Headlines

ಡೀಸೆಲ್​​ ಬೆಲೆ ಹೆಚ್ಚಳದಿಂದ ವಾಯವ್ಯ ಸಾರಿಗೆ ಸಂಸ್ಥೆಗೆ ಸಂಕಷ್ಟ: ತಿಂಗಳಿಗೆ ಕೋಟ್ಯಂತರ ರೂ ಹೊರೆ! – Kannada News | Hubballi: Rising Diesel Prices Add Crores in Monthly Burden to NWKRTC

ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆImage Credit source: tv9 kannada ಹುಬ್ಬಳ್ಳಿ, ಮೇ 20: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ (Petrol, Diesel Price Hike) ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಕೇವಲ ಒಂದು ವಾರದಲ್ಲಿ ಎರಡು ಬಾರಿ ಇಂಧನ ದರ ಹೆಚ್ಚಳವಾಗಿದ್ದು, ಇದು ಕೇವಲ ಸಾಮಾನ್ಯ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿರುವುದಲ್ಲದೆ ರಾಜ್ಯದ ಸಾರಿಗೆ ನಿಗಮಗಳನ್ನೂ ಸಹ ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಅದರಲ್ಲೂ ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಾಯುವ್ಯ ಕರ್ನಾಟಕ…

Read More

ನಡು ರಸ್ತೆಯಲ್ಲೇ ಕೆಎಸ್​ಆರ್​ಟಿಸಿ ಬಸ್ ಜಪ್ತಿ! ಪ್ರಯಾಣಿಕರು ಕಂಗಾಲು

ಚಿಕ್ಕಮಗಳೂರು, ಫೆಬ್ರವರಿ 13: ಮೃತರ ಕುಟುಂಬಕ್ಕೆ ಪರಿಹಾರ ನೀಡದ ಕಾರಣ ಕೋರ್ಟ್​​ ಸಿಬ್ಬಂದಿ ನಡು ರಸ್ತೆಯಲ್ಲೇ ಕೆಎಸ್‌ಆರ್‌ಟಿಸಿ ಬಸ್ ಜಪ್ತಿ ಮಾಡಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. 2023ರಲ್ಲಿ ನಡೆದ ಅಪಘಾತದಲ್ಲಿ ಬಸ್ ಡಿಕ್ಕಿಯಾಗಿ ರೇಣುಕಪ್ಪ ಹಾಗೂ ರವಿಕಿರಣ್ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ 32 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆ ಕೋರ್ಟ್ ಕಠಿಣ ಕ್ರಮಕ್ಕೆ ಮುಂದಾಗಿದೆ. ಕೆಎಸ್‌ಆರ್‌ಟಿಸಿಗೆ ಸೇರಿದ, ಚಿಕ್ಕಮಗಳೂರು ಡಿಪೋ ವ್ಯಾಪ್ತಿಯ…

Read More

ಒಂದು ಹಾಡಿನಿಂದ ನಿರ್ದೇಶಕನ ಜೊತೆ ಶುರುವಾಯ್ತು ರಮ್ಯಾ ಕೃಷ್ಣ ಪ್ರೀತಿ – Kannada News | Krishna Vamsi and Ramya Krishna Love Story: From ‘Gulabi’ Songs to Happy Marriage

ನಿರ್ದೇಶಕ ಕೃಷ್ಣ ವಂಶಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಜನಪ್ರಿಯ ನಟಿ ರಮ್ಯಾ ಕೃಷ್ಣ ಅವರ ಪ್ರೀತಿ ಮತ್ತು ಮದುವೆಯ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರೇಮಕಥೆ ‘ಗುಲಾಬಿ’ ಚಿತ್ರದ ಹಾಡುಗಳಿಂದ ಪ್ರಾರಂಭವಾಯಿತು ಎಂದು ಅವರು ಹೇಳಿದರು. ಟಿವಿಯಲ್ಲಿ ‘ಗುಲಾಬಿ’ಸಿನಿಮಾದ ಹಾಡುಗಳನ್ನು ನೋಡಿ ರಮ್ಯಾ ಕೃಷ್ಣ ಇಷ್ಟಪಟ್ಟರು. ಆ ಸಮಯದಲ್ಲಿ ಅವರು ಈಗಾಗಲೇ ದೊಡ್ಡ ತಾರೆಯಾಗಿದ್ದರು ಎಂದು ಕೃಷ್ಣ ವಂಶಿ ಹೇಳಿದರು. ‘ನಮಗೆಲ್ಲರಿಗೂ ಅವರ ಬಗ್ಗೆ ಗೌರವವಿತ್ತು, ನನಗೂ ಸಹ’ ಎಂದು ಅವರು ಹೇಳಿದರು.‘ನಿನ್ನೆ ಪೆಲ್ಲಡತ’ ಚಿತ್ರದ ಪಾತ್ರದ…

Read More

ಅಯೋಧ್ಯೆ ರಾಮಮಂದಿರ ದೇಣಿಗೆ ಲೆಕ್ಕ ಬಹಿರಂಗ: ಭಕ್ತರ ನಂಬಿಕೆ ಮರಳಿ ಪಡೆಯಲು ಟ್ರಸ್ಟ್ ಯತ್ನ – Kannada News | Ayodhya Ram Mandir Trust Reveals Financial Accounts Amidst Donation Theft Controversy

ಅಯೋಧ್ಯೆ, ಜುಲೈ 07: ಅಯೋಧ್ಯೆ ರಾಮಮಂದಿರದ ಹುಂಡಿ ದೇಣಿಗೆ ಕಳ್ಳತನ ವಿವಾದದ ನಡುವೆ, ರಾಮಮಂದಿರ ಟ್ರಸ್ಟ್ ತನ್ನ ಸಂಪೂರ್ಣ ಹಣಕಾಸು ಲೆಕ್ಕಪತ್ರವನ್ನು ಬಹಿರಂಗಪಡಿಸಿದೆ. ಭಕ್ತರಿಂದ ಸಂಗ್ರಹವಾದ ಒಟ್ಟು 3,264 ಕೋಟಿ ರೂ. ದೇಣಿಗೆಯಲ್ಲಿ, 2,370 ಕೋಟಿ ರೂ. ಮಂದಿರ ನಿರ್ಮಾಣಕ್ಕೆ ಬಳಕೆಯಾಗಿದೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ. ಉಳಿದ ಹಣ ಬ್ಯಾಂಕ್ ಖಾತೆಗಳಲ್ಲಿ ಸುರಕ್ಷಿತವಾಗಿದೆ ಎಂದು ಮಾಹಿತಿ ನೀಡಿದೆ. ಈವರೆಗೆ ದಾನವಾಗಿ ಬಂದ ಬೆಳ್ಳಿ ಆಭರಣಗಳನ್ನು ಕರಗಿಸಿ ಬಿಸ್ಕೆಟ್ ರೂಪದಲ್ಲಿ ಇಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ. ರಾಮಮಂದಿರದ ಹುಂಡಿ…

Read More

‘ಧುರಂಧರ್ 2’ ಪೋಸ್ಟರ್​ಗೆ ಯಶ್ ಸಿನಿಮಾ ಸ್ಫೂರ್ತಿ? ಟ್ರೆಂಡ್ ಸೆಟ್ಟರ್ ಆದ ರಾಕಿಭಾಯ್ – Kannada News | KGF Inspires Dhurandhar 2 Poster: Yash’s Impact as a Trendsetter

ಈಗ ಎಲ್ಲೆಲ್ಲೂ ‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಚರ್ಚೆ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ‘ಟಾಕ್ಸಿಕ್’ ಸಿನಿಮಾ (Toxic Movie) ಪರ ವಹಿಸಿಕೊಂಡು ಬಂದರೆ ಇನ್ನೂ ಕೆಲವರು ‘ಧರುಂಧರ್ 2’ ಚಿತ್ರದ ಪರವಾಗಿ ಮಾತನಾಡುತ್ತಿದ್ದಾರೆ. ಹೀಗಿರುವಾಗಲೇ ‘ಧುರಂಧರ್ 2’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ ಚಿತ್ರದಿಂದ ಸ್ಫೂರ್ತಿ ಪಡೆದು ಇದನ್ನು ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ‘ಕೆಜಿಎಫ್’ ಹಾಗೂ ‘ಕೆಜಿಎಫ್ ಚಾಪ್ಟರ್ 1’ ಚಿತ್ರದಲ್ಲಿ ರಕ್ತದ…

Read More

ರಾಷ್ಟ್ರ ಪ್ರಶಸ್ತಿ ಸಿಕ್ಕ ಬಳಿಕವೂ ನನಗೆ ಕೆಲಸ ಸಿಗಲಿಲ್ಲ: ಸತ್ಯ ತೆರೆದಿಟ್ಟ ಕಂಗನಾ ರಣಾವತ್ – Kannada News

ಬಾಲಿವುಡ್‌ನ ಖ್ಯಾತ ನಟಿ, ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಚಿತ್ರರಂಗದಲ್ಲಿ ತಮಗಿದ್ದ ಕಠಿಣ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ‘ಫ್ಯಾಷನ್’ ಚಿತ್ರದ ಭರ್ಜರಿ ಯಶಸ್ಸು ಮತ್ತು ಅದಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಂತರವೂ ತಮಗೆ ಚಿತ್ರರಂಗದಲ್ಲಿ ಕೆಲಸ ಸಿಗುತ್ತಿರಲಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ. ಆ ಸಮಯದಲ್ಲಿ ಕೇವಲ ಬದುಕುಳಿಯಲು ತಮ್ಮ ಸಾಮರ್ಥ್ಯಕ್ಕೆ ಹೊಂದದ ಕಳಪೆ ಸಿನಿಮಾಗಳನ್ನೂ ಮಾಡಬೇಕಾಗಿ ಬಂದಿತ್ತು ಎಂದು ಅವರು ಹೇಳಿದ್ದಾರೆ. 2006ರಲ್ಲಿ ಅನುರಾಗ್ ಬಸು ನಿರ್ದೇಶನದ ‘ಗ್ಯಾಂಗ್‌ಸ್ಟರ್: ಎ ಲವ್ ಸ್ಟೋರಿ’…

Read More

ಐಪಿಎಲ್​ನಲ್ಲಿ ಹೊಸ ಇತಿಹಾಸ ಬರೆದ ಮನೀಶ್ ಪಾಂಡೆ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 65ನೇ ಪಂದ್ಯದಲ್ಲಿ ಬ್ಯಾಟ್ ಬೀಸುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮನೀಶ್ ಪಾಂಡೆ (Manish Pandey) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. (PC: IPL) ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 147 ರನ್​ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಲು ಬಂದ…

Read More

Spiritual Greetings: ಹಿರಿಯರಿಗೆ ನಮಸ್ಕಾರ ಮಾಡುವಾಗ ಈ ತಪ್ಪು ಮಾಡಲೇಬೇಡಿ; ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | The Spiritual Significance of Namaskara: A Guide to Proper Devotional Greetings

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನಮಸ್ಕಾರ ಮಾಡುವ ಸರಿಯಾದ ವಿಧಾನದ ಬಗ್ಗೆ ವಿವರಿಸಿದ್ದಾರೆ. ನಮಸ್ಕಾರಗಳನ್ನು ಸರಿಯಾದ ವಿಧಾನದಲ್ಲಿ ಮಾಡಿದಾಗ ಮಾತ್ರ ಅವುಗಳ ಸಂಪೂರ್ಣ ಫಲ ನಮಗೆ ಲಭಿಸುತ್ತದೆ. ದೇವರುಗಳಿಗೆ, ಮನುಷ್ಯರಿಗೆ, ಹಿರಿಯರಿಗೆ ಹಾಗೂ ಗುರುಗಳಿಗೆ ನಾವು ಸಲ್ಲಿಸುವ ನಮಸ್ಕಾರವು ಯಾಂತ್ರಿಕವಾಗಿರದೆ, ಶ್ರದ್ಧೆ, ಭಕ್ತಿ ಮತ್ತು ಮನಸ್ಸಿನಿಂದ ಬಂದಂತಹ ವಿನಯದಿಂದ ಕೂಡಿರಬೇಕು. ಅಂತಹ ನಮಸ್ಕಾರಗಳು ನಿಜವಾದ ಫಲಗಳನ್ನು ನೀಡುತ್ತವೆ ಎಂದು ಅವರು ಹೇಳಿದ್ದಾರೆ. ನಿರ್ದಿಷ್ಟವಾಗಿ, ವಿಷ್ಣು ದೇವರಾಗಬಹುದು, ಸಮಸ್ತ…

Read More

‘ಬಾಸ್’ ಸಿನಿಮಾದಲ್ಲಿ ರೇಣುಕಾಸ್ವಾಮಿ ಸಾವಿನ ಕಥೆ? ಸ್ಪಷ್ಟನೆ ನೀಡಿದ ನಿರ್ದೇಶಕ

ತನುಶ್ ಶಿವಣ್ಣ ನಟನೆಯ ‘ಬಾಸ್’ ಸಿನಿಮಾದ ಟೀಸರ್ (Boss Movie Teaser) ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ವಿ. ಲವ ಅವರು ನಿರ್ದೇಶನ ಮಾಡಿದ್ದಾರೆ. ಟೀಸರ್ ನೋಡಿದ ಎಲ್ಲರಿಗೂ ಅಚ್ಚರಿ ಆಗಿದೆ. ಕಥೆಯ ಎಳೆ ನೋಡಿದರೆ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣ ನೆನಪಿಗೆ ಬರುತ್ತದೆ. ಆ ಬಗ್ಗೆ ನಿರ್ದೇಶಕ ಲವ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದು ದರ್ಶನ್ (Darshan) ಪ್ರಕರಣದ ಕುರಿತಾದ ಸಿನಿಮಾ ಅಲ್ಲ ಎಂದು ಅವರು ಹೇಳಿದ್ದಾರೆ. ‘ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಅದರ ಬಗ್ಗೆ ಸಿನಿಮಾ…

Read More

Upavasa: ನಿಮ್ಮ ಇಷ್ಟಾರ್ಥ ಸಿದ್ಧಿಗೆ ಯಾವ ದಿನ ಉಪವಾಸ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | Understanding Upavasa: Rewards of Fasting According to Hindu Tithis

ಪ್ರತಿಯೊಂದು ತಿಥಿಯ ಉಪವಾಸದ ಫಲಗಳು ಮತ್ತು ಆಧ್ಯಾತ್ಮಿಕ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಅನಾದಿ ಕಾಲದಿಂದಲೂ, ಕೃತಯುಗ, ತ್ರೇತಾಯುಗ, ದ್ವಾಪರ ಯುಗ ಮತ್ತು ಕಲಿಯುಗಗಳಲ್ಲಿ ಭಗವಂತನನ್ನು ಆರಾಧಿಸಲು ಮತ್ತು ಆತನ ಕೃಪೆಗೆ ಪಾತ್ರರಾಗಲು ಉಪವಾಸದಂತಹ ದೇಹದಂಡನೆಯ ಪದ್ಧತಿ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಉಪವಾಸ ಎಂಬ ಪದವು ಉಪ ಅಂದರೆ ಹತ್ತಿರ, ವಾಸ ಅಂದರೆ ಜೀವಿಸುವುದು ಎಂಬ ಅರ್ಥವನ್ನು ನೀಡುತ್ತದೆ. ಅಂದರೆ,…

Read More