2 ವರ್ಷದಿಂದ ಮದುವೆಗೆ ದುಂಬಾಲು: ಯುವಕ ಕೊನೆಗೆ ಪೇಯಸಿಗೆ ಮಾಡಿದ್ದೇನು ಗೊತ್ತಾ?
ಬೆಳಗಾವಿ, ಮಾರ್ಚ್ 18: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನೋರ್ವ ಯುವತಿಯ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದಿದ್ದು (Assault), ಅಷ್ಟೇ ಅಲ್ಲದೆ ಆಕೆಯ ತಂದೆ, ತಾಯಿ ಮೇಲೂ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿಯಲ್ಲಿ ನಡೆದಿದೆ. ವಿದ್ಯಾಶ್ರೀ ಕಿಲಾರಿ ಮೇಲೆ ಬೀರಪ್ಪ ರಾಮಪ್ಪ ಕಜ್ಜನ್ನವರ ಎಂಬಾತನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ಎರಡು ವರ್ಷಗಳಿಂದ ವಿದ್ಯಾಶ್ರೀ ಮದುವೆ ಮಾಡಿಕೊಡುವಂತೆ ಬೀರಪ್ಪ ರಾಮಪ್ಪ ಕಜ್ಜನ್ನವರ ದುಂಬಾಲು ಬಿದ್ದಿದ್ದ. ಆದರೆ ಬೀರಪ್ಪನಿಗೆ…