ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 9ರ ದಿನಭವಿಷ್ಯ
ಈ ದಿನ ಬಿಳಿ ಬಟ್ಟೆ ಧರಿಸುವುದರಿಂದ ಚಂದ್ರ ಬಲ ವೃದ್ಧಿ. ಕೆಲಸ-ಕಾರ್ಯದಲ್ಲಿ ತೊಡಗಿಕೊಳ್ಳಲು ಉತ್ಸಾಹ ಬರುವುದಕ್ಕೆ, ಶೀಘ್ರ ನಿರ್ಧಾರ ಮಾಡುವುದಕ್ಕೆ, ಕ್ರಿಯೇಟಿವ್ ಆಲೋಚನೆಗಳು ಬರುವುದಕ್ಕೆ ಇದರಿಂದ ಸಹಕಾರಿ ಆಗುತ್ತದೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ಯಾವುದೇ ವಿಚಾರದಲ್ಲಿ ಉಲ್ಲಾಸ- ಉತ್ಸಾಹದಿಂದ ತೊಡಗಿಕೊಳ್ಳಲು ಮನಸ್ಸು ಇರುವುದಿಲ್ಲ. ಆದಾಯದಲ್ಲಿ ಇಳಿಕೆ ಆಗುತ್ತಿದೆ ಎಂಬುದು ಒಂದು ಕಡೆಯ ಚಿಂತೆಯಾದರೆ, ಅದನ್ನು ಹೆಚ್ಚಿಸಲು ಮಾಡುತ್ತಿರುವ ಪ್ರಯತ್ನಗಳು ಫಲ ನೀಡುತ್ತಿಲ್ಲ ಎಂಬುದು ಇನ್ನೊಂದು…