ಐತಿಹಾಸಿಕ ಲಕ್ಕುಂಡಿಯಲ್ಲಿ 6ನೇ ದಿನದ ಉತ್ಖನನದಲ್ಲಿ ಏನೇನು ಸಿಕ್ತು? ಇಲ್ಲಿದೆ ವಿವರ – Kannada News | Lakkundi Gold Treasure: Some old things Found during 6th day excavation
ಗದಗ, (ಜನವರಿ 21): ಲಕ್ಕುಂಡಿಯಲ್ಲಿ ಚಿನ್ನದ ನಿಧಿ (Lakkundi Gold Treasure) ಸಿಕ್ಕಿದ್ದೇ ಸಿಕ್ಕಿದ್ದು ಗ್ರಾಮದ ಹೆಸರು ಭಾರೀ ಸದ್ದು ಮಾಡತೊಡಗಿದೆ. ಗ್ರಾಮದ ಶ್ರೀಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ (Lakkundi excavation) ಭರದಿಂದ ಸಾಗಿದ್ದು, 6ನೇ ದಿನದ ಉತ್ಖನನ ಕಾರ್ಯ ಅಂತ್ಯವಾಗಿದೆ. ಇಂದು (ಜನವರಿ 21) 6ನೇ ದಿನದ ಉತ್ಖನನ ಕಾರ್ಯ ವೇಳೆ ಐದಾರು ಬಿಲ್ಲೆ, ನಾಗರಹಾವಿನ ಚಿತ್ರದ ಶಿಲೆ ಜತೆಗೆ ಮೂಳೆ ತುಣುಕುಗಳು ಸಹ ಸಿಕ್ಕಿರುವುದು ಕುತೂಹಲಕ್ಕೆ ಕಾರಣವಾಗಿದೆ. 6ನೇ ದಿನ…