ಆಸ್ಕರ್ ಅವಾರ್ಡ್ಗೆ ಇರಾನ್ ಡ್ರೋನ್ ದಾಳಿ ಭೀತಿ; ಎಚ್ಚರಿಸಿದ ಪೊಲೀಸರು
ಆಸ್ಕರ್ ಅವಾರ್ಡ್ (Oscar Awards) ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಅಮೆರಿಕದ ಲಾಸ್ ಎಂಜಲೀಸ್ನಲ್ಲಿರುವ ಹಾಲಿವುಡ್ ಸ್ಟುಡಿಯೋದ ಡಾಲ್ಬಿ ಥಿಯೇಟರ್ನಲ್ಲಿ ನಡೆಯಲಿದೆ. ಈಗ ಈ ಶೋಗೆ ಇರಾನ್ ದಾಳಿಯ ಭಯ ಕಾಡುತ್ತಿದೆ. ಅಮೆರಿಕ, ಇಸ್ರೇಲ್ vs ಇರಾನ್ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ದಾಳಿ-ಪ್ರತಿದಾಳಿಗಳು ನಡೆಯುತ್ತಲೇ ಇವೆ. ಅಮೆರಿಕದ ಕ್ಯಾಲಿಫೋರ್ನಿಯಾ ಮೇಲೆ ದಾಳಿ ನಡೆಯುವ ಆತಂಕವೂ ಇದೆ. ಸದ್ಯ ಹಾಲಿವುಡ್ ಸ್ಟುಡಿಯೋದಲ್ಲಿ ಆಸ್ಕರ್ ಅವಾರ್ಡ್ಗೆ ಸಿದ್ಧತೆಗಳು ನಡೆಯುತ್ತಿವೆ. ಸಿನಿಮಾ ಜಗತ್ತಿನ ದೊಡ್ಡ ಹಬ್ಬದ ಆಚರಣೆಗೆ ಎಲ್ಲರೂ ರೆಡಿ…