ಅರ್ಚಕ ಮಾಂಸ ತಿನ್ನುವ ಫೋಟೋ ವೈರಲ್: ದೇವಾಲಯದಿಂದ ಹೊರ ಎಳೆದು ಥಳಿಸಿದ ಗುಂಪು
ಕಾನ್ಪುರ, ಮಾ.9: ಉತ್ತರ ಪ್ರದೇಶದ ಕಾನ್ಪುರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ದೇವಾಲಯದ ಅರ್ಚಕರೊಬ್ಬರನ್ನು ಜನರ ಗುಂಪು ಮನಬಂದಂತೆ ಥಳಿಸಿರುವ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ. ಹೋಟೆಲ್‌ವೊಂದರಲ್ಲಿ ಅರ್ಚಕರು ಮಾಂಸಾಹಾರ ಸೇವಿಸುತ್ತಿದ್ದಾರೆ ಎನ್ನಲಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಹಿಂಸಾಚಾರ ನಡೆದಿದೆ. ಕಾನ್ಪುರದ ಭೂತೇಶ್ವರ ದೇವಾಲಯದ ಅರ್ಚಕ ಪ್ರಶಾಂತ್ ಗಿರಿ ಮೇಲೆ ಸುಮಾರು 50 ರಿಂದ 60 ಜನರ ಗುಂಪೊಂದು ದಾಳಿ ನಡೆಸಿದೆ. ಅರ್ಚಕರನ್ನು ಅವರ ಕೊಠಡಿಯಿಂದ ಹೊರಗೆ ಎಳೆದುಕೊಂಡು…