ರೈಲ್ವೆ ಇಲಾಖೆಯಿಂದ ಮತ್ತೊಮ್ಮೆ ಕನ್ನಡಕ್ಕೆ ಮಲತಾಯಿ ಧೋರಣೆ: ಸಿಡಿದೆದ್ದ ಕರವೇ
ಹುಬ್ಬಳ್ಳಿ, ಮಾರ್ಚ್ 17: ರೈಲ್ವೆ ಪರೀಕ್ಷೆಗಳಲ್ಲಿ (Railway Exam) ಮೇಲಿಂದ ಮೇಲೆ ಕನ್ನಡಿಗರಿಗೆ ಅನ್ಯಾಯವಾಗುತ್ತಲೇ ಇದೆ. ಈ ಹಿಂದೆ ಅನೇಕ ರೈಲ್ವೆ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡುವಂತೆ ಹೋರಾಟ ಮಾಡಿ ಅವಕಾಶ ಪಡೆಯಲಾಗಿತ್ತು. ಇದೀಗ ರೈಲ್ವೆ ಇಲಾಖೆಯ ಪದೋನ್ನತಿ ಪರೀಕ್ಷೆಯಲ್ಲಿ ಕೂಡ ಕನ್ನಡಕ್ಕೆ ಮಲತಾಯಿ ಧೋರಣೆ ಮಾಡಲಾಗಿದೆ. ಕೇವಲ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಇದನ್ನು ಖಂಡಿಸಿ ಇಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸಂಘಟನೆ ರೈಲ್ವೆ ನೇಮಕಾತಿ ಕಚೇರಿಗೆ…