Viral Video: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್
ಚಿತ್ರಕೂಟ (ಉತ್ತರ ಪ್ರದೇಶ): ಶಾಲೆ ಕೇವಲ ಅಕ್ಷರ ಕಲಿಸುವ ಜಾಗವಲ್ಲ, ಬದಲಾಗಿ ಜ್ಞಾನ ಮತ್ತು ಸಂಸ್ಕಾರವನ್ನು ನೀಡುವ ಪವಿತ್ರ ಸ್ಥಳ. ಇದು ವಿದ್ಯಾರ್ಥಿಗಳಲ್ಲಿ ಶಿಸ್ತು, ಮೌಲ್ಯಗಳು ಮತ್ತು ಒಳ್ಳೆಯ ನಡತೆಯನ್ನು ಬೆಳೆಸುವ ಭವಿಷ್ಯದ ಬುನಾದಿ. ಆದರೆ ಇಂತಹ ಜ್ಞಾನದ ದೇಗುಲದಲ್ಲೇ ಶಿಕ್ಷಕಿಯೊಬ್ಬಳು ತನ್ನ ಅಧಿಕಾರವನ್ನೇ ದುರ್ಬಳಕೆ ಮಾಡಿಕೊಂಡು ಪುಟ್ಟ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಏನಿದು ಘಟನೆ?…