ಯಾದಗಿರಿ: ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಹಿನ್ನಲೆ ಅಕ್ಕಿ ರಫ್ತುಗೂ ಬಿತ್ತು ಬ್ರೇಕ್: ಉದ್ಯಮಿಗಳು ಕಂಗಾಲು
ಯಾದಗಿರಿ, ಮಾರ್ಚ್ 14: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮ ಗಲ್ಫ್ ರಾಷ್ಟ್ರಗಳ ಮೇಲಷ್ಟೇ ಅಲ್ಲ, ಯಾದಗಿರಿ (Yadagiri) ಜಿಲ್ಲೆಯ ವ್ಯಾಪಾರ ವಹಿವಾಟಿನ ಮೇಲೂ ಬೀರಲು ಆರಂಭಿಸಿದೆ. ಮೊಟ್ಟೆ ಉದ್ಯಮ, ಅಕ್ಕಿ ರಫ್ತು ಹಾಗೂ ಹೋಟೆಲ್ ಉದ್ಯಮಕ್ಕೂ ಯುದ್ಧದ ಎಫೆಕ್ಟ್ ತಟ್ಟಿದ್ದು, ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊಟ್ಟೆ ದರ ಕುಸಿತ ಯಾದಗಿರಿ ಜಿಲ್ಲೆಯಿಂದ ಗಲ್ಫ್ ರಾಷ್ಟ್ರಗಳಿಗೆ ಲಕ್ಷಾಂತರ ಮೊಟ್ಟೆಗಳನ್ನು ರಫ್ತು ಮಾಡಲಾಗುತ್ತಿತ್ತು. ಕತಾರ್, ಕುವೈತ್, ಸೌದಿ ಅರೇಬಿಯಾ ಹಾಗೂ ದುಬೈ ಸೇರಿದಂತೆ ಹಲವು…