ಕಾಂಗ್ರೆಸ್ನಲ್ಲಿ ಮತ್ತೊಂದು ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ಬೆಂಗಳೂರು, (ಮಾರ್ಚ್ 12): 2026ನೇ ಸಾಲಿನ ಕರ್ನಾಟಕ ಬಜೆಟ್ ಮುಗಿಯುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ನ್ಲಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಸಿಎಂ ಪಟ್ಟಕ್ಕಾಗಿ ಹಠಕ್ಕೆ ಬಿದ್ದಿರುವ ಡಿಕೆ ಶಿವಕುಮಾರ್ ಈಗಾಗಲೇ ದೆಹಲಿ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ಅಲ್ಲದೆ ಇತ್ತ ಅವರ ಬೆಂಬಲಿಗರು ಗೌಪ್ಯ ಸಭೆ ನಡೆಸುತ್ತಿದ್ದಾರೆ. ಈ ಅಧಿಕಾರ ಹಂಚಿಕೆ ಬಿಕ್ಕಟ್ಟಿನ ನಡುವೆ ಸಂಪುಟ ಪುನಾರಚನೆಯ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಪೂರಕವೆಂಬಂತೆ ಸಚಿವಾಕಾಂಕ್ಷಿಗಳು ಇಂದು (ಮಾರ್ಚ್ 12) ಪ್ರತ್ಯೇಕ ಸಭೆ ನಡೆಸಿರುವ ಭಾರೀ ಸಂಚನ…