Headlines

ಪ್ರಧಾನಿ ಮೋದಿಯನ್ನು ಭೇಟಿಯಾದ ಸಿಎಂ ವಿಜಯ್; ವಂದೇ ಮಾತರಂ ವಿವಾದದ ಬಗ್ಗೆ ಚರ್ಚೆ

ನವದೆಹಲಿ, ಮೇ 27: ತಮಿಳುನಾಡು ಮುಖ್ಯಮಂತ್ರಿ ವಿಜಯ್ (CM Vijay) ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚೆಗೆ ತಮಿಳುನಾಡಿನಲ್ಲಿ ಭಾರಿ ವಿವಾದ ಸೃಷ್ಟಿಸಿರುವ ‘ವಂದೇ ಮಾತರಂ’ ವಿವಾದದ ಕುರಿತು ಪ್ರಧಾನಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ತಮಿಳುನಾಡು ಮುಖ್ಯಮಂತ್ರಿಯಾದ ಬಳಿಕ ವಿಜಯ್ ಮತ್ತು ಪ್ರಧಾನಿ ಮೋದಿ (PM Modi) ನಡುವಿನ ಮೊದಲ ಭೇಟಿ ಇದಾಗಿದೆ. ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ವಿಜಯ್ ಅವರಿಗೆ ಪ್ರಧಾನಿ…

Read More

IPL 2026: ಸ್ಫೋಟಕ ಬ್ಯಾಟಿಂಗ್​ಗೆ ಬ್ರೇಕ್ ಹಾಕಿದವರು: ಈ ಬಾರಿ ಅತಿ ಹೆಚ್ಚು ಡಾಟ್ ಬಾಲ್ ಹಾಕಿದ್ದು ಇವರೇ ನೋಡಿ – Kannada News | IPL 2026 See who bowled the most dot balls in this year’s IPL

ಬೆಂಗಳೂರು (ಮೇ. 08): ಐಪಿಎಲ್ 2026 (Indian Premier League) ಸೀಸನ್ ಬ್ಯಾಟ್ಸ್‌ಮನ್‌ಗಳ ಸ್ಫೋಟಕ ಆಟದಿಂದ ಕೂಡಿದೆ. ಈ ಸೀಸನ್‌ನಲ್ಲಿ 265 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವುದರಿಂದ ಹಿಡಿದು ಕೇವಲ 36 ಎಸೆತಗಳಲ್ಲಿ ಶತಕಗಳನ್ನು ಗಳಿಸಿರುವಂತಹ ಬ್ಯಾಟರ್​ಗಳನ್ನು ನಾವು ನೋಡುತ್ತಿದ್ದೇವೆ. ವಿಶೇಷವಾಗಿ ಬ್ಯಾಟ್ಸ್‌ಮನ್‌ಗಳಾದ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ ಮತ್ತು ಕ್ಲಾಸೆನ್ ಬೌಲರ್‌ಗಳನ್ನು ಕಾಡುತ್ತಿದ್ದಾರೆ. ಆದರೆ, ಇಂತಹ ಕಠಿಣ ಸಂದರ್ಭಗಳಲ್ಲಿಯೂ ಸಹ, ಕೆಲವು ಬೌಲರ್‌ಗಳು ಬಿಗಿಯಾಗಿ ಬೌಲಿಂಗ್ ಮಾಡುತ್ತಿದ್ದಾರೆ ಮತ್ತು ಡಾಟ್ ಬಾಲ್‌ಗಳಿಂದ ಬ್ಯಾಟ್ಸ್‌ಮನ್‌ಗಳನ್ನು…

Read More

ಪ.ಬಂಗಾಳದಲ್ಲಿ ತೈಲ ನಿಕ್ಷೇಪ; ಉತ್ಪಾದನೆ ದಿಕ್ಕು ಕಾಣಲು ಬೇಕಾಯ್ತು 7 ವರ್ಷ

ತೈಲಬಾವಿಯ ಸಾಂದರ್ಭಿಕ ಚಿತ್ರImage Credit source: AP ಕೋಲ್ಕತ್ತಾ, ಮೇ 27: ಏಳೆಂಟು ವರ್ಷದ ಹಿಂದೆ ಪಶ್ಚಿಮ ಬಂಗಾಳದಲ್ಲಿ ಪತ್ತೆಯಾಗಿದ್ದ ತೈಲ ನಿಕ್ಷೇಪವೊಂದಕ್ಕೆ ಕೊನೆಗೂ ಒಂದು ಮುಕ್ತಿ ಸಿಕ್ಕಿದೆ. ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ಅಶೋಕನಗರ್ ಆಯಿಲ್ ಫೀಲ್ಡ್​ನಲ್ಲಿ ತೈಲ ತೆಗೆಯುವ ಕಾರ್ಯಕ್ಕೆ ಸಿದ್ಧತೆ ಆರಂಭವಾಗಿದೆ. ಅತಿ ಶೀಘ್ರದಲ್ಲೇ ಇಲ್ಲಿ ತೈಲ ಉತ್ಪಾದನೆ ಶುರುವಾಗಬಹುದು ಎನ್ನಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಈ ಯೋಜನೆಗೆ ಬಲ ಸಿಕ್ಕಿದಂತಾಗಿರುವುದು ಕಾಕತಾಳೀಯವಲ್ಲ. ರಾಜಕೀಯ ಇಚ್ಛಾ ಶಕ್ತಿ ಕೊರತೆ,…

Read More

RCB vs GT: ಮೊದಲ ಎಸೆತದಲ್ಲೇ ಜೀವದಾನ; ಅಬ್ಬರದ 81 ರನ್ ಬಾರಿಸಿದ ಕೊಹ್ಲಿ – Kannada News | IPL 2026: Virat Kohli’s Explosive 81 After Dropped Catch Powers RCB Batting

ಕ್ರಿಕೆಟ್​ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಫಿಲ್ಡರ್ ಮಾಡುವ ಅದೊಂದೆ ಒಂದು ತಪ್ಪು ತಂಡವನ್ನು ಸೋಲಿನ ದವಡೆಗೆ ಹೇಗೆ ತಳ್ಳುತ್ತದೆ ಎಂಬುದು ಇಂದಿನ ಆರ್​ಸಿಬಿ ಹಾಗೂ ಗುಜರಾತ್ ನಡುವಿನ ಪಂದ್ಯದಲ್ಲಿ ಸಾಭೀತಾಯಿತು. ಐಪಿಎಲ್ 2026 34ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ 206 ರನ್ ಕಲೆಹಾಕಿತ. ಈ ಗುರಿ ಬೆನ್ನಟ್ಟಿದ ಆರ್​​ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಜೆಕೋಬ್ ಬೆಥೆಲ್ ಇನ್ನಿಂಗ್ಸ್ ಆರಂಭಿಸಿದರು. ಇತ್ತ ಗುಜರಾತ್ ಪರ ಮೊಹಮ್ಮದ್ ಸಿರಾಜ್ ಬೌಲಿಂಗ್ ಆರಂಭಿಸಿದರು. ಸಿರಾಜ್…

Read More

ಹಲ್ಲಿಲ್ಲದ, ವಯಸ್ಸಾದ ನಾಯಿಗಳಿಗೇಕೆ ಸಂತಾನ ಹರಣ ಚಿಕಿತ್ಸೆ, ಶ್ವಾನ ಪ್ರಿಯರ ಆಕ್ರೋಶ

ನವದೆಹಲಿ, ಏಪ್ರಿಲ್ 05: ಹಲ್ಲಿಲ್ಲದ, ವಯಸ್ಸಾದ ನಾಯಿಗಳಿಗೂ ಸಂತಾನ ಹರಣ, ರೇಬಿಸ್ ಚುಚ್ಚುಮದ್ದು ನೀಡಿ ದೆಹಲಿ ವಿಮಾನ ನಿಲ್ದಾಣದ ಪ್ರದೇಶದಿಂದ ಬೇರೆ ಕಡೆ ಸ್ಥಳಾಂತರಿಸಿದ್ದಕ್ಕೆ ಪ್ರಾಣಿಪ್ರಿಯರು ಆಕ್ರೋಶಗೊಂಡಿದ್ದಾರೆ. ಕಳೆದ 13,14 ವರ್ಷಗಳಿಂದ ಆ ಕೆಲವು ನಾಯಿಗಳು ಅಲ್ಲೇ ಇವೆ. ಯಾರಿಗೂ ಏನೂ ತೊಂದರೆ ಮಾಡಿಲ್ಲ ಈಗಂತೂ ಅವುಗಳಿಗೂ ಹಲ್ಲುಗಳು ಕೂಡ ಇಲ್ಲ, ಶಕ್ತಿಯೂ ಇಲ್ಲ ಅಂಥಾ ನಾಯಿಗಳಿಂದ ಅಪಾಯವಾದರೂ ಏನಿದೆ, ಸಂತಾನ ಹರಣ ಚಿಕಿತ್ಸೆಯ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ವಿಮಾನ ನಿಲ್ದಾಣದ ಆವರಣದಲ್ಲಿ ವಾಸಿಸುವ ಹಲವಾರು…

Read More

ಆ ಚೀಟಿಗಳಲ್ಲಿದೆಯಾ ಸಾವಿನ ಸೀಕ್ರೆಟ್? ಯುವತಿಯ ನಗ್ನ ಮೃತದೇಹ ಪತ್ತೆ ಪ್ರಕರಣದ ಹಿಂದೆ ಹಲವು ಅನುಮಾನ – Kannada News | Bengaluru Adugodi Death Mystery: Secret Notes Found on Walls of Pooja Dutta’s House; Mental Depression Suspected

ಪೂಜಾ ದತ್ತಾ ರೂಮ್​ನ ಗೋಡೆಯಲ್ಲಿ ಹಲವು ಚೀಟಿಗಳು ಅಂಟಿಸಿರುವುದು ಹಾಗೂ ಪೂಜಾ ದತ್ತಾImage Credit source: tv9 ಬೆಂಗಳೂರು, ಏಪ್ರಿಲ್ 28: ಬೆಂಗಳೂರಿನ (Bengaluru) ಆಡುಗೋಡಿಯ ಬಾಡಿಗೆ ಮನೆಯಲ್ಲಿ ನಗ್ನ ಸ್ಥಿತಿಯಲ್ಲಿ ಪತ್ತೆಯಾದ ಪೂಜಾ ದತ್ತಾ ಸಾವಿನ ಪ್ರಕರಣವು (Mystery Death Case) ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಾಥಮಿಕ ತನಿಖೆಯ ವೇಳೆ, ಪೂಜಾ ವಾಸವಿದ್ದ ಮನೆಯ ಸ್ಥಿತಿಯನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ. ಇದರಿಂದಾಗಿ, ಪೂಜಾ ತೀವ್ರ ಮಾನಸಿಕ ಖಿನ್ನತೆಗೆ (Mental Depression) ಒಳಗಾಗಿದ್ದಳೇ ಎಂಬ ಅನುಮಾನ ಈಗ…

Read More

ಈ ವರ್ಷ ಟೀಂ ಇಂಡಿಯಾ ಯಾವೆಲ್ಲ ತಂಡಗಳ ವಿರುದ್ಧ ಸೆಣಸಲಿದೆ? ಇಲ್ಲಿದೆ ವಿವರ

19ನೇ ಆವೃತ್ತಿಯ ಐಪಿಎಲ್ (IPL 2026)​ ಮುಕ್ತಾಯಗೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯುವ ಮೂಲಕ ತಮ್ಮ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ. ಸುಮಾರು 2 ತಿಂಗಳಿಗೂ ಹೆಚ್ಚಿನ ಕಾಲ ನಡೆದ ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಟೀಂ ಇಂಡಿಯಾದ (Team India) ಎಲ್ಲಾ ಆಟಗಾರರು ಭಾಗವಹಿಸಿದ್ದರು. ಹೀಗಾಗಿ ಈ ಸಮಯದಲ್ಲಿ ಭಾರತ ತಂಡ ಯಾವುದೇ ಅಂತರರಾಷ್ಟ್ರೀಯ ಸರಣಿಗಳನ್ನು ಆಡಲಿಲ್ಲ. ಇದೀಗ ಐಪಿಎಲ್ ಮುಗಿದಿದ್ದು, ಟೀಂ ಇಂಡಿಯಾ ಕೂಡ ಅಂತರರಾಷ್ಟ್ರೀಯ…

Read More

Iran Israel War: ಇರಾನ್-ಇಸ್ರೇಲ್ ಯುದ್ಧ, ಮಂಗಳೂರು–ಗಲ್ಫ್ ವಿಮಾನ ಸೇವೆಗಳಲ್ಲಿ ವ್ಯತ್ಯಯ, ರದ್ದಾದ ಫ್ಲೈಟ್ ವಿವರ ಇಲ್ಲಿದೆ – Kannada News | Mangaluru–Gulf Flights Cancelled Amid West Asia Crisis; More than 50 Kannadigas Stranded in Dubai

ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ಪ್ರಯಾಣಿಕರು ಹಾಗೂ ಏರ್ ಇಂಡಿಯಾ ಎಕ್ಸ್​​ಪ್ರೆಸ್ ಪ್ರಕಟಣೆಯ ಪ್ರತಿImage Credit source: tv9 ಮಂಗಳೂರು, ಮಾರ್ಚ್ 1: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ, ಇರಾನ್-ಇಸ್ರೇಲ್ (Iran Israel War) ಯುದ್ಧದ ಹಿನ್ನೆಲೆ ಇರಾನ್ ವಾಯುಪ್ರದೇಶ ತಾತ್ಕಾಲಿಕವಾಗಿ ಮುಚ್ಚಿರುವುದರಿಂದ, ಮಂಗಳೂರು ಹಾಗೂ ಗಲ್ಫ್ ರಾಷ್ಟ್ರಗಳ ನಡುವೆ ಸಂಚರಿಸುವ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ವಿಮಾನಗಳು ರದ್ದಾಗಿದ್ದರೆ, ಕೆಲವು ಟೇಕಾಫ್ ಬಳಿಕ ವಾಪಸ್ ಮಂಗಳೂರಿಗೆ ಮರಳಿದವು, ಕೆಲವು ವಿಮಾನಗಳನ್ನು ಬೇರೆ ಕಡೆಗಳಿಗೆ ಡೈವರ್ಟ್…

Read More

ಪಂಚ ಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ ಕನ್ನಡದ ‘ಕರಿಕಾಡ’ ಸಿನಿಮಾ – Kannada News | Karikaada Kannada movie releasing on 6 February 2025 in 5 languages

ಟೀಸರ್ ಮೂಲಕ ‘ಕರಿಕಾಡ’ ಸಿನಿಮಾ (Karikada Movie) ಗಮನ ಸೆಳೆದಿದೆ. ಈಗ ಈ ಸಿನಿಮಾ ಬಿಡುಗಡೆ ಸಿದ್ಧವಾಗಿದೆ. 2026ರ ಫೆಬ್ರವರಿ 6ಕ್ಕೆ ಸಿನಿಮಾ ತೆರೆಕಾಣಿಸಲು ಚಿತ್ರತಂಡ ರೆಡಿಯಾಗಿದೆ. ಪಂಚಭಾಷೆಯಲ್ಲಿ ಬಿಡುಗಡೆ ಆಗಲಿದೆ. ಇದೊಂದು ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿರುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಟೀಸರ್ ನೋಡಿದ ಬಳಿಕ ಪ್ರೇಕ್ಷಕರಿಗೆ ಈ ಸಿನಿಮಾ ಮೇಲೆ ಭರವಸೆ ಹುಟ್ಟಿದೆ. ಆ್ಯಕ್ಷನ್, ಲವ್ ಸ್ಟೋರಿ, ಅದ್ದೂರಿ ಮೇಕಿಂಗ್, ಪ್ರತಿಭಾವಂತ ಕಲಾವಿದರ ಬಳಗ, ಹಿನ್ನೆಲೆ ಸಂಗೀತ ಸೇರಿದಂತೆ ಹಲವು ಅಂಶಗಳು ‘ಕರಿಕಾಡ’ (Karikada)…

Read More

PM Internship Scheme: ಪಿಎಂ ಇಂಟರ್ನ್‌ಶಿಪ್ ಯೋಜನೆ ಆರಂಭ; ಯುವಜನತೆಗೆ ಉದ್ಯೋಗದ ತರಬೇತಿ ಜೊತೆಗೆ 9,000ರೂ. ಸ್ಟೈಫಂಡ್ – Kannada News | Pradhan Mantri Internship Yojana 2026: Apply Now for 9000 Stipend and Corporate Experience!

ಪಿಎಂ ಇಂಟರ್ನ್‌ಶಿಪ್ ಯೋಜನೆImage Credit source: Ai generated ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ 2026’ ಅಡಿಯಲ್ಲಿ ದೇಶದ ಯುವಕ-ಯುವತಿಯರಿಗೆ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುವ ಸುವರ್ಣ ಅವಕಾಶ ಲಭ್ಯವಾಗಿದೆ. ಈ ಯೋಜನೆಯ ಪ್ರಮುಖ ಉದ್ದೇಶ ಉದ್ಯೋಗಾಕಾಂಕ್ಷಿಗಳಿಗೆ ಕೌಶಲ ಅಭಿವೃದ್ಧಿ ತರಬೇತಿಯನ್ನು ನೀಡುವುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 9,000ರೂ. ಸ್ಟೈಫಂಡ್ ನೀಡಲಾಗುತ್ತದೆ. ಇದು ಒಟ್ಟು 12 ತಿಂಗಳ ಅವಧಿಯ ಇಂಟರ್ನ್‌ಶಿಪ್ ಆಗಿದ್ದು, ತರಬೇತಿ ಪಡೆಯುವವರು ದೇಶದ ಅಗ್ರಗಣ್ಯ 500 ಕಂಪನಿಗಳಲ್ಲಿ ಅನುಭವ ಪಡೆಯಲು…

Read More