ರಾಯಚೂರು: ಬೆಂಕಿ ಅವಘಡಕ್ಕೆ 700 ಕುರಿಗಳ ಸಮೇತ ಶೆಡ್ ಸುಟ್ಟು ಭಸ್ಮ; ಗರ್ಭದಲ್ಲೇ ಮರಿಗಳ ಮಾರಣ ಹೋಮ
ರಾಯಚೂರು, ಮಾರ್ಚ್ 06: ಅದು ರಣಭೀಕರ ಅಗ್ನಿ (fire) ಅವಘಡ. ರಾತ್ರೋರಾತ್ರಿ ಕುರಿಗಳ ಶೆಡ್ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿತ್ತು. ಇಡೀ ಕುರಿ (sheep) ಶೆಡ್ ಬೆಂಕಿಗಾಹುತಿಯಾಗಿದ್ದು, ಸುಮಾರು 700 ಕುರಿಗಳು ಸುಟ್ಟು ಕರಕಲಾಗಿವೆ. ಇನ್ನೇನು ಕೆಲವೇ ದಿನಗಳಲ್ಲಿ ಮರಿ ಹಾಕಬೇಕಿದ್ದ ಕುರಿಗಳು ಗರ್ಭದಲ್ಲಿರುವ ಮರಿ ಸಮೇತ ಸುಟ್ಟುಹೋಗಿವೆ. ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಮುಕ್ಕುಂದ ಗ್ರಾಮದ ಹೊರ ಭಾಗದಲ್ಲಿ ಘಟನೆ ನಡೆದಿದೆ. 1 ಕೋಟಿ ರೂ ವೆಚ್ಚದ ಕುರಿ ಶೆಡ್ ಬೆಂಕಿಗಾಹುತಿ ಹೇಮಲತಾ ಮಧುಸೂದನ್ ಎನ್ನುವವರು ಸುಮಾರು 1…