ಬಾಗಲಕೋಟೆ ಉಪಚುನಾವಣೆಗೆ ಈಗಿಂದಲೇ ತಂತ್ರ, ಪ್ರತಿತಂತ್ರ ಶುರು: ಯಾರೆಲ್ಲಾ ಆಕಾಂಕ್ಷಿಗಳು ಗೊತ್ತಾ?
ಬಾಗಲಕೋಟೆ, ಮಾರ್ಚ್ 15: ಕರ್ನಾಟಕದಲ್ಲಿ ಸದ್ಯ ಎರಡು ಉಪಚುನಾವಣೆ ಮೇಲೆ ಎಲ್ಲರ ಚಿತ್ತವಿದೆ. ಅದರಲ್ಲೊಂದು ಹೆಚ್ವೈ ಮೇಟಿ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರ (Bagalkot By-election). ಕೇಂದ್ರ ಚುನಾವಣಾ ಆಯೋಗ ಇಂದು ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಇತ್ತ ಬಾಗಲಕೋಟೆ ಉಪಚುನಾವಣೆಗಾಗಿ ತಂತ್ರ ಪ್ರತಿತಂತ್ರಗಳು ಶುರುವಾಗಿವೆ. ಅದರಲ್ಲೂ ನಿನ್ನೆ ಸಿಎಂ, ಡಿಸಿಎಂ ಮಾಡಿದ ತಂತ್ರ ಬಾರಿ ಸಂಚಲನ ಸೃಷ್ಟಿ ಮಾಡಿದೆ. ಬಾಗಲಕೋಟೆ ಉಪಚುನಾವಣೆ ವಿಚಾರ ಸದ್ಯ ಕಾವೇರುತ್ತಿದೆ. ಹೆಚ್.ವೈ.ಮೇಟಿ ನಿಧನದಿಂದ ಕ್ಷೇತ್ರ ತೆರವಾಗಿದ್ದು, ಮೇಟಿಯವರ ಕನಸಿನ ಕೂಸು…