ. ಮಂತ್ರ-ಘೋಷಗಳ ಮಧ್ಯೆ ವಧು-ವರರು ಪರಸ್ಪರ ಹಾರ ಬದಲಾಯಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ್ ಅವರ ನೃತ್ಯ ವಿಶೇಷವಾಗಿತ್ತು….

Read More

ಚಾಮರಾಜನಗರ: ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ಹೋದ ಪತ್ನಿಗೆ ‘ಸಾಮಾಜಿಕ ಬಹಿಷ್ಕಾರ’! – Kannada News | Inhuman Social Boycott in Chamarajanagar: Kenchamma Fights for Justice Against Elders

ಚಾಮರಾಜನಗರ, ಏ.17: ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಲು ತವರು ಮನೆಗೆ ಹೋದ ಮಹಿಳೆಗೆ ಗ್ರಾಮದ ಯಜಮಾನರು ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಅನಿಷ್ಠ ಪದ್ಧತಿಯನ್ನು ಮುಂದುವರಿಸಿದ್ದಾರೆ.ಇದೀಗ ಈ ಬಗ್ಗೆ ಭಾರೀ ಅಕ್ರೋಶ ವ್ಯಕ್ತವಾಗಿದೆ. ಯರಂಬಾಡಿ ಮೂಲದ ಕೆಂಚಮ್ಮ ಎಂಬುವವರು ಹೂಗ್ಯಂ ಗ್ರಾಮದ ರಾಮು ಎಂಬುವವರನ್ನು ವಿವಾಹವಾಗಿದ್ದರು. ಇತ್ತೀಚೆಗೆ ಕೆಂಚಮ್ಮ ಅವರ ತಾಯಿಗೆ ಆರೋಗ್ಯ ಕೈಕೊಟ್ಟ ಕಾರಣ, ಅವರನ್ನು ಉಪಚರಿಸಲು ಕೆಂಚಮ್ಮ ತವರು ಮನೆಗೆ ತೆರಳಿದ್ದರು. ತವರು…

Read More

ಆಸ್ಪತ್ರೆಯಲ್ಲಿ ಸೋನಿಯಾರನ್ನು ನೋಡಿಕೊಂಡ ಕೇರಳ ನರ್ಸ್​ ಬಗ್ಗೆ ರಾಹುಲ್ ಶ್ಲಾಘನೆಗೆ ವೈದ್ಯರ ಪ್ರತಿಕ್ರಿಯೆ

ನವದೆಹಲಿ, ಮಾರ್ಚ್​ 26: ಆಸ್ಪತ್ರೆಯಲ್ಲಿ ತಾಯಿ ಸೋನಿಯಾಗಾಂಧಿಯನ್ನು ಚೆನ್ನಾಗಿ ನೋಡಿಕೊಂಡ ಕೇರಳದ ನರ್ಸ್​ ಬಗ್ಗೆ ರಾಹುಲ್ ಗಾಂಧಿ(Rahul Gandhi) ಶ್ಲಾಘಿಸಿದ್ದರು. ಅದಕ್ಕೆ ವೈದ್ಯರಾದ ಸುಧೀರ್ ಕುಮಾರ್ ಮಾತನಾಡಿದ್ದು, ಎಲ್ಲಾ ನರ್ಸ್​, ವೈದ್ಯರು ಹಾಗೂ ಇತರೆ ಆರೋಗ್ಯ ವೃತ್ತಿಪರರ ಬಗ್ಗೆ ನಮಗೆ ಹೆಮ್ಮೆ ಇದೆ. ರಾತ್ರಿಯಲ್ಲಿ ಕೆಲಸ ಮಾಡದೆ ಬೇರೆ ಆಯ್ಕೆ ಅವರಿಗಿರುವುದಿಲ್ಲ. ರಾತ್ರಿಯಲ್ಲಿ ಕೆಲಸ ಮಾಡುವ ನರ್ಸ್​ಗಳು ಹಗಲಿನ ವೇಳೆಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಬಿಡುವಿನ ವೇಳೆ ಮಲಗುತ್ತಾರೆ. ರಾತ್ರಿ ಶಿಫ್ಟ್​ ಸರದಿಯಲ್ಲಿ ಬರುತ್ತವೆ. ಹೆಚ್ಚಿನ ನರ್ಸ್​ಗಳು ಕೇರಳದವರಾಗಿದ್ದರೂ,…

Read More