ಬೆಂಗಳೂರು ರಸ್ತೆಯಲ್ಲಿ ಯುವಕರ ‘ಬಿಯರ್’ ದರ್ಬಾರ್: ಟ್ರಿಪಲ್ ರೈಡಿಂಗ್, ಮದ್ಯಪಾನ ಮಾಡಿದ ವಿಡಿಯೋ ವೈರಲ್
ಬೆಂಗಳೂರು, ಮಾ.23: ಸಿಲಿಕಾನ್ ಸಿಟಿಯ ಬಿಟಿಎಂ ರಸ್ತೆಯಲ್ಲಿ (BTM Road) ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿದ ಯುವಕರ ಗುಂಪೊಂದು ಅತಿರೇಖಾದ ವರ್ತನೆ ತೋರಿದ್ದಾರೆ. ಸ್ಕೂಟರ್‌ನಲ್ಲಿ ಮೂವರು ಯುವಕರು ಹೆಲ್ಮೆಟ್ ಇಲ್ಲದೆ ‘ಟ್ರಿಪಲ್ ರೈಡಿಂಗ್’ ಮಾಡುತ್ತಿರುವುದಲ್ಲದೆ, ಚಲಿಸುವ ವಾಹನದಲ್ಲೇ ಬಿಯರ್ ಕುಡಿಯುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮೂವರು ಯುವಕರು ಯಾವುದೇ ಭಯವಿಲ್ಲದೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದು, ಹಿಂಬದಿ ಕುಳಿತಿದ್ದ ಯುವಕ ಬಿಯರ್ ಬಾಟಲಿ ಹಿಡಿದು ಮದ್ಯಪಾನ ಮಾಡುತ್ತಾ ವಿಕೃತವಾಗಿ ಕೈ…