ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಒಣಗಿಸಲು ಜಸ್ಟ್ ಈ ಸರಳ ಮಾರ್ಗಗಳನ್ನು ಅನುಸರಿಸಿ – Kannada News | You can easily dry clothes during the rainy season with this simple method
ಒಂದೆರಡು ದಿನಗಳಿಂದ ರಾಜ್ಯದ ಕೆಲವು ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೆರೆ, ಗುಡ್ಡ ಕುಸಿತದಂತಹ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಒಗೆದ ಬಟ್ಟೆ (Cloth) ಒಣಗುತ್ತಿಲ್ಲ ಅನ್ನೋ ಟೆನ್ಷನ್. ಹೌದು ಸೂರ್ಯನ ಬೆಳಕಿನ ಕೊರತೆ, ತೇವಯುಕ್ತ ವಾತಾವರಣ ಇವೆಲ್ಲದರ ಕಾರಣದಿಂದಾಗಿ ಮಳೆಗಾಲದಲ್ಲಿ ಬಟ್ಟೆಗಳು ಸರಿಯಾಗಿ ಒಣಗುವುದೇ ಇಲ್ಲ. ಬಟ್ಟೆ ಸರಿಯಾಗಿ ಒಣಗದಿದ್ದರೆ ಕೆಟ್ಟ ವಾಸನೆ ಕೂಡ ಬರುತ್ತದೆ. ಹೀಗಿರುವಾಗ ಈ ಕೆಲವೊಂದು ಸರಳ ವಿಧಾನಗಳ ಮೂಲಕ ಬಟ್ಟೆಗಳನ್ನು ಸುಲಭವಾಗಿ ಒಣಗಿಸಬಹುದು. ಈ ಕುರಿತ…