ತಾಂತ್ರಿಕ ದೋಷ, 30 ನಿಮಿಷಗಳ ಕಾಲ ಮಾಲ್‌ನ ಲಿಫ್ಟ್ನಲ್ಲಿ ಸಿಲುಕಿದ 13 ಮಂದಿ, ಉಸಿರುಗಟ್ಟಿ ಪ್ರಜ್ಞೆ ತಪ್ಪಿ ಬಿದ್ದ ಬಾಲಕಿ – Kannada News | Bareilly Mall Lift Snags: 13 Trapped 30 Mins, Girl Faints Due to Suffocation
ಲಿಫ್ಟ್ -ಸಾಂದರ್ಭಿಕ ಚಿತ್ರ Image Credit source: India Today ಬರೇಲಿ, ಜೂನ್ 23: ಉತ್ತರ ಪ್ರದೇಶದ ಬರೇಲಿ ನಗರದ ಪ್ರಸಿದ್ಧ ‘ಸಿಟಿ ಸೆಂಟರ್ ಎಲ್‌ಎ ಮಾಲ್’ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ರಾತ್ರಿ ಇದ್ದಕ್ಕಿದ್ದಂತೆ ವಿದ್ಯುತ್ ಕೈಕೊಟ್ಟ ಕಾರಣ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 13 ಪ್ರಯಾಣಿಕರು ಮಾಲ್‌ನ ಲಿಫ್ಟ್(Lift) ಒಳಗೆ ಬರೋಬ್ಬರಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡು ನರಕಯಾತನೆ ಅನುಭವಿಸಿದ್ದಾರೆ. ಮಾಲ್‌ನ ನಿರ್ಲಕ್ಷ್ಯ ಮತ್ತು ಕಳಪೆ ಭದ್ರತಾ ವ್ಯವಸ್ಥೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ…