ಬೀದಿ ನಾಯಿ ಹಾವಳಿಗೆ ಬೇಸತ್ತು ದೇವರ ಮೊರೆ! ಅಪಾರ್ಟ್ಮೆಂಟ್ ನಿವಾಸಿಗಳಿಂದ ಕಾಲಭೈರವನಿಗೆ ಪೂಜೆ-ಪುನಸ್ಕಾರ
ಬೆಂಗಳೂರು, ಮಾರ್ಚ್ 23: ನಗರದಲ್ಲಿ ಬೀದಿ ನಾಯಿಗಳ (Dogs) ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚುತ್ತಿದೆ. ಇದರಿಂದಾಗಿ ರಸ್ತೆಯಲ್ಲಿ ಓಡಾಡುವುದೂ ಕಷ್ಟವಾಗಿದೆ. ಪುಟ್ಟ ಮಕ್ಕಳು, ವೃದ್ಧರಿಗೇನಾದರೂ ಅಪಾಯವಾದರೆ ಎಂಬ ಭಯದ ವಾತಾವರಣವಿರುವ ನಡುವೆಯೇ ನಗರದ ಅಪಾರ್ಟ್ಮೆಂಟ್ವೊಂದರ ನಿವಾಸಿಗಳು ದೇವರ ಮೊರೆ ಹೋಗಿದ್ದು ಆಶ್ಚರ್ಯ ಮೂಡಿಸಿದೆ. ಬೀದಿ ನಾಯಿ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಜೆಪಿ ನಗರದ ಎಲಿಟಾ ಪ್ರೊಮೆನೇಡ್ ಅಪಾರ್ಟ್ಮೆಂಟ್ ನಿವಾಸಿಗಳು ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದು, ನಿವಾಸಿಗಳು ಕಾಲಭೈರವ ಮತ್ತು ದತ್ತಾತ್ರೇಯ ಸ್ವಾಮಿಗೆ ವಿಶೇಷ…