IPL 2026: 49, 158… ಆರ್ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್; ಕೆರಳಿ ಕೆಂಡವಾದ ಫ್ಯಾನ್ಸ್
2026 ರ ಐಪಿಎಲ್ ಇದೇ ಮಾರ್ಚ್ 28 ರಿಂದ ಆರಂಭವಾಗುತ್ತಿದೆ. ಟೂರ್ನಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್ ಆರ್ಸಿಬಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಆದಾಗ್ಯೂ ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ತನ್ನ ನೂತನ ಜೆರ್ಸಿ ಬಿಡುಗಡೆ ಪ್ರೋಮೋದಲ್ಲಿ ಆರ್ಸಿಬಿ ತಂಡವನ್ನು ಬಹಿರಂಗವಾಗಿಯೇ ಗೇಲಿ ಮಾಡಿದ್ದು, ಇದು ಹಾಲಿ ಚಾಂಪಿಯನ್ ತಂಡದ ಅಭಿಮಾನಿಗಳನ್ನು ಕೆರಳಿಸಿದೆ. ಕಳೆದ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಇದೇ ಆರ್ಸಿಬಿ ವಿರುದ್ಧ ಹೀನಾಯವಾಗಿ ಸೋತು ಸುಣ್ಣವಾಗಿದ್ದ ಮತ್ತು ಇಡೀ…