ಬಾಕ್ಸ್​ ಆಫೀಸ್​​ನಲ್ಲಿ ಸುನಾಮಿ ಎಬ್ಬಿಸಿದ ‘ದೃಶ್ಯಂ 3’; ಮೊದಲ ದಿನ ಭರ್ಜರಿ ಕಲೆಕ್ಷನ್ – Kannada News | Drishyam 3 Box Office: Mohanlal’s Thriller Creates Storm, Earns 43.37 Cr Global on Day 1

ಮಲಯಾಳಂ ಚಿತ್ರರಂಗದಲ್ಲಿ ‘ದೃಶ್ಯಂ 3’ ಚಿತ್ರಕ್ಕೆ ಅದರದ್ದೇ ಆದ ದೊಡ್ಡ ಅಭಿಮಾನಿ ವರ್ಗ ಇದೆ. ಹಿರಿಯ ನಟ ಮೋಹನ್‌ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ದೃಶ್ಯಂ 3’ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಜಾರ್ಜ್‌ಕುಟ್ಟಿ ಮತ್ತು ಆತನ ಕುಟುಂಬದ ರಹಸ್ಯಗಳ ಸುತ್ತ ಹೆಣೆಯಲಾದ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ಮೊದಲ ದಿನದ ಕಲೆಕ್ಷನ್ ವಿವರ: ದೇಶಾದ್ಯಂತ ಒಟ್ಟು 5,506 ಶೋಗಳ…

Read More

ನರೇಂದ್ರ ಮೋದಿ ಮಲೇಷ್ಯಾ ಭೇಟಿ; ಯುಪಿಐನಿಂದ ಹಿಡಿದು ಸೆಮಿಕಂಡಕ್ಟರ್​ವರೆಗೆ ಹಲವು ಜಂಟಿ ಉಪಕ್ರಮಗಳ ಅನಾವರಣ – Kannada News | Narendra Modi Malaysia visit leads 16 initiatives to be announced jointly by 2 countries

ಕೌಲಾಲಂಪುರ್, ಫೆಬ್ರುವರಿ 8: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮಲೇಷ್ಯಾ ಭೇಟಿ ಫಲಪ್ರದವಾಗಿದೆ. ಇಂದು ಭಾನುವಾರ ವಿವಿಧ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ಸಹಕಾರ ಇರುವ ಹಲವು ಉಪಕ್ರಮಗಳನ್ನು ಘೋಷಿಸಲಾಗಿದೆ. ಈ ವರ್ಷದ ಮೊದಲ ವಿದೇಶ ಭೇಟಿಯಾಗಿ ಮಲೇಷ್ಯಾಗೆ ಹೋಗಿದ್ದ ಮೋದಿ ಅವರು ಅಲ್ಲಿಯ ಪ್ರಧಾನಿ ದಾತು ಸೆರಿ ಅನ್ವರ್ ಇಬ್ರಾಹಿಂ (Dato Seri Anwar Ibrahim) ಅವರೊಂದಿಗೆ ಮಾತುಕತೆಗಳನ್ನು ನಡೆಸಿದರು. ಭಾರತ ಮತ್ತು ಮಲೇಷ್ಯಾದಿಂದ ಘೋಷಣೆಯಾದ ಕೆಲ ಜಂಟಿ ಉಪಕ್ರಮಗಳು ಮಲೇಷ್ಯಾದಲ್ಲಿ…

Read More

ಬೇಲೂರಿನಲ್ಲಿ ಪ್ರಕೃತಿ ವಿಸ್ಮಯ: ಚನ್ನಕೇಶವನ ಪಾದ ಸೋಕಿದ ಸೂರ್ಯರಶ್ಮಿ! ವರ್ಷಕ್ಕೊಮ್ಮೆ ನಡೆಯುವ ಅಪರೂಪದ ವಿದ್ಯಮಾನಕ್ಕೆ ಭಕ್ತರು ಫಿದಾ – Kannada News | Hoysala Architectural Wonder: Belur Chennakeshava Temple’s Annual Sun Ray Miracle

ಹಾಸನ, ಏ.22 : ವಿಶ್ವವಿಖ್ಯಾತ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಇಂದು ಮುಂಜಾನೆ ಅಪರೂಪದ ಪ್ರಕೃತಿ ವಿಸ್ಮಯವೊಂದು ಸಂಭವಿಸಿದೆ. ಪ್ರತಿವರ್ಷದಂತೆ ಈ ಬಾರಿಯೂ ಸೂರ್ಯನ ಕಿರಣಗಳು ದೇಗುಲದ ಗರ್ಭಗುಡಿಯನ್ನು ಪ್ರವೇಶಿಸಿ, ಚನ್ನಕೇಶವಸ್ವಾಮಿಯ ಮೂಲ ವಿಗ್ರಹಕ್ಕೆ ‘ಕಿರಣಾಭಿಷೇಕ’ ಮಾಡಿವೆ. ಹೊಯ್ಸಳರ ವಾಸ್ತುಶಿಲ್ಪದ ವೈಭವಕ್ಕೆ ಸಾಕ್ಷಿಯಾಗಿರುವ ಈ ದೇಗುಲದಲ್ಲಿ ಪ್ರತಿವರ್ಷ ಏಪ್ರಿಲ್ 21 ಅಥವಾ 22ರಂದು ಈ ವಿಶೇಷ ವಿದ್ಯಮಾನ ಘಟಿಸುತ್ತದೆ. ಇಂದು ಮುಂಜಾನೆ ಸೂರ್ಯೋದಯದ ವೇಳೆಗೆ ಭಕ್ತರು ಈ ಮನೋಹರ ದೃಶ್ಯಕ್ಕೆ ಸಾಕ್ಷಿಯಾದರು. ಮುಂಜಾನೆ ಸರಿಯಾಗಿ 6…

Read More

ನಾನು ಸರ್ಕಾರ ಅಲ್ಲ, ಸಚಿವ ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ ಹೀಗೆ ಹೇಳಿದ್ಯಾಕೆ? – Kannada News | Im Not a Minister, no power Says Congress MLA Basavaraj rayareddy In Koppal

ಕೊಪ್ಪಳ, (ಏಪ್ರಿಲ್ 20): ಇತ್ತೀಚೆಗೆ ಕೊಪ್ಪಳದಲ್ಲಿ ಜಿಲ್ಲೆಗಯಲ್ಲಿ ಮೂರ್ತಿಗಳ ಭಗ್ನ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂಬೇಡ್ಕರ್ ಹಾಗೂ ದೇವರುಗಳ ಮೂರ್ತಿಗಳಿಗೆ ಕಿಡಿಗೇಡಿಗಳು ಹಾನಿ ಮಾಡುತ್ತಿದ್ದಾರೆ. ಮೂರ್ತಿಗಳ ಬಳಿ ಸಿಸಿ ಟಿವಿ ಅಳವಡಿಸಲು ನಿರ್ದೇಶನ ಮಾಡುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ (Basavaraj rayareddy) ,ನಾನ ಮಾಡಲ್ಲ, ಸರ್ಕಾರ ಮಾಡಬೇಕು. ಶಾಸಕರಿಗೆ ಅಧಿಕಾರ ಇರಲ್ಲ. ಮಂತ್ರಿಗೆ ಅಧಿಕಾರ ಇರತ್ತೆ. ನಾನು ಸಲಹೆಗಾರ ಮಾತ್ರ. ಮಂತ್ರಿ ಅಲ್ಲ. ನನನೆ ಸಚಿವ ಸಂಪುಟ ಸ್ಥಾನ…

Read More

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ; ಎಸ್‌ಎಸ್‌ಸಿ ಸ್ಟೆನೋಗ್ರಾಫರ್ ಹುದ್ದೆಗಳ ಸಂಖ್ಯೆ 1,170ಕ್ಕೆ ಹೆಚ್ಚಳ! – Kannada News

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿImage Credit source: Pinterest ದೇಶಾದ್ಯಂತ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಪಡೆಯಲು ಸಿದ್ಧತೆ ನಡೆಸುತ್ತಿರುವವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಸಿಬ್ಬಂದಿ ನೇಮಕಾತಿ ಆಯೋಗವು (SSC) ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ಗ್ರೇಡ್ ‘ಡಿ’ ನೇಮಕಾತಿ 2026ರ ಪರಿಷ್ಕೃತ (Revised) ಹುದ್ದೆಗಳ ವಿವರವನ್ನು ಬಿಡುಗಡೆ ಮಾಡಿದೆ. ಈ ಹೊಸ ಪ್ರಕಟಣೆಯ ಪ್ರಕಾರ, ಒಟ್ಟು ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಈಗ ಒಟ್ಟು 1,170 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಹಿಂದೆ ಘೋಷಿಸಲಾಗಿದ್ದ ಹುದ್ದೆಗಳಿಗಿಂತ ಇದು…

Read More

ದಾವಣಗೆರೆ: ಕೌಟುಂಬಿಕ ಕಲಹಕ್ಕೆ ಮನನೊಂದು ಬಿಜೆಪಿ ಮುಖಂಡ ಆತ್ಮಹತ್ಯೆ – Kannada News | A BJP leader committed suicide due to family feud

ತನ್ನದೇ ಕಾರಿನಲ್ಲಿ ಬೆಂಕಿಹಚ್ಚಿಕೊಂಡು ದಾವಣಗೆರೆ ಪಾಲಿಕೆಯ ಮಾಜಿ ಸದಸ್ಯ ಚಂದ್ರಶೇಖರ್ ಸಂಕೋಲ್ ಆತ್ಮಹತ್ಯೆ ದಾವಣಗೆರೆ, ಜನವರಿ 11: ಜಿಲ್ಲೆಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಬಿಜೆಪಿ ಮುಖಂಡ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಇತ್ತೀಚೆಗೆ ಅವರ ಮಕ್ಕಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಇದರಿಂದ ಮನನೊಂದ ಮುಖಂಡ ತಮ್ಮ ಕಾರಿನಲ್ಲಿಯೇ ಬೆಂಕಿ ಹಚ್ಚಿಕೊಂಡು ಸಜೀವದಹನಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆ ಪಾಲಿಕೆಯ ಮಾಜಿ ಸದಸ್ಯ ಚಂದ್ರಶೇಖರ್ ಸಂಕೋಲ್ ಕಾರಿನಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು…

Read More

ಬೆಂಗಳೂರು: ಕುಡಿದ ನಶೆಯಲ್ಲಿ ಜನರ ಮೇಲೆ ಮಚ್ಚು, ಲಾಂಗು ಬೀಸಿದ ಪುಂಡರು, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ – Kannada News | Rowdyism in Bengaluru: Armed Gang Creates Ruckus in Nandini Layout, CCTV Captures Threat with Machete

ಬೆಂಗಳೂರು, ಮೇ 1: ಕುಡಿದ ನಶೆಯಲ್ಲಿ ಪುಂಡರ ಗ್ಯಾಂಗ್‌ವೊಂದು ಮಚ್ಚು ಲಾಂಗು ಹಿಡಿದು ದಾಂಧಲೆ ನಡೆಸಿದ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಏಪ್ರಿಲ್ 25ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪುಂಡರ ಅಟ್ಟಹಾಸಕ್ಕೆ ಸ್ಥಳೀಯರು ಬೆಚ್ಚಿಬೀಳುವಂತಾಗಿದೆ. ಏಪ್ರಿಲ್ 25ರಂದು ಸಂಜೆ ಸುಮಾರು 4:50ರ ಸಮಯದಲ್ಲಿ ಯುವಕನೊಬ್ಬ ಏರಿಯಾದಲ್ಲಿ ಮಚ್ಚು ಹಿಡಿದು ಓಡಾಡಿ ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ. ಪ್ರಶ್ನಿಸಿದ ಅಕ್ಕಪಕ್ಕದ ಮನೆಯವರಿಗೂ ಮಚ್ಚು ತೋರಿಸಿ ಹೆದರಿಸಿದ್ದಾನೆ. ಇದಾದ ಬಳಿಕ ಸಂಜೆ…

Read More

ನ್ಯೂಜಿಲೆಂಡ್​ನಲ್ಲಿ ಐಪಿಎಲ್​ ಮಾದರಿಯ ಟಿ20 ಲೀಗ್ ಆರಂಭ; ಎಷ್ಟು ತಂಡಗಳು ಕಣಕ್ಕೆ?

ವಿಶ್ವದಾದ್ಯಂತ ಟಿ20 ಲೀಗ್​ನ (T20 League) ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಗಮನಿಸಿರುವ ನಾನಾ ದೇಶಗಳು ತಮ್ಮ ದೇಶದಲ್ಲೂ ಟಿ20 ಲೀಗ್​ಗಳನ್ನು ಆರಂಭಿಸಿವೆ. ಅಂತಹ ದೇಶಗಳ ಸಾಲಿಗೆ ಇದೀಗ ನ್ಯೂಜಿಲೆಂಡ್ ದೇಶವೂ ಸೇರ್ಪಡೆಯಾಗುತ್ತಿದೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ವೆಸ್ಟ್ ಇಂಡೀಸ್, ಯುನೈಟೆಡ್ ಸ್ಟೇಟ್ಸ್ ಮತ್ತು ದುಬೈ ಈಗಾಗಲೇ ಟಿ20 ಲೀಗ್‌ಗಳನ್ನು ಪ್ರಾರಂಭಿಸಿ ಸಾಕಷ್ಟು ಯಶಸ್ಸು ಗಳಿಸಿವೆ. ಇದನ್ನು ಗಮನಿಸಿರುವ ನ್ಯೂಜಿಲೆಂಡ್ ತನ್ನದೇ ಆದ ಟಿ20 ಲೀಗ್ ಪ್ರಾರಂಭಿಸಲು ನಿರ್ಧರಿಸಿದೆ. ಈ ಲೀಗ್​ನಲ್ಲಿ 6 ತಂಡಗಳು ಭಾಗವಹಿಸಲಿದ್ದು, ಈ…

Read More

ಪಿಎಂ ಕಿಸಾನ್ ಯೋಜನೆಗೆ 7 ವರ್ಷ; 22ನೇ ಕಂತಿನ ಹಣ ಸದ್ಯದಲ್ಲೇ – Kannada News | Pm kisan samman nidhi yojana completes 7 years beneficiaries waiting for 22nd installment

ನವದೆಹಲಿ, ಫೆಬ್ರುವರಿ 26: ರೈತರಿಗೆ ವರ್ಷಕ್ಕೆ 6,000 ರೂ ನೀಡುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Yojana) ಶುರುವಾಗಿ ಮೊನ್ನೆಗೆ (ಫೆ. 24) ಏಳು ವರ್ಷ ಪೂರ್ಣವಾಗಿದೆ. 2019ರ ಫೆಬ್ರುವರಿ 24ರಂದು ಈ ಯೋಜನೆ ಆರಂಭವಾಯಿತು. ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ ಹಣವನ್ನು ರೈತರಿಗೆ ನೀಡುವ ಸ್ಕೀಮ್ ಇದು. ಈ ಏಳು ವರ್ಷದಲ್ಲಿ ಇಲ್ಲಿಯವರೆಗೆ 21 ಕಂತುಗಳಲ್ಲಿ ಕೋಟ್ಯಂತರ ರೈತರಿಗೆ ಹಣ ಬಿಡುಗಡೆ ಮಾಡಲಾಗಿದೆ. 21ನೇ ಕಂತಿನ ಹಣವನ್ನು 2025ರ ನವೆಂಬರ್…

Read More

ಸಫಾರಿಗೆ ತೆರಳಿದ ಪ್ರವಾಸಿಗರ ಮುಂದೆ ಸಕ್ಕತ್ತಾಗಿ ಪೋಸ್ ಕೊಟ್ಟ ಹುಲಿ! – Kannada News | Tigress Sighted at PG Palya Safari in MM Hills Wildlife Sanctuary Goes Viral

ಚಾಮರಾಜನಗರ, ಮೇ 22: ಮಲೆ ಮಹದೇಶ್ವರ ವನ್ಯಜೀವಿಧಾಮದ ಪಿಜಿ ಪಾಳ್ಯ ಸಫಾರಿ ಕೇಂದ್ರದಲ್ಲಿ ಪ್ರವಾಸಿಗರಿಗೆ ಅಚ್ಚರಿಯೊಂದು ಕಾದಿತ್ತು. ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಬೃಹತ್ ಹೆಣ್ಣು ಹುಲಿಯೊಂದು ರಾಜಗಾಂಭೀರ್ಯದಿಂದ ದರ್ಶನ ನೀಡಿದೆ. ಇತ್ತೀಚಿನ ದಿನಗಳಲ್ಲಿ ಪಿಜಿ ಪಾಳ್ಯ ಸಫಾರಿಯಲ್ಲಿ ಈ ಹೆಣ್ಣುಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ವ್ಯಾಘ್ರ ಮುಕ್ತವಾಗಿ ಸಂಚರಿಸುತ್ತಿರುವ ಈ ಅಪರೂಪದ ದೃಶ್ಯವನ್ನು ಹವ್ಯಾಸಿ ಛಾಯಗ್ರಾಹಕ ಹೇಮಂತ್ ಕುಮಾರ್ ಅವರು ತಮ್ಮ ಕ್ಯಾಮರಾದಲ್ಲಿ ಅತ್ಯಂತ ಸುಂದರವಾಗಿ ಸೆರೆಹಿಡಿದಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಿಜಿ…

Read More