ಆಹ್ವಾನ ಇಲ್ಲದೇ ಮದುವೆ, ರಿಸೆಪ್ಷನ್ ಊಟಕ್ಕೆ ಹೋಗಿ ಸಿಕ್ಕಿಬಿದ್ದರೆ ಶಿಕ್ಷೆ ಏನು ಗೊತ್ತೇ? ಕೇಳಿದ್ರೆ ಶಾಕ್ ಆಗ್ತೀರಿ!
ಮದುವೆ (Weeding), ಗೃಹಪ್ರವೇಶ ಸೇರಿದಂತೆ ವಿವಿಧ ಶುಭ ಸಮಾರಂಭಗಳಿಗೆ ಸಾಮಾನ್ಯವಾಗಿ ಸಂಬಂಧಿಕರು, ಸ್ನೇಹಿತರು ಮತ್ತು ಪರಿಚಿತರನ್ನು ಆಹ್ವಾನಿಸುವುದು ಸಂಪ್ರದಾಯ. ಆದರೆ ಕೆಲವರು ಆಹ್ವಾನವಿಲ್ಲದೆ ಇಂತಹ ಕಾರ್ಯಕ್ರಮಗಳಿಗೆ ಹೋಗಿ ಊಟ ಮಾಡುವುದು ಕೂಡ ಇರುತ್ತದೆ. ವಿಶೇಷವಾಗಿ ನಗರಗಳಲ್ಲಿ ಇಂಥ ‘(Gatecrashing) ಗೇಟ್ ಕ್ರ್ಯಾಶಿಂಗ್ (ಆಹ್ವಾನವಿಲ್ಲದೆ ಖಾಸಗಿ ಸಮಾರಂಭಗಳಿಗೆ ಹೋಗಿ ಊಟ ಮಾಡುವುದು)’ ನಡೆಯತ್ತದೆ. ‘ಅತಿಥಿ ದೇವೋ ಭವ (ಅತಿಥಿಗಳನ್ನೇ ದೇವರು ಎಂದು ಪರಿಗಣಿಸುವ)’ ಎಂಬ ದೇಶ ನಮ್ಮದಾಗಿರುವ ಕಾರಣ ಇದು ದೊಡ್ಡದಲ್ಲ ಬಿಡಿ. ಸಮಾರಂಭಕ್ಕೆ ಬಂದವರಿಗೆ ಉಪಚಾರ ಮಾಡಿ…