Headlines

Jallikattu: ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಆರಂಭ; 1 ಸಾವಿರಕ್ಕೂ ಹೆಚ್ಚು ಹೋರಿಗಳು ಭಾಗಿ – Kannada News | Jallikattu organised in Tamil Nadu Madurai’s Avaniyapuram on the occassion of Pongal

ಮಧುರೈ, ಜನವರಿ 15: ತಮಿಳುನಾಡಿನ ಮಧುರೈನ ಜಲ್ಲಿಕಟ್ಟು ಋತುವಿಗೆ ಅವನಿಯಪುರಂ ವೇದಿಕೆ ಸಜ್ಜಾಗಿದೆ. ಪೊಂಗಲ್ (Pongal) ಹಬ್ಬದ ಭಾಗವಾಗಿ ನಡೆಯುವ ತಮಿಳುನಾಡಿನ ಸಾಂಪ್ರದಾಯಿಕ ಹೋರಿ ಓಟದ ಸ್ಪರ್ಧೆಯಾದ ಜಲ್ಲಿಕಟ್ಟು ಇಂದು ಮಧುರೈನಲ್ಲಿ ಪ್ರಾರಂಭವಾಯಿತು. ಅವನಿಯಪುರಂ ಜಲ್ಲಿಕಟ್ಟಿನಲ್ಲಿ ಇಂದು ಸುಮಾರು 550 ಜನರು ಭಾಗವಹಿಸಿದ್ದರು. ಎರಡನೇ ಮತ್ತು ಮೂರನೇ ಕಾರ್ಯಕ್ರಮಗಳು ಮಧುರೈನ ಅಲಂಗನಲ್ಲೂರು ಮತ್ತು ಪಳಮೇಡುವಿನಲ್ಲಿ ನಡೆಯಲಿವೆ. ಒಟ್ಟು 1 ಸಾವಿರ ಹೋರಿಗಳು ಭಾಗವಹಿಸಲಿವೆ. ಜಲ್ಲಿಕಟ್ಟು ಸ್ಪರ್ಧಿಗಳು ವಿಶೇಷವಾಗಿ ಸಿದ್ಧಪಡಿಸಲಾದ ಹೋರಿಗಳನ್ನು ಪಳಗಿಸಲು ಪ್ರಯತ್ನಿಸುತ್ತಾರೆ. ಇದರಲ್ಲಿ ಅತ್ಯುತ್ತಮ ಪ್ರದರ್ಶನ…

Read More

ಮನೆಕೆಲಸಕ್ಕೆಂದು 10 ವರ್ಷದ ಬಾಲಕಿಯ ಕರೆತಂದು ಬೆನ್ನು ಮೂಳೆ ಮುರಿಯುವಂತೆ ಚಿತ್ರಹಿಂಸೆ ಕೊಟ್ಟ ಸಿಆರ್​ಪಿಎಫ್ ಕಾನ್​ಸ್ಟೆಬಲ್ – Kannada News | CRPF Couple Arrested: 10 Year Old Maid Severely Tortured, Spine Fractured in Noida

ಬಾಲಕಿ-ಸಾಂದರ್ಭಿಕ ಚಿತ್ರImage Credit source: Vector Solutions ನೋಯ್ಡಾ, ಜನವರಿ 23: ಮನೆಗೆಲಸಕ್ಕೆಂದು 10 ವರ್ಷದ ಬಾಲಕಿ(Girl)ಯ ಕರೆತಂದು ಸರಿಯಾಗಿ ಆಹಾರವನ್ನೂ ನೀಡದೆ, ಬೆನ್ನು ಮೂಳೆ ಮುರಿಯುವಂತೆ ಹೊಡೆದು ಚಿತ್ರ ಹಿಂಸೆ ಕೊಟ್ಟ ಸಿಆರ್​ಪಿಎಫ್ ಕಾನ್​ಸ್ಟೆಬಲ್ ಮತ್ತವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿ ಘಟನೆ ನಡೆದಿದೆ. ಬಾಲಕಿ ಗಂಭೀರವಾಗಿ ಗಾಯಗೊಂಡು ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಾಲಕಿಯನ್ನು ದಂಪತಿ ಮನೆಗೆಲಸಕ್ಕೆಂದು ಕರೆತಂದು ತಮ್ಮ ಸೋದರ ಸೊಸೆ ಎಂದು ಸುಳ್ಳು ಹೇಳಿದ್ದರು. ಕೇಂದ್ರ ಮೀಸಲು ಪೊಲೀಸ್ ಪಡೆಯ 235…

Read More

‘ಟಾಕ್ಸಿಕ್ ಸಿನಿಮಾದ ಮಹಿಳಾ ಪಾತ್ರಗಳು ಸಖತ್ ಬೋಲ್ಡ್’: ಕೌತುಕ ಹೆಚ್ಚಿಸಿದ ಯಶ್ – Kannada News | Rocking Star Yash talks about Toxic movie female characters ahead of release

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic) ಸಿನಿಮಾ ಸದ್ಯ ಬಿಡುಗಡೆಯ ಹಂತದಲ್ಲಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸಿನಿಮಾ ಬಿಡುಗಡೆಗೂ ಮುನ್ನ ನಟ ಯಶ್ (Yash) ಈ ಚಿತ್ರದ ಕಥೆ ಮತ್ತು ಅದರಲ್ಲಿನ ಮಹಿಳಾ ಪಾತ್ರಗಳ ಕುರಿತು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿರುವ ಮಹಿಳಾ ಪಾತ್ರಗಳು ಅತ್ಯಂತ ಶಕ್ತಿಶಾಲಿ ಹಾಗೂ ಬೋಲ್ಡ್ ಆಗಿ ಮೂಡಿಬಂದಿವೆ ಎಂದು ಅವರು ಹೇಳಿದ್ದಾರೆ. ‘ವೆರೈಟಿ ಇಂಡಿಯಾ’ ಸುದ್ದಿ…

Read More

IND vs AFG: ಮಾನವ್ ಮ್ಯಾಜಿಕ್; 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಅಫ್ಘಾನಿಸ್ತಾನ

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಅಂತ್ಯವಾಗಿದೆ. ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 8 ವಿಕೆಟ್ ಕಳೆದುಕೊಂಡು 564 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಅಫ್ಘಾನಿಸ್ತಾನ ತಂಡ ಎರಡನೇ ದಿನದಾಟದಂತ್ಯಕ್ಕೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಪ್ರಸ್ತುತ 113 ರನ್ ಕಲೆಹಾಕಿರುವ…

Read More

ಈ ರಾಶಿಯವರಿಗೆ ಇರುವಷ್ಟು ತಾಪತ್ರೆ ಯಾವ ರಾಶಿಗೂ ಇಲ್ಲ: ಅದರೂ ಇದರ ನಡುವೆ ಒಂದು ಯೋಗವಿದೆ – Kannada News | Mithuna Rashi Monthly Forecast: Career, Finance and Health Insights for Gemini Natives

ಮಿಥುನ ರಾಶಿಯವರಿಗೆ ಈ ತಿಂಗಳು ಗ್ರಹಗಳ ಸಂಚಾರದಲ್ಲಿ ಆಗುವ ಬದಲಾವಣೆಯಿಂದ ಮಿಶ್ರ ಫಲಗಳಿಂದ ಕೂಡಿದೆ. ಬುಧನ ಚಲನೆ ಮತ್ತು ಗಾಳಿಯ ತತ್ವದ ಈ ರಾಶಿಯವರು ಈ ತಿಂಗಳು ಹೆಚ್ಚು ಜಾಗರೂಕರಾಗಿ ಮತ್ತು ಸೃಜನಶೀಲವಾಗಿ ಇರಬೇಕಾದ ಅನಿವಾರ್ಯತೆ ಇದೆ. ಶುಭ ಗ್ರಹದ ದೃಷ್ಟಿ ಮತ್ತು ಸಂಯೋಗದಿಂದ ಶುಭಾಶುಭ ಫಲಗಳು ನಿಮ್ಮ ಪಾಲಿಗೆ ಇರಲಿದೆ. ಯಾವ ದಶೆ ಉತ್ತಮ? ಹತ್ತನೇ ಮನೆಯ ಮೇಲಿರುವ ಶುಭ ಗ್ರಹಗಳ ದೃಷ್ಟಿಯಿಂದಾಗಿ ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯಲಿದೆ. ನೀವು ಬಹಳ ದಿನಗಳಿಂದ…

Read More

‘ಮೈಕಲ್’ ಬಾಕ್ಸ್ ಆಫೀಸ್: ಏಳು ದಿನಕ್ಕೆ ದಾಖಲೆ ಕಲೆಕ್ಷನ್, ಭಾರತದಲ್ಲೆಷ್ಟು? – Kannada News | Michael movie collection report, how much it gets in India on first week

ಮೈಕಲ್ ಜಾಕ್ಸನ್ (Michael) ಅವರ ಜೀವನ ಆಧಾರಿಸಿದ ಸಿನಿಮಾ ‘ಮೈಕಲ್’ ಏಪ್ರಿಲ್ 24 ರಂದು ಬಿಡುಗಡೆ ಆಗಿದೆ. ಸಿನಿಮಾಕ್ಕೆ ಮೊದಲ ದಿನ ಮಿಶ್ರ ವಿಮರ್ಶೆಗಳು ವ್ಯಕ್ತವಾಗಿದ್ದವು, ಹಾಗಿದ್ದರೂ ಸಹ ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದು, ಏಳು ದಿನಗಳಲ್ಲಿ ಭಾರಿ ದೊಡ್ಡ ಕಲೆಕ್ಷನ್ ಮಾಡಿದೆ. ಕೇವಲ ಏಳೇ ದಿನದಲ್ಲಿ ‘ಮೈಖಲ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. ಮಾತ್ರವಲ್ಲ ಭಾರತದಲ್ಲಿಯೂ ಸಹ ದೊಡ್ಡ ಮೊತ್ತದ ಗಳಿಕೆ ಮಾಡಿದೆ ಈ ಸಿನಿಮಾ. ಮೈಖಲ್ ಜಾಕ್ಸನ್ ಅವರ ಸಹೋದರನ…

Read More

‘3 ಇಡಿಯಟ್ಸ್’ ಸೀಕ್ವೆಲ್ ಕಥೆ ರಿವೀಲ್; ಮುಂದುವರಿಯಲಿದೆ ರಾಂಚೋ, ಫರ್ಹಾನ್ ಮತ್ತು ರಾಜು ಪಾತ್ರ – Kannada News | 3 Idiots 2 Confirmed Hirani Reveals Mid Life Crisis Plot and Aamir Khan’s Return

ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ‘3 ಇಡಿಯಟ್ಸ್’ (3 Idiots) ಸಿನಿಮಾ ಬಿಡುಗಡೆಯಾಗಿ ಹಲವು ವರ್ಷಗಳ ಬಳಿಕ, ಅದರ ಮುಂದುವರಿದ ಭಾಗ ಬರುತ್ತಿದೆ. ಈ ಕುರಿತು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅತ್ಯಂತ ಆಸಕ್ತಿದಾಯಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. 2009ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಶಿಕ್ಷಣ ಪದ್ಧತಿಯ ಮೇಲಿನ ವಿಡಂಬನೆ ಹಾಗೂ ‘ಆಲ್ ಈಸ್ ವೆಲ್’ ಎಂಬ ಐಕಾನಿಕ್ ಡೈಲಾಗ್ ಮೂಲಕ ದೇಶಾದ್ಯಂತ ದೊಡ್ಡ ಯಶಸ್ಸು ಕಂಡಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕ ಹಿರಾನಿ, ತಾವು ಮತ್ತು ಲೇಖಕ…

Read More

ಟ್ರಂಪ್ ಮನವಿ ಬಳಿಕ ಇರಾನ್​​ನ ನೈಸರ್ಗಿಕ ಅನಿಲ ಉತ್ಪಾದನಾ ಘಟಕಗಳ ಮೇಲಿನ ದಾಳಿ ನಿಲ್ಲಿಸಲು ನಿರ್ಧರಿಸಿದ ಇಸ್ರೇಲ್

ಜೆರುಸಲೇಂ, ಮಾರ್ಚ್​ 20: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಮನವಿ ಬಳಿಕ ಇರಾನ್​​ನ ನೈಸರ್ಗಿಕ ಅನಿಲ ಉತ್ಪಾದನಾ ಘಟಕಗಳ ಮೇಲಿನ ದಾಳಿ ನಿಲ್ಲಿಸಲು ಇಸ್ರೇಲ್ ನಿರ್ಧರಿಸಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ನಡುವಿನ ಇಪ್ಪತ್ತು ದಿನಗಳ ಜಂಟಿ ಕಾರ್ಯಾಚರಣೆಗಳ ನಂತರ, ಯುರೇನಿಯಂ ಅನ್ನು ಉತ್ಕೃಷ್ಟಗೊಳಿಸುವ ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸುವ ಇರಾನ್‌ನ ಸಾಮರ್ಥ್ಯವು ದುರ್ಬಲಗೊಂಡಿದೆ ಎಂದು ನೆತನ್ಯಾಹು ಹೇಳಿಕೊಂಡಿದ್ದಾರೆ. ಅವರ ಪ್ರಕಾರ, ಆರಂಭಿಕ ಹಂತವು ಕ್ಷಿಪಣಿ ದಾಸ್ತಾನುಗಳು, ಡ್ರೋನ್‌ಗಳು ಮತ್ತು ಪರಮಾಣು-ಸಂಬಂಧಿತ ಸ್ವತ್ತುಗಳನ್ನು ನಾಶಪಡಿಸಿತು ಮತ್ತು…

Read More

ತೆವಳುತ್ತಾ ಸಾಗಿದ ‘ದಿ ಕೇರಳ ಸ್ಟೋರಿ 2’ ಕಲೆಕ್ಷನ್; ವೀಕೆಂಡ್​ನಲ್ಲೂ ಏರಿಕೆ ಇಲ್ಲ

ಭಾರಿ ವಿವಾದದ ಮೂಲಕ ಸುದ್ದಿ ಆಗಿದ್ದ ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾ ದೊಡ್ಡ ಕಲೆಕ್ಷನ್ ಮಾಡುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಆಗಿಲ್ಲ. ಫೆಬ್ರವರಿ 27ರಂದು ಬಿಡುಗಡೆ ಆದ ಈ ಸಿನಿಮಾಗೆ ಹೇಳಿಕೊಳ್ಳುವಂತಹ ಓಪನಿಂಗ್ ಸಿಗಲಿಲ್ಲ. ಬಿಡುಗಡೆಯಾಗಿ 9 ದಿನಗಳು ಕಳೆದಿವೆ. ಮಾಡಿದ ವಿವಾದಕ್ಕೆ ಹೋಲಿಸಿದರೆ ಈವರೆಗೂ ಆಗಿರುವ ಕಲೆಕ್ಷನ್ ಕಡಿಮೆ. 9 ದಿನಗಳಲ್ಲಿ ಈ ಚಿತ್ರಕ್ಕೆ 30 ಕೋಟಿ ರೂಪಾಯಿ ಕಲೆಕ್ಷನ್ (The Kerala Story…

Read More

Optical Illusion: ಈ ಚಿತ್ರದಲ್ಲಿರುವ ಅನ್ಯಗ್ರಹ ಜೀವಿಯನ್ನು 15 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ – Kannada News | Optical Illusion: Can you tell which of these five people is the alien

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media ಒಗಟುಗಳನ್ನು ಬಿಡಿಸುವುದೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಈ ಒಗಟಿನ ಚಿತ್ರಗಳನ್ನು ಬಿಡಿಸುತ್ತಾ ಕುಳಿತರೆ ಸಮಯ ಕಳೆದದ್ದೇ ತಿಳಿಯಲ್ಲ. ಮೆದುಳಿಗೆ ಕೆಲಸ ನೀಡುವಂತಹ ಅನೇಕ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು ಪ್ರತಿನಿತ್ಯ ವೈರಲ್‌ ಆಗುವುದನ್ನು ನೀವು ನೋಡಿರುತ್ತೀರಿ. ಇದೀಗ ಇಲ್ಲೊಂದು ಅಂತಹದ್ದೇ ಒಗಟಿನ ಚಿತ್ರವೊಂದು ವೈರಲ್‌ ಆಗಿದ್ದು, ಇದರಲ್ಲಿ ಇರುವ ಅನ್ಯಗ್ರಹ ಜೀವಿಯನ್ನು ಹದಿನೈದು ಸೆಕೆಂಡುಗಳೊಳಗೆ ಪತ್ತೆ ಹಚ್ಚಬೇಕು. ನಿಮ್ಮ ಬುದ್ಧಿವಂತಿಕೆಗೆ ಸವಾಲೆಸುಗುವ ಈ ಒಗಟಿನ…

Read More