Headlines

ಮಕ್ಕಳ ಮುದ್ದಾದ ಪ್ರಶ್ನೆಗೆ ಗಿಲ್ಲಿಯ ತಮಾಷೆಯ ಉತ್ತರ: ವಿಡಿಯೋ – Kannada News | Bigg Boss Kannada Winner Gilli Nata attended a school function

ಬಿಗ್​​ಬಾಸ್ (Bigg Boss) ವಿನ್ನರ್ ಆದ ಬಳಿಕ ಗಿಲ್ಲಿ ನಟ ಅವರಿಗೆ ಬಿಡುವೇ ಇಲ್ಲದಾಗಿದೆ. ರಾಜ್ಯದಾದ್ಯಂತ ಸಂಚರಿಸುತ್ತಿರುವ ಗಿಲ್ಲಿ ವಿವಿಧ ಕಾರ್ಯಕ್ರಮಗಳು, ಉತ್ಸವಗಳಿಗೆ ಅತಿಥಿಯಾಗಿ ಹಾಜರಾಗುತ್ತಿದ್ದಾರೆ. ಇತ್ತೀಚೆಗಷ್ಟೆ ಗಿಲ್ಲಿ ಶಾಲಾ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಸಹ ಹೋಗಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಗಿಲ್ಲಿ ನಟ ತಮ್ಮ ಮಾತುಗಳಿಂದ ನೆರೆದಿದ್ದವರನ್ನು ರಂಜಿಸಿದರು. ಇದೇ ವೇಳೆ ಕೆಲವು ಪುಟ್ಟ ಮಕ್ಕಳು ಗಿಲ್ಲಿಗೆ ಕೆಲವು ಪ್ರಶ್ನೆಗಳನ್ನು ಸಹ ಕೇಳಿದರು. ಗಿಲ್ಲಿ ಕೊಟ್ಟ ಉತ್ತರ ಏನು? ವಿಡಿಯೋ ನೋಡಿ ನೀವೇ ತಿಳಿಯಿರಿ……

Read More

‘ಕನ್ನಡ ಚಿತ್ರವನ್ನು ಹೃದಯದಲ್ಲಿ ಹೊತ್ತು ನಡೆಯುತ್ತೇನೆ’; ವಿಶೇಷ ಪ್ರತಿಜ್ಞೆ ಮಾಡಿದ ಸುದೀಪ್ – Kannada News | Kiccha Sudeep Completes 30 Years in Cinema: A Journey of Gratitude and Success

ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಮ್ಯಾಕ್ಸ್’ ಹಾಗೂ ‘ಮಾರ್ಕ್’ ಮೂಲಕ 2024 ಹಾಗೂ 2025ರಲ್ಲಿ ಅಭಿಮಾನಿಗಳನ್ನು ರಂಜಿಸಿದರು. ಸುದೀಪ್ ಅವರ ಸಿನಿ ಪಯಣಕ್ಕೆ ಇದೀಗ 30 ವರ್ಷ ವರ್ಷ. ಮೂರು ದಶಕಗಳ ಯಶಸ್ಸಿನ ಜರ್ನಿಯಲ್ಲಿ ಭಾಗಿಯಾದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ. ‘ಬ್ರಹ್ಮ’ ಸುದೀಪ್ ನಟನೆಯ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಅಂಬರೀಷ್ ಅವರು ನಟಿಸಿದ್ದರು. ಆದರೆ, ಈ ಚಿತ್ರ ರಿಲೀಸ್ ಆಗಲೇ ಇಲ್ಲ….

Read More

ಪತ್ನಿಯ ಅಕ್ರಮ ಸಂಬಂಧ: “ಪವಿತ್ರಾ ನನಗೇ ಬೇಕು” ಎಂಬ ಹಠಕ್ಕೆ ಕಿರಾತಕ ಪ್ರಿಯತಮ ಮಾಡಿದ್ದೇನು ನೋಡಿ? – Kannada News | Bangalore Rural Crime: Hoskote Man Murdered for Illicit Affair, Lover Arrested

ಹೊಸಕೋಟೆ, ಏ.18: ಅನೈತಿಕ ಸಂಬಂಧದ ಹಪಾಹಪಿಗೆ ಬಿದ್ದ ಪ್ರಿಯಕರನೊಬ್ಬ, ತನ್ನ ಪ್ರಿಯತಮೆಯ ಗಂಡನನ್ನೇ ದಾರಿ ತಪ್ಪಿಸಲು ಹೊಂಚು ಹಾಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಗ್ರಾಮಾಂತರದ ಹೊಸಕೋಟೆ ತಾಲೂಕಿನ ದಬ್ಬಗುಂಟನಹಳ್ಳಿಯಲ್ಲಿ ನಡೆದಿದೆ. ಮದುವೆಯಾದ ಮಹಿಳೆಯ ಮೇಲಿನ ವ್ಯಾಮೋಹಕ್ಕೆ ಬಿದ್ದ ಕಿರಾತಕ, ಈಗ ಕಂಬಿ ಎಣಿಸುತ್ತಿದ್ದಾನೆ. ದಬ್ಬಗುಂಟನಹಳ್ಳಿ ಗ್ರಾಮದ ಶಿವಶಂಕರ್ ಎಂಬ ಯುವಕ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡಿಕೊಂಡು ತಾಯಿ, ಪತ್ನಿ ಪವಿತ್ರಾ ಮತ್ತು ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದ. ಕಳೆದ ಏಪ್ರಿಲ್ 13ರ ಸೋಮವಾರ ರಾತ್ರಿ,…

Read More

Real Estate Mafia In Kodagu: ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್ – Kannada News | Kodagus Ambatti Hills Under Threat: Real Estate Mafia Illegally Blasts Mountains for Resorts

ಕೊಡಗು, ಫೆಬ್ರುವರಿ 02: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಂಬಟ್ಟಿ ಬೆಟ್ಟದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಅಟ್ಟಹಾಸ ಮಿತಿ ಮೀರಿದೆ. ರೆಸಾರ್ಟ್ ಹಾಗೂ ವಿಲ್ಲಾಗಳ ನಿರ್ಮಾಣಕ್ಕಾಗಿ ಯಾವುದೇ ಇಲಾಖಾ ಅನುಮತಿ ಪಡೆಯದೆ ಬೃಹತ್ ಬೆಟ್ಟವನ್ನು ಬಗೆದು, ಬೆಟ್ಟದ ಬುಡದಲ್ಲೇ ಡೈನಮೈಟ್ ಸ್ಫೋಟಿಸಲಾಗಿದೆ. ಬೆಟ್ಟದ ಮೇಲಿನಿಂದ ಹರಿಯುತ್ತಿದ್ದ ನೀರಿನ ಮೂಲವನ್ನೇ ಬಂದ್ ಮಾಡಿರುವ ಆರೋಪ ಕೇಳಿಬಂದಿದೆ. ಇದರಿಂದ ಮಳೆಗಾಲದಲ್ಲಿ ಭಾರೀ ಭೂ ಕುಸಿತ ಸಂಭವಿಸುವ ಆತಂಕ ವ್ಯಕ್ತವಾಗಿದ್ದು, ಅವೈಜ್ಞಾನಿಕ ಕಾಮಗಾರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಪಂಚಾಯಿತಿ ಮೌನ…

Read More

ಬೆಂಗಳೂರಿನ 50 ವಾರ್ಡ್​ಗಳಲ್ಲಿ ಕಸ ಸಂಗ್ರಹಣೆ ಸ್ಥಗಿತ! ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿರುವ ಕಾರ್ಮಿಕರು

ಬೆಂಗಳೂರು, ಮಾರ್ಚ್​ 24: ನಗರದಲ್ಲಿ ತ್ಯಾಜ್ಯ ಸಂಗ್ರಹಣೆಯಲ್ಲಿ (Waste Management) ಅಡಚಣೆ ಉಂಟಾಗಿದ್ದು, ಕನಿಷ್ಠ 50 ವಾರ್ಡ್‌ಗಳಲ್ಲಿ ಕಸದ ಸಂಗ್ರಹಣೆ ಸೋಮವಾರ ಸ್ಥಗಿತಗೊಂಡಿತ್ತು. ವೇತನ ಬಾಕಿ ಹಾಗೂ ಕಸ ವಿಂಗಡಣೆ ಕುರಿತ ಹೊಸ ನಿಯಮದ ವಿರುದ್ಧ ಪ್ರತಿಭಟನೆಯಾಗಿ ಆಟೋ ಟಿಪ್ಪರ್ ಚಾಲಕರು ಮತ್ತು ಲೋಡರ್‌ಗಳು ಸಾಮೂಹಿಕ ರಜೆ ಹಾಕಿದ್ದರಿಂದ ಈ ಅವ್ಯವಸ್ಥೆ ಉಂಟಾಗಿದೆ. ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದ ಸಿಇಒ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಮೂಲದಲ್ಲೇ ಕಸದ ವಿಂಗಡಣೆ ಕಡ್ಡಾಯವಾಗಬೇಕು ಎಂದು…

Read More

ಒಂದೇ ವಾರಕ್ಕೆ ‘ಧುರಂಧರ್ 2’ ಸಾವಿರ ಕೋಟಿ ಕಲೆಕ್ಷನ್; ಆದರೂ ಮುರಿಯೋಕೆ ಆಗಿಲ್ಲ ಒಂದು ದಾಖಲೆ

ಒಂದು ವಾರಕ್ಕೆ ನೂರು ಕೋಟಿ ರೂಪಾಯಿ ಗಳಿಕೆ ಆದರೆ ದೊಡ್ಡದು ಎನ್ನುವ ಪರಿಸ್ಥಿತಿ ಈಗ ಇದೆ. ಯಾರೂ ಸಿನಿಮಾ ನೋಡಲು ಥಿಯೇಟರ್​​ಗೆ ಬರುತ್ತಿಲ್ಲ ಎಂಬ ಆರೋಪ ಜೋರಾಗಿರುವ ಈ ಸಂದರ್ಭದಲ್ಲಿ ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ (Dhurandhar 2) ಒಂದೇ ವಾರಕ್ಕೆ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೂ ಅತಿ ವೇಗದಲ್ಲಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದ ಸಿನಿಮಾ ಎಂಬ ದಾಖಲೆಯನ್ನು ಮುರಿಯೋಕೆ ಸಾಧ್ಯವಾಗಿಲ್ಲ. ‘ಧುರಂಧರ್ 2’ ಚಿತ್ರ ಅಬ್ಬರಿಸುತ್ತಿದೆ. ಮೊದಲ…

Read More

ತಂದೆ ಆಗುತ್ತಿದ್ದಾರೆ ಡಾಲಿ ಧನಂಜಯ್: ಸಿಹಿ ಸುದ್ದಿ ಹಂಚಿಕೊಂಡ ನಟ – Kannada News | Daali Dhananjay wife pregnant actor announce happy news

ಡಾಲಿ ಧನಂಜಯ್ (Daali Dhananjay) ಕನ್ನಡ ಚಿತ್ರರಂಗದ ಜನಪ್ರಿಯ ನಟ ಮತ್ತು ನಿರ್ಮಾಪಕ. ತಮ್ಮ ನಟನೆ ಮಾತ್ರವಲ್ಲದೆ ನಿರ್ಮಾಣದಿಂದಲೂ ಅದ್ಭುತ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡುತ್ತಾ ಬರುತ್ತಿದ್ದಾರೆ. ಡಾಲಿ ಧನಂಜಯ್ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ವೈದ್ಯೆ ಧನ್ಯತಾ ಅವರನ್ನು ಅದ್ದೂರಿಯಾಗಿ ವಿವಾಹವಾದರು. ಇದೀಗ ಡಾಲಿ ಧನಂಜಯ್ ಮತ್ತು ಧನ್ಯತಾ ಪೋಷಕರಾಗುತ್ತಿದ್ದು, ಖುಷಿಯ ವಿಷಯವನ್ನು ಡಾಲಿ ಧನಂಜಯ್ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಡಾಲಿ ಧನಂಜಯ್ ಅವರು ಮಾಧ್ಯಮವೊಂದರ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಡಾಲಿ ಅವರು…

Read More

ಸಿಮ್ ಸ್ವಾಪಿಂಗ್ ಹುಷಾರ್..! ದಿಢೀರನೇ ಸಿಮ್ ಡೀಆ್ಯಕ್ಟಿವೇಟ್ ಆಯ್ತು, ನೋಡನೋಡುತ್ತಿದ್ದಂತೆ ಬ್ಯಾಂಕ್ ಖಾತೆಯಿಂದ ಹಣ ಮಾಯ ಆಯ್ತು – Kannada News

ಬೆಂಗಳೂರು, ಜೂನ್ 5: ಉದ್ಯಾನನಗರಿಯಲ್ಲಿ ಅತ್ಯಂತ ಶಾಕಿಂಗ್ ಆದ ‘ಸಿಮ್ ಸ್ವ್ಯಾಪ್’ (SIM Swap) ಅಥವಾ ಸಿಮ್ ಪೋರ್ಟಿಂಗ್ ಸೈಬರ್ ವಂಚನೆ ನಡೆದಿದೆ. ಸಂತ್ರಸ್ತ ವ್ಯಕ್ತಿಯ ಮೊಬೈಲ್ ಸಿಮ್ ಅನ್ನು ಆತನ ಅರಿವಿಲ್ಲದೆಯೇ ಬೇರೆ ನೆಟ್ವರ್ಕ್​ಗೆ ಪೋರ್ಟ್ ಮಾಡಲಾಗಿದೆ. ಅದಾಗಿ ಕೆಲವೇ ದಿನಗಳಲ್ಲಿ ಆತನ ಬ್ಯಾಂಕ್ ಅಕೌಂಟ್​ನಿಂದ 7.2 ಲಕ್ಷ ರೂ ಮಂಗಮಾಯವಾಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿಯಾದ ಬಿಹಾರ ಮೂಲದ ಕಮಲೇಶ್ ಕುಮಾರ್ ಎಂಬಾತ ಸಂತ್ರಸ್ತ ವ್ಯಕ್ತಿ. ಇವರು ನೀಡಿರುವ ದೂರಿನ ಪ್ರಕಾರ ಮೇ 25ರಂದು…

Read More

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ, ಕಾರ್ಯಕರ್ತರಿಂದ ನ್ಯಾಯಾಲಯದೆದುರು ಪ್ರತಿಭಟನೆ – Kannada News | Unnao case survivor family and activists protest at court police ask them to leave

ನವದೆಹಲಿ, ಡಿಸೆಂಬರ್ 26: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕುಲದೀಪ್ ಸಿಂಗ್ ಸೆಂಗಾರ್ (Kuldeep Singh Sengar) ಅವರ ಶಿಕ್ಷೆಯನ್ನು ಅಮಾನತುಗೊಳಿಸಿದ ನ್ಯಾಯಾಲಯದ ಆದೇಶವನ್ನು ಪ್ರತಿಭಟಿಸಲು ಇಂದು ದೆಹಲಿ ಹೈಕೋರ್ಟ್ ಹೊರಗೆ ಹಲವಾರು ಮಹಿಳಾ ಹಕ್ಕುಗಳ ಕಾರ್ಯಕರ್ತರು ಮತ್ತು ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಜಮಾಯಿಸಿತ್ತು. ತಕ್ಷಣ ಅವರನ್ನು ಆ ಸ್ಥಳದಿಂದ ಆಚೆ ಹೋಗುವಂತೆ ಪೊಲೀಸರು ಎಚ್ಚರಿಕೆ ನೀಡಿದರು. ದೆಹಲಿ ಹೈಕೋರ್ಟ್ ಹೊರಗೆ ಪ್ರತಿಭಟನಾಕಾರರನ್ನು ಪ್ರತಿಭಟನೆ ನಡೆಸದಂತೆ ತಡೆಯಲಾಯಿತು. ಇದರಿಂದ ನ್ಯಾಯಾಲಯದ ಭದ್ರತೆಯೊಂದಿಗೆ ಕೆಲಕಾಲ ಪ್ರತಿಭಟನಾಕಾರರು ಮಾತಿನ ಚಕಮಕಿ…

Read More

ಶಿವಾನಂದ ನೀಲಣ್ಣವರ್ ದರೋಡೆ ಮಾಡಿಲ್ಲ! ಹೂಡಿಕೆದಾರರ ವೀಡಿಯೋ ವೈರಲ್ – Kannada News | Belagavi Ponzi Scam: Investors Rally to Defend Shivanand Neelannavar

ಬೆಳಗಾವಿ, ಮೇ 24: ಜಿಲ್ಲೆಯಲ್ಲಿ 4,500 ಕೋಟಿ ರೂಪಾಯಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಶಿವಾನಂದ ನೀಲಣ್ಣವರ್ ಬಂಧನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಶಿವಾನಂದ ಅವರು ಯಾರಿಗೂ ದ್ರೋಹ ಮಾಡಿಲ್ಲ, ಯಾರ ಜೇಬಿಗೂ ಕತ್ತರಿ ಹಾಕಿಲ್ಲ ಎಂದು ಹಲವು ಹೂಡಿಕೆದಾರರು ಕಣ್ಣೀರು ಹಾಕಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನೀಲಣ್ಣವರ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದ್ದು, ನಿವೃತ್ತ ಸೈನಿಕರು ಮತ್ತು ವಯೋವೃದ್ಧ ಮಹಿಳೆಯರು ನೀಲಣ್ಣವರ್‌ರನ್ನು ನೆನಪಿಸಿಕೊಂಡು ಭಾವುಕರಾಗಿ ಮಾತನಾಡಿದ್ದಾರೆ. ತಾವು ಲಾಭ ಪಡೆದಿರುವುದಾಗಿ ಹೂಡಿಕೆದಾರರು ಹೇಳುತ್ತಿದ್ದು, ಅವರ…

Read More