ಕಾರವಾರದಲ್ಲಿ ಐಎನ್ಎಸ್ ವಾಗ್ಶೀರ್ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಜಲಾಂತರ್ಗಾಮಿ ಯಾನ – Kannada News | President Droupadi Murmu undertakes Historic Submarine Sortie Aboard INS Vaghsheer From Karwar
ನವದೆಹಲಿ, ಡಿಸೆಂಬರ್ 28: ರಾಷ್ಟ್ರಪತಿ ದ್ರೌಪದಿ ಮುರ್ಮು ಕಾರವಾರದ ನೌಕಾನೆಲೆಯಿಂದ ತಮ್ಮ ಮೊದಲ ಜಲಾಂತರ್ಗಾಮಿ ಪ್ರಯಾಣವನ್ನು ನಡೆಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಐಎನ್ಎಸ್ ವಾಗ್ಶೀರ್ನಲ್ಲಿ ಸಮುದ್ರ ತೀರದಲ್ಲಿ ಹಾರಾಟ ನಡೆಸಿದರು. ಹಾರಾಟದ ಸಮಯದಲ್ಲಿ ಭಾರತದ ಕಡಲ ಕಾರ್ಯತಂತ್ರದಲ್ಲಿ ಜಲಾಂತರ್ಗಾಮಿ ಪಡೆಯ ಪಾತ್ರ ಮತ್ತು ರಾಷ್ಟ್ರೀಯ ಕಡಲ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಕಾರ್ಯಾಚರಣೆಯ ಸಾಮರ್ಥ್ಯಗಳು ಮತ್ತು ಕೊಡುಗೆಗಳ ಬಗ್ಗೆ ರಾಷ್ಟ್ರಪತಿಗಳಿಗೆ ವಿವರಿಸಲಾಯಿತು. ಈ ಮೂಲಕ ಇಂತಹ ಕಾರ್ಯಾಚರಣೆಯನ್ನು ಕೈಗೊಂಡ ಭಾರತದ ಎರಡನೇ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ….