‘ನಾನು ನಿರ್ಮಿಸಿದ ಎಲ್ಲಾ ಸಿನಿಮಾಗಳು ನಷ್ಟವನ್ನೇ ಮಾಡಿವೆ’; ವಿಜಯ್ ಸೇತುಪತಿ ಬೇಸರ
ಸ್ಟಾರ್ ಹೀರೋ ಆಗಿ ಬೆಳೆದ ಬಳಿಕ ಕೆಲವರಿಗೆ ಸಿನಿಮಾ ನಿರ್ಮಾಣ ಮಾಡುವ ಹುಮ್ಮಸ್ಸು ಬರುತ್ತದೆ. ಹಾಗಂತ ಅದನ್ನು ಮಾಡೋದ್ರಲ್ಲಿ ಸ್ವಾರ್ಥ ಇದೆ ಎಂದರ್ಥವಲ್ಲ. ಹೊಸ ಪ್ರತಿಭೆಗಳಿಗೆ ಅವಕಾಶ ಸಿಗಲಿ ಎಂಬುದು ಇದರ ಮುಖ್ಯ ಉದ್ದೇಶ ಆಗಿರುತ್ತದೆ. ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಕೂಡ ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಹೊಸ ಸಿನಿಮಾಗಳನ್ನು ಅವರು ನಿರ್ಮಿಸುತ್ತಿದ್ದಾರೆ. ಅವರು ಬಂಡವಾಳ ಹಾಕಿದ ಸಿನಿಮಾಗಳೆಲ್ಲ ಬಾಕ್ಸ್ ಆಫೀಸ್ನಲ್ಲಿ ಸೋತಿವೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ಭಾರದ್ವಾಜ್ ರಂಗನ್ ಜೊತೆ ‘ಗಲಾಟಾ…