ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ‘ಧುರಂಧರ್’ ನಟ ಆರ್. ಮಾಧವನ್: ವಿಡಿಯೋ ನೋಡಿ.. – Kannada News | Dhurandhar actor R Madhavan receives Padma Shri Award from President Droupadi Murmu
ನವದೆಹಲಿ: ಖ್ಯಾತ ನಟ ಆರ್. ಮಾಧವನ್ (R. Madhavan) ಅವರಿಗೆ ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ’ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಧವನ್‌ಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ವಿಶೇಷ ಕ್ಷಣಕ್ಕೆ ಮಾಧವನ್ ಅವರ ಪತ್ನಿ ಸರಿತಾ ಹಾಗೂ ಪುತ್ರ ವೇದಾಂತ್ ಸಾಕ್ಷಿಯಾದರು. ಮಾಧವನ್ ಅವರು ಪ್ರಶಸ್ತಿ ಸ್ವೀಕರಿಸಲು ವೇದಿಕೆಯತ್ತ ಹೆಜ್ಜೆ ಹಾಕುತ್ತಿದ್ದಂತೆ, ಪ್ರೇಕ್ಷಕರ ಸಾಲಿನಲ್ಲಿದ್ದ ಪತ್ನಿ ಸರಿತಾ ಮತ್ತು ಮಗ…