Headlines

Video: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪೆಟ್ರೋಲ್ ಬಂಕ್​​ನ ಲೈಟಿಂಗ್ ಕಂಬ, ಸಮಾಜವಾದಿ ಪಕ್ಷದ ನಾಯಕ ಸಾವು – Kannada News | SP Leader Dies After High Mast Pole Collapses Onto Car in Uttar Pradesh

ಪ್ರತಾಪಗಢ, ಫೆಬ್ರವರಿ 16: ಚಲಿಸುತ್ತಿದ್ದ ಕಾರಿನ ಮೇಲೆ ಪೆಟ್ರೋಲ್ ಬಂಕ್​ನ ಲೈಟಿಂಗ್​ ಕಂಬ ಕುಸಿದು ಬಿದ್ದ ಪರಿಣಾಮ ಸಮಾಜವಾದಿ ಪಕ್ಷದ ನಾಯಕ ಲಾಲ್ ಬಹದ್ದೂರ್ ಯಾದವ್ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದಿದೆ. ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೈಯಕ್ತಿಕ ಕೆಲಸಕ್ಕಾಗಿ ಕ್ರೆಟಾ ಕಾರಿನಲ್ಲಿ ಬಾಬುಗಂಜ್‌ನಿಂದ ಪ್ರತಾಪ್‌ಗಢ ನಗರಕ್ಕೆ ಪ್ರಯಾಣಿಸುತ್ತಿದ್ದಾಗ, ಅವರ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ಪೆಟ್ರೋಲ್ ಪಂಪ್ ಮುಂದೆ ಕ್ರೇನ್ ಸಹಾಯದಿಂದ ಭಾರತ್…

Read More

ಧಮ್ಕಿ ಕೇಸ್: ರಾಜೀವ್ ಗೌಡಗೆ ಬಿಗ್ ರಿಲೀಫ್, ಪಟಾಕಿ ಹಚ್ಚಿ ಸಂಭ್ರಮಿಸದಂತೆ ತಾಕೀತು – Kannada News | Rajeev Gowda Gets Bail In Shidlaghatta Municipal Commissioner threat Case

ಚಿಕ್ಕಬಳ್ಳಾಪುರ, (ಜನವರಿ 30): ಶಿಡ್ಲಘಟ್ಟ ನಗರಸಭೆ ಆಯುಕ್ತೆಗೆ ಅಮೃತಾ ಗೌಡಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡಗೆ (Rajeev Gowda) ಜಾಮೀನು ಸಿಕ್ಕಿದೆ. ಮಂಗಳೂರಿನಲ್ಲಿ ಸ್ಥಳ ಮಹಜರು ಮುಗಿಸಿ ಇಂದು (ಜನವರಿ 30) ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಈ ವೇಳೆ ಶಿಡ್ಲಘಟ್ಟದ ಜೆಎಂಎಫ್​ಸಿ ಕೋರ್ಟ್​, ರಾಜೀವ್ ಗೌಡನಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.  50 ಸಾವಿರ ರೂಪಾಯಿ ಶ್ಯೂರಿಟಿ ಬಾಂಡ್, ಪೊಲೀಸರ ತನಿಖೆಗೆ ಸಹಕರಿಸಲು ಸೂಚನೆ ನೀಡಿದೆ….

Read More

Video: ಹಕ್ಕಿಗಳ ನಡುವಿನ ಜಗಳ ಬಿಡಿಸಿದ ಮಹಿಳೆ, ವೈರಲ್‌ ಆಯ್ತು ದೃಶ್ಯ – Kannada News | Woman mediates between fighting birds

ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳೇ (animals and birds) ಲೇಸು. ಒಂದು ತುತ್ತು ಅನ್ನ ಹಾಕಿದರೆ ಸಾಕು, ದಿನನಿತ್ಯ ಮನೆ ಮುಂದೆ ಬರುತ್ತವೆ. ಮನುಷ್ಯ ಹಾಗೂ ಪಕ್ಷಿಯ (Bird) ಸ್ನೇಹಪರ ಸಂಬಂಧಕ್ಕೆ ಈ ವಿಡಿಯೋನೇ ಸಾಕ್ಷಿ. ಮನೆಯ ಹತ್ತಿರ ಹಾರಿ ಬಂದು ಬಾಲ್ಕನಿಯಲ್ಲಿ ಕುಳಿತುಕೊಂಡಿದ್ದ ಹಕ್ಕಿಗಳೆರಡು ಜಗಳವಾಡುತ್ತಿದ್ದು,  ಮಹಿಳೆಯೊಬ್ಬಳು ಈ ಹಕ್ಕಿಗಳ ನಡುವಿನ ಜಗಳವನ್ನು ಬಿಡಿಸಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ದೃಶ್ಯ ನೋಡಿ ನೆಟ್ಟಿಗರು ಅಚ್ಚರಿ ಪಟ್ಟುಕೊಂಡಿದ್ದಾರೆ. Puja mondal ಹೆಸರಿನ ಫೇಸ್ಬುಕ್…

Read More

ವಿಧಾನಸಭೆಯಲ್ಲೂ ಸಿಲಿಂಡರ್​​ ಕೊರತೆ ಗದ್ದಲ: ಆಡಳಿತ ಮತ್ತು ವಿಕ್ಷದ ನಡುವೆ ವಾಕ್ಸಮರ

ಬೆಂಗಳೂರು, ಮಾರ್ಚ್​​ 11: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮವಾಗಿ ಸಿಲಿಂಡರ್​​ ಪೂರೈಕೆ ವ್ಯತ್ಯಯದಿಂದಾಗಿ ರಾಜ್ಯದಲ್ಲಿ ಹೋಟೆಲ್​​ ಉದ್ಯಮಗಳು, ಜನ ಸಾಮಾನ್ಯರು ವಿಪರೀತ ಸಂಕಷ್ಟಕ್ಕೆ ಸಿಲುಕಿರುವ ವಿಚಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ. ಶೂನ್ಯವೇಳೆಯಲ್ಲಿ ಸಿಲಿಂಡರ್​ ಕೊರತೆ ಬಗ್ಗೆ ಚರ್ಚೆಗೆ ಸ್ಪೀಕರ್​​ ಅವಕಾಶ ನೀಡಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವೆ ದೊಡ್ಡ ಹೈಡ್ರಾಮಾವೇ ನಡೆದಿದೆ. ಮಾತಿಗೆ ಮಾತು ಬೆಳೆದ ಪರಿಣಾಮ ಸದನದ ರಣಾಂಗಣವಾಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್​​ ಶಾಸಕರು ಪರಸ್ಪರ ದೂಷಿಸಿಕೊಂಡಿದ್ದಾರೆ. ಚರ್ಚೆ ಮಧ್ಯೆ ಪ್ರಧಾನಿ ಮೋದಿ ಅವರ ಹೆಸರು ಪ್ರಸ್ತಾಪವಾಗಿರೋದು ಉರಿಯುವ…

Read More

ಮತ್ತೊಂದು ಅರುಣ್ ಸಾಗರ್ ಆಗ್ತಾರಾ ಗಿಲ್ಲಿ ನಟ? ರನ್ನರ್ ಅಪ್ ಸ್ಥಾನ ಫಿಕ್ಸ್? – Kannada News | Gilli Bigg Boss Kannada Journey: Will History Repeat? Winner or Runner up Like Arun Sagar?

ಅದು 2013ರ ಸಮಯ. ಆಗತಾನೇ ಬಿಗ್ ಬಾಸ್ (Bigg Boss) ಕನ್ನಡಕ್ಕೆ ಬಂತು. ಕಿಚ್ಚ ಸುದೀಪ್ ಅವರು ಇದರ ಹೋಸ್ಟ್ ಆದರು. ಈಟಿವಿ ಕನ್ನಡದಲ್ಲಿ ಶೋ ಪ್ರಸಾರ ಕಂಡಿತು. 15 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದರು. ಈ ಪೈಕಿ ವಿಜಯ್ ರಾಘವೇಂದ್ರ ಗೆಲುವು ಕಂಡರೆ, ಅರುಣ್ ಸಾಗರ್ ರನ್ನರ್ ಅಪ್ ಆದರು. ಅರುಣ್ ಸಾಗರ್ ನಿಜವಾದ ವಿನ್ನರ್ ಆಗಬೇಕಿತ್ತು ಎಂಬುದು ವೀಕ್ಷಕರ ಅಭಿಪ್ರಾಯ ಆಗಿತ್ತು. ಈಗ ಈ ಸಾಲಿಗೆ ಗಿಲ್ಲಿ ಕೂಡ ಸೇರುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ….

Read More

ಮದ್ಯ ನೀತಿ ಪ್ರಕರಣ: ಕೇಜ್ರಿವಾಲ್ ಮತ್ತು ಇತರ 23 ಜನರಿಗೆ ಹೈಕೋರ್ಟ್ ನೋಟಿಸ್

ನವದೆಹಲಿ, ಮಾರ್ಚ್​ 09: ದೆಹಲಿಯ ಅಬಕಾರಿ ನೀತಿಯಲ್ಲಿನ ಹಗರಣಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಅರವಿಂದ್ ಕೇಜ್ರಿವಾಲ್(Arvind Kejriwal) ಮತ್ತು ರೌಸ್ ಅವೆನ್ಯೂ ನ್ಯಾಯಾಲಯದಿಂದ ಖುಲಾಸೆಗೊಂಡ ಎಲ್ಲಾ 23 ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯವು ಈಗ ಮಾರ್ಚ್ 16 ರಂದು ಮುಂದಿನ ವಿಚಾರಣೆಯನ್ನು ನಡೆಸಲಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಯ ವಿರುದ್ಧ ಇಲಾಖಾ ಕ್ರಮಕ್ಕೆ ನಿರ್ದೇಶಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ತಡೆಹಿಡಿದಿದೆ. ಸೋಮವಾರ, ಸಿಬಿಐ ಅರ್ಜಿಯ ನಂತರ ಕೇಜ್ರಿವಾಲ್, ಸಿಸೋಡಿಯಾ ಮತ್ತು…

Read More

ಕೆರೆಗೆ ಕಾರು ಬಿದ್ದು ರೈತ ಸಂಘದ ಜಿಲ್ಲಾಧ್ಯಕ್ಷ ಸಾವು: ತಡೆಗೋಡೆ ಇಲ್ಲದಿರುವುದೇ ಅಪಘಾತಕ್ಕೆ ಕಾರಣವಾಯ್ತಾ?

ಕೋಲಾರ, ಮಾರ್ಚ್​ 08: ಅದು ರಾಜ್ಯ ಹೆದ್ದಾರಿ ಜಿಲ್ಲಾ ಕೇಂದ್ರದಿಂದ ಪಕ್ಕದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಆ ರಸ್ತೆಯಲ್ಲಿ ಬರುವ ಅದೊಂದು ದೊಡ್ಡ ಕೆರೆಯ ಎರಡು ಬದಿಯಲ್ಲಿ ತಡೆಗೋಡೆ ಇಲ್ಲದ ಪರಿಣಾಮ ಭೀಕರ ಅವಘಡವೊಂದು (car accident) ನಡೆದಿದ್ದು, ಕೆರೆಗೆ ಕಾರು ಬಿದ್ದು ರೈತ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್​ ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ 1.30 ಸುಮಾರಿನಲ್ಲಿ ಕೋಲಾರ ತಾಲ್ಲೂಕಿನ ತೊರಾಂಡಹಳ್ಳಿ ಗ್ರಾಮದ ಕಡೆಗೆ ಹೋಗುತ್ತಿದ್ದ ವೇಳೆ ಕಾರು ಕೆರೆಗೆ ಬಿದ್ದ ಪರಿಣಾಮ ಕಾರ್​ ನಲ್ಲಿದ್ದ…

Read More

‘ಹ್ಯಾಟ್ರಿಕ್ ಹೀರೋ’ ಜೊತೆ ನಟಿಸಲಿದ್ದಾರೆ ಶ್ರೀಲೀಲಾ – Kannada News | Sreeleela to act with Tamil hero Pradeep Ranganathan

ಶ್ರೀಲೀಲಾ (Sreeleela) ಕನ್ನಡದ ನಟಿ ಆದರೆ ಈಗ ಪರ ಭಾಷೆಗಳಲ್ಲಿ ಹೆಚ್ಚು ಮಿಂಚುತ್ತಿದ್ದಾರೆ. ಕನ್ನಡದ ‘ಕಿಸ್’ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ, 2022 ರ ಸಿನಿಮಾ ‘ಧಮಾಕ’ ಮೂಲಕ ತೆಲುಗು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು. ‘ಧಮಾಕ’ ಸಿನಿಮಾದ ಬಳಿಕ ಬಲು ಬೇಗನೇ ತೆಲುಗು ಚಿತ್ರರಂಗದ ಟಾಪ್ ನಟಿಯಾದ ಶ್ರೀಲೀಲಾ, ಇದೀಗ ಬಾಲಿವುಡ್​ ಹಾಗೂ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದೂ ಎರಡೂ ಕಡೆ ಒಂದರ ಹಿಂದೊಂದು ದೊಡ್ಡ ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಂತೂ ಅವರು ‘ಹ್ಯಾಟ್ರಿಕ್…

Read More

Vastu for Electronics: ಮನೆಯಲ್ಲಿ ಪದೇ ಪದೇ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗುತ್ತಿದೆಯೇ? ವಾಸ್ತು ಶಾಸ್ತ್ರ ಹೇಳುವುದೇನು ಗೊತ್ತಾ? – Kannada News | Vastu for Electronics: Solve Malfunctions and Rahu Dosha in Your Home

ಮನೆಯಲ್ಲಿನ ಶಕ್ತಿಯ ಅಸಮತೋಲನವು ಮನೆಯಲ್ಲಿರುವ ಎಲೆಕ್ಟ್ರಾನಿಕ್ ಸಾಧನಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಎಲೆಕ್ಟ್ರಾನಿಕ್ ಸಾಧನಗಳು ಅಗ್ನಿ ಅಂಶಕ್ಕೆ ಸಂಬಂಧಿಸಿವೆ, ಆದ್ದರಿಂದ ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸದಿದ್ದರೆ, ಮನೆಯ ಶಕ್ತಿಯ ಸಮತೋಲನವು ತೊಂದರೆಗೊಳಗಾಗುತ್ತದೆ. ಮನೆಯಲ್ಲಿ ಅಸ್ತವ್ಯಸ್ತವಾಗಿರುವ ರೀತಿಯಲ್ಲಿ ಇರಿಸಲಾಗಿರುವ ಎಲೆಕ್ಟ್ರಾನಿಕ್ ವಸ್ತುಗಳು, ಫ್ರಿಡ್ಜ್, ಟಿವಿ, ಆರ್‌ಒ, ಮಿಕ್ಸರ್, ದೀಪಗಳು, ಫ್ಯಾನ್‌ಗಳು ದೋಷಗಳಿಗೆ ಕಾರಣ ಮತ್ತು ರಾಹು ದುರ್ಬಲ ಸ್ಥಾನದಲ್ಲಿರುವುದೇ ಕಾರಣ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ, ಅಗ್ನಿ ಅಂಶವು ಎಲೆಕ್ಟ್ರಾನಿಕ್ ಸಾಧನಗಳೊಂದಿಗೆ…

Read More

ಹಾರ್ಮುಜ್ ಜಲಸಂಧಿಯ ತಲೆನೋವೇ ಬೇಡ; ಆಯಿಲ್ ಪೈಪ್​ಲೈನ್ ಯೋಜನೆ ಜಾರಿಗೆ ಯುಎಇ ಮುಂದು – Kannada News | UAE’s New Pipeline Project: Enhancing Energy Security & Global Oil Supply from Fujairah

ಆಯಿಲ್ ಪೈಪ್​ಲೈನ್ ಯೋಜನೆImage Credit source: AI/Mediaforge/TV9 ದುಬೈ, ಮೇ 15: ತೈಲ ರಫ್ತು ವಿಸ್ತರಿಸಲು ಮತ್ತು ಸುಗಮಗೊಳಿಸಲು ಯುಎಇ ದೇಶವು ತನ್ನ ಆಯಿಲ್ ಪೈಪ್​ಲೈನ್ ಯೋಜನೆಯ (UAE Oil Pipeline Project) ಕಾರ್ಯಕ್ಕೆ ಚುರುಕು ನೀಡಲು ನಿರ್ಧರಿಸಿದೆ. ಹಾರ್ಮುಜ್ ಜಲಸಂಧಿಯು (Strait of Hormuz) ಇರಾನ್-ಅಮೆರಿಕ ಯುದ್ಧದಿಂದಾಗಿ ತಡೆಗೊಂಡಿರುವುದರಿಂದ ತೈಲ ಪೂರೈಕೆಯಲ್ಲಿ ಬಹಳ ವ್ಯತ್ಯಯ ಆಗಿದೆ. ಯುಎಇ ಇತ್ಯಾದಿ ಗಲ್ಫ್ ರಾಷ್ಟ್ರಗಳ ತೈಲ ರಫ್ತಿಗೆ ಸಂಚಕಾರವಾಗಿದೆ. ಹೀಗಾಗಿ, ತೈಲ ರಫ್ತಿಗೆ ಹಾರ್ಮುಜ್ ಜಲಸಂಧಿಯ ಮೇಲೆ ಅವಲಂಬನೆ…

Read More