ಪ್ರೇಮಿಯ ಕೈಯಲ್ಲಿ ಗಂಡನ ಹತ್ಯೆ ಮಾಡಿಸಿದ ಮಹಿಳೆ, ಕೈಯಲ್ಲಿದ್ದ ಹಚ್ಚೆಯಿಂದ ಪ್ರಕರಣ ಭೇದಿಸಿದ ಪೊಲೀಸರು
ಆಗ್ರಾ, ಏಪ್ರಿಲ್ 05: ಮಹಿಳೆಯೊಬ್ಬಳು ಪ್ರೇಮಿಯ ಜತೆ ಸೇರಿ ಗಂಡನನ್ನು ಹತ್ಯೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಏಪ್ರಿಲ್ 1 ರ ರಾತ್ರಿ ಆಗ್ರಾದ ಸೈಯಾನ್ ಪ್ರದೇಶದಲ್ಲಿ ಅರ್ಧ ಸುಟ್ಟ ಶವ ಪತ್ತೆಯಾಗಿತ್ತು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು.ಮುಖ ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದರಿಂದ ಶವವನ್ನು ಗುರುತಿಸುವುದು ಒಂದು ಸವಾಲಾಗಿತ್ತು, ಆದರೆ ಮುಂಗೈ ಮೇಲಿನ ಹಚ್ಚೆ ಉಳಿದುಕೊಂಡಿತ್ತು ಬಳಿಕ ಆತ ಲೋಕೇಂದ್ರನ ಶವ ಎಂದು ತಿಳಿದುಬಂದಿತ್ತು. ಲೋಕೇಂದ್ರ ಅವರ ಸಹೋದರ ಪೊಲೀಸರಿಗೆ ನಾಪತ್ತೆಯಾದವರ ದೂರು ದಾಖಲಿಸಿದ್ದರು, ಲೋಕೇಂದ್ರ…