Video: ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್, 19ರ ಯುವತಿ ಸಾವು – Kannada News | Ghaziabad Bike Accident: Iqra Dies, Hashim Critically Injured in Viral Speed Crash Video
ಉತ್ತರ ಪ್ರದೇಶ: ಗಾಜಿಯಾಬಾದ್‌ನಲ್ಲಿ ಭಾನುವಾರ ಬೆಳಿಗ್ಗೆ ಅತಿವೇಗ ಹಾಗೂ ಅಜಾಗರೂಕತೆಯಿಂದಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಯುವತಿಯೊಬ್ಬಳು ದುರ್ಮರಣಕ್ಕೀಡಾಗಿದ್ದಾಳೆ. 19 ವರ್ಷದ ಇಕ್ರಾ ಎಂಬ ಯುವತಿ ತನ್ನ ಸ್ನೇಹಿತ ಹಾಶಿಮ್ (20) ಜೊತೆ ಯಮಹಾ ಆರ್-15 ಸ್ಪೋರ್ಟ್ಸ್ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಹಠ ಮಾಡಿ ತಾನೇ ಬೈಕ್ ಓಡಿಸಿದ್ದಾಳೆ. ಇಕ್ರಾ ಅತಿವೇಗವಾಗಿ ಬೈಕ್ ಚಲಾಯಿಸುತ್ತಿದ್ದ ದೃಶ್ಯವನ್ನು ಹಿಂದಕ್ಕೆ ಕುಳಿತಿದ್ದ ಹಾಶಿಮ್ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದಾಗ, ಬೈಕ್ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಜೋರಾಗಿ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದ…