Headlines

Video: ಅಂತಿಮ ಕ್ಷಣದವರೆಗೂ ಗೆಲ್ಲುವುದಿಲ್ಲವೇನೋ ಎಂಬ ಆತಂಕವಿತ್ತು, ಕೊನೆಗೂ ಗೆದ್ರು ನಮ್ಮ ಹುಡುಗಿಯರು – Kannada News | Excitement Erupts as RCB Women Secure Second WPL Title with Thrilling Victory

ನೆನ್ನೆ ನಡೆದ (ಫೆ.5) ಮಹಿಳಾ ಪ್ರೀಮಿಯರ್ ಲೀಗ್ (WPL) ಪಂದ್ಯಾವಳಿಯಲ್ಲಿ ಆರ್​​ಸಿಬಿ ಮಹಿಳಾ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಇದು ತಂಡದ ಎರಡನೇ WPL ಪ್ರಶಸ್ತಿಯಾಗಿದೆ. ಗುಜರಾತ್‌ನ ವಡೋದರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಆರ್​ಸಿಬಿ ಹುಡುಗಿಯರು ರೋಚಕ ವಿಜಯ ಸಾಧಿಸಿ ಕಪ್ ಎತ್ತಿ ಹಿಡಿದರು. ಡೆಲ್ಲಿ ಕ್ಯಾಪಿಟಲ್ಸ್ ಸತತ ನಾಲ್ಕನೇ ಬಾರಿಗೆ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ಪಂದ್ಯದ ಆರಂಭಿಕ ಹಂತದಲ್ಲಿ ಆರ್​ಸಿಬಿ ತಂಡದ ಗೆಲುವಿನ ಬಗ್ಗೆ ಕೆಲವು ಅಭಿಮಾನಿಗಳಲ್ಲಿ ಸಂದೇಹಗಳಿದ್ದವು….

Read More

ಚಿನ್ನ, ಬೆಳ್ಳಿ ದರ ಇನ್ನಷ್ಟು ಏರಿಕೆಯಾಗೋದು ಫಿಕ್ಸ್: ಆಮದು ಸುಂಕ ಭರ್ಜರಿ ಹೆಚ್ಚಿಸಿದ ಕೇಂದ್ರ ಸರ್ಕಾರ – Kannada News | Gold and Silver Prices to Surge in India as Govt Hikes Import Duty to 15 percent Following PM Modi’s Appeal

ನವದೆಹಲಿ, ಮೇ 13: ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ (Gold and Silver) ಮೇಲಿನ ಆಮದು ಸುಂಕವನ್ನು (Customs Duty) ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾಡಿದ ‘ಆರ್ಥಿಕ ಮಿತವ್ಯಯ’ದ ಮನವಿಯ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ಇದರಿಂದ ಚಿನ್ನದ ದರ (Gold Rate) ಹಾಗೂ ಬೆಳ್ಳಿಯ ಬೆಲೆ ಹೆಚ್ಚಾಗಲಿದೆ. ಚಿನ್ನ…

Read More

ಅಡುಗೆ ಗ್ಯಾಸ್ ಸ್ಟಾಕ್ ಮಾಡುವ ಮುನ್ನ ಎಚ್ಚರ: ಇಷ್ಟು ದಿನದೊಳಗೆ ಬಳಸಿ ಮುಗಿಸಬೇಕು!

ಮನೆಯಲ್ಲಿ ಅಥವಾ ವಾಣಿಜ್ಯ ಬಳಕೆಗೆ ಅಡುಗೆ ಗ್ಯಾಸ್ (LPG) ಸಿಲಿಂಡರ್ ಅನ್ನು ಸಂಗ್ರಹಿಸಿಡುವಾಗ (Stock) ಅಥವಾ ಬಳಸುವಾಗ ಸುರಕ್ಷತೆಯ ದೃಷ್ಟಿಯಿಂದ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಸಿಲಿಂಡರ್ ಎಷ್ಟು ದಿನಗಳ ಒಳಗೆ ಖಾಲಿಯಾಗಬೇಕು ಮತ್ತು ಅದರ ಮೇಲೆ ನಮೂದಿಸಿರುವ ‘ಎಕ್ಸ್‌ಪೈರಿ ಡೇಟ್’ (Expiry Date) ಅನ್ನು ಹೇಗೆ ಗುರುತಿಸಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ. ಪ್ರತಿ ಗ್ಯಾಸ್ ಸಿಲಿಂಡರ್‌ನ ಮೇಲ್ಭಾಗದ ಮೂರು ಕಬ್ಬಿಣದ ಪಟ್ಟಿಗಳಲ್ಲಿ ಒಂದರ ಒಳಭಾಗದಲ್ಲಿ ಇಂಗ್ಲಿಷ್ ಅಕ್ಷರ ಮತ್ತು ಅಂಕಿಗಳನ್ನು ಬರೆಯಲಾಗಿರುತ್ತದೆ (ಉದಾಹರಣೆಗೆ: A-26,…

Read More

ಮಗಳಿಗೆ Miyou ಎಂದು ಹೆಸರಿಟ್ಟ ಅಟ್ಲಿ-ಪ್ರಿಯಾ; ಅರ್ಥವೇನು? – Kannada News | Atlee Priya Name Daughter Miyou: Meaning, Japanese Origin and Fan Reactions

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲಿ (Atlee) ಮತ್ತು ಅವರ ಪತ್ನಿ ಪ್ರಿಯಾ ತಮ್ಮ ಎರಡನೇ ಮಗುವಿನ ಹೆಸರನ್ನು ಘೋಷಿಸಿದ್ದಾರೆ. ಏಪ್ರಿಲ್ 20ರಂದು ಹೆಣ್ಣು ಮಗುವನ್ನು ಸ್ವಾಗತಿಸಿದ್ದ ಈ ಜೋಡಿ, ಈಗ ಮಗಳಿಗೆ ‘ಮಿಯು’ (Miyou) ಎಂದು ನಾಮಕರಣ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಪುಟ್ಟ ಕೈಯನ್ನು ಹಿಡಿದುಕೊಂಡಿರುವ ಸುಂದರವಾದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಅಟ್ಲಿ ದಂಪತಿ ಈ ವಿಷಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಟ್ಲಿ ಮತ್ತು ಪ್ರಿಯಾ ಇಟ್ಟಿರುವ ಈ ‘ಮಿಯು’ ಹೆಸರು ಸದ್ಯ ಎಲ್ಲರ ಗಮನ…

Read More

ಪಾರ್ಕಿಂಗ್ ವಿಚಾರಕ್ಕೆ ಜಗಳ, ಡ್ರೈವರ್ ತಲೆ ಕತ್ತರಿಸಿದ ವ್ಯಕ್ತಿ, ಪೊಲೀಸರೆದುರೇ ಆರೋಪಿಯನ್ನು ಕೊಂದ ಜನ

ಪಾಟ್ನಾ, ಏಪ್ರಿಲ್ 10: ಕಾನೂನು ಕೈಗೆತ್ತಿಕೊಂಡರೆ ಆಗುವ ಅನಾಹುತಕ್ಕೆ ಬಿಹಾರದ ಅರಾರಿಯಾ ಜಿಲ್ಲೆಯ ಫೋರ್ಬ್ಸ್‌ಗಂಜ್ ಸಾಕ್ಷಿಯಾಗಿದೆ. ಗುರುವಾರ ಇಲ್ಲಿ ನಡೆದ ಅವಳಿ ಕೊಲೆ(Murder)ಗಳು ಕೇವಲ ಕ್ರೌರ್ಯದ ಪರಾಕಾಷ್ಠೆಯಲ್ಲ, ಬದಲಿಗೆ ಕಾನೂನು ಸುವ್ಯವಸ್ಥೆಯ ವೈಫಲ್ಯದ ಪ್ರತಿಬಿಂಬದಂತಿದೆ. ಘಟನೆಯ ಆರಂಭವಾಗಿದ್ದು ಒಂದು ಸಣ್ಣ ಪಾರ್ಕಿಂಗ್ ವಿವಾದದಿಂದ. ರಸ್ತೆಬದಿಯ ವ್ಯಾಪಾರಿ ರವಿ ಚೌಹಾಣ್ ಹಾಗೂ ಪಿಕಪ್ ಚಾಲಕ ಅಲಿ ಹುಸೇನ್ ನಡುವೆ ವಾಹನ ನಿಲ್ಲಿಸುವ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ‘ಈ ಸಣ್ಣ ಜಗಳ ವಿಕೋಪಕ್ಕೆ ತಿರುಗಿದಾಗ, ರವಿ ಚೌಹಾಣ್ ಅತ್ಯಂತ…

Read More

‘ಜಾಂಬಿ ಡ್ರಗ್’ ಬಗ್ಗೆ ದುನಿಯಾ ವಿಜಿ ಆತಂಕ: ಯುವಕರು, ಪೋಷಕರಿಗೆ ಮನವಿ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಲ ವಿಡಿಯೋಗಳು ವೈರಲ್ ಆಗುತ್ತಿವೆ. ಲೋಕದ ಪರಿವೆ ಇಲ್ಲದೆ ನಿಂತಿದ್ದ ಕಡೆಯೇ ನಿಂತು, ವಾಲಾಡುತ್ತಾ ಇರುವ ಯುವಕರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅವರ ಈ ಸ್ಥಿತಿಗೆ ಹೊಸದಾಗಿ ಬಂದಿರುವ ಜಾಂಬಿ ಡ್ರಗ್ (Zombie drug) ಕಾರಣ ಎನ್ನಲಾಗುತ್ತಿದೆ. ‘ಜಾಂಬಿ ಡ್ರಗ್’ ಮಾದಕ ವಸ್ತು ಸೇವಿಸಿದರೆ ಹೀಗೆ ಯುವಕರು ನಿಂತಿದ್ದ ಕಡೆಯೇ ನಿಂತಿರುತ್ತಾರೆ, ಸಿನಿಮಾಗಳ ಬರುವ ಜಾಂಬಿ ರೀತಿಯ ಸ್ಥಿತಿಗೆ ತಲುಪುತ್ತಾರೆ ಎನ್ನಲಾಗುತ್ತಿದೆ. ಈ ರೀತಿಯ ಮಾದಕ ವಸ್ತು ಬೆಂಗಳೂರಿಗೂ ಬಂದಿದೆ…

Read More

ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಪ್ರಧಾನಿ ಮೋದಿ – Kannada News | PM Narendra Modi inaugurates Seva Teerth New Prime Minister office address in Delhi

ನವದೆಹಲಿ, ಫೆಬ್ರವರಿ 13: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ದೆಹಲಿಯ ನೂತನ ಪ್ರಧಾನಮಂತ್ರಿ ಕಚೇರಿಯ ಕಾಂಪ್ಲೆಕ್ಸ್​​ನ ಹೆಸರನ್ನು ಉದ್ಘಾಟಿಸಿದರು. ಈ ಕಟ್ಟಡಕ್ಕೆ ಸೇವಾ ತೀರ್ಥ (Seva Teerth) ಎಂದು ಹೆಸರಿಡಲಾಗಿದೆ. ಈ ಹೆಸರಿನ ಕೆಳಗೆ ನಾಗರಿಕ ದೇವೋ ಭವ (ಪ್ರಜೆಗಳೇ ದೇವರು) ಎಂದು ಕೂಡ ಬರೆಯಲಾಗಿದೆ. ಈ ಮೂಲಕ ಪ್ರಧಾನಮಂತ್ರಿ ಕಚೇರಿಗೆ ಶಾಶ್ವತವಾಗಿ ಹೊಸ ವಿಳಾಸ ಸಿಕ್ಕಂತಾಗಿದೆ. ಈ ಹೊಸ ಕಟ್ಟಡ ಪ್ರಧಾನ ಮಂತ್ರಿ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು…

Read More

George Kurian Resigns: ಕೇಂದ್ರ ಸಚಿವ ಜಾರ್ಜ್ ಕುರಿಯನ್ ರಾಜೀನಾಮೆ – Kannada News | George Kurian Resigns as Union Minister: Rajya Sabha Term Ends, BJP Leader Steps Down

ನವದೆಹಲಿ, ಜೂನ್ 23: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮೀನುಗಾರಿಕೆ ಇಲಾಖೆಯ ರಾಜ್ಯ ಸಚಿವ (MoS), ಹಿರಿಯ ಬಿಜೆಪಿ ನಾಯಕ ಜಾರ್ಜ್ ಕುರಿಯನ್(George Kurian) ಅವರು ಮಂಗಳವಾರ ತಮ್ಮ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಅವರ ಆರು ವರ್ಷಗಳ ರಾಜ್ಯಸಭಾ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರು ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 75ನೇ ವಿಧಿಯ ಷರತ್ತು (2) ರ ಅಡಿಯಲ್ಲಿ…

Read More

TV9 Kannada News Live: ವಚನಾನಂದ ಶ್ರೀಗೆ ಜಾಮೀನು ಮಂಜೂರು; ಕಾಂಗ್ರೆಸ್​​ ಕೇರಳದಲ್ಲಿ ಗದ್ದುಗೆ, ತಮಿಳುನಾಡಿನಲ್ಲಿ ವಿಜಯ್ ಜೊತೆ ಮೈತ್ರಿ! – Kannada News | TV9 Kannada News Live: Dog Bite Epidemic, Swamiji Bail and Key Political Shifts

ಬೆಂಗಳೂರು, ಮೇ.6; ದೇಶದ ರಾಜಕಾರಣದಲ್ಲಿ ದೊಡ್ಡಮಟ್ಟದ ಬದಲಾವಣೆಗಳು ಕಂಡು ಬಂದಿದೆ. ಪಂಚ ರಾಜ್ಯಗಳ ಚುನಾವಣೆಯ ನಂತರ ರಾಜಕೀಯದಲ್ಲಿ ಭಾರೀ ಸಂಚಲ ಮೂಡಿಸಿದೆ. ಇನ್ನು ಬೆಂಗಳೂರಿನಲ್ಲಿ ಇಂದು ಮಳೆಯಾಗುವ ಸಾಧ್ಯ ಇದೆ ಎಂದು ಹೇಳಲಾಗಿದೆ. ಮಠದ ಹಾಸ್ಟೆಲ್ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯವರಿಗೆ ದಾವಣಗೆರೆ ವಿಶೇಷ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸಿಲಿಕಾನ್ ಸಿಟಿ ಸೇರಿದಂತೆ ಕರ್ನಾಟಕದಾದ್ಯಂತ ಬೇಸಿಗೆಯ ತಾಪಮಾನ ಏರುತ್ತಿದ್ದಂತೆ ನಾಯಿಗಳ ವರ್ತನೆಯಲ್ಲಿ ಆಕ್ರಮಣಶೀಲತೆ…

Read More

ಬಿರಿಯಾನಿ ಕೊಟ್ಟು ಸಿನಿಮಾ ತೋರಿಸುತ್ತಿದ್ದಾರೆ: ನಿರ್ಮಾಪಕರ ಟೀಕಿಸಿದ ಕೆ ಮಂಜು – Kannada News | K Manju talks about wrong practices of some movie producers

ಸಿನಿಮಾ (Ciema) ಮಂದಿರಗಳಿಗೆ ಪ್ರೇಕ್ಷಕರನ್ನು ಕರೆದುಕೊಂಡು ಬರುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರೇಕ್ಷಕರನ್ನು ಸಿನಿಮಾ ಮಂದಿರಕ್ಕೆ ಕರೆದುಕೊಂಡು ಬರಲು ಕೆಲ ನಿರ್ಮಾಪಕರು ಅಡ್ಡ ದಾರಿ ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಕೆ ಮಂಜು, ‘ಸಾಲ ಮಾಡಿ ಸಿನಿಮಾ ನಿರ್ಮಿಸಿ, ಟಿಕೆಟ್ ಹಣ ಕೊಟ್ಟು, ಬಿರಿಯಾನಿ ಹಾಕಿಸಿ ಸಿನಿಮಾವನ್ನು ಜನರಿಗೆ ತೋರಿಸುತ್ತಿರುವ ನಿರ್ಮಾಪಕರು ಇದ್ದಾರೆ. ದಯವಿಟ್ಟು ಹೀಗೆಲ್ಲ ಮಾಡಬೇಡಿ, ಇದು ಬಹಳ ತಪ್ಪು’ ಎಂದು ಕೆ ಮಂಜು ಹೇಳಿದ್ದಾರೆ. ವಿಡಿಯೋ ನೋಡಿ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ…

Read More