KPSC ಪರೀಕ್ಷೆ ಅಕ್ರಮ, ಒಂದೇ ಕೊಠಡಿಯಲ್ಲಿದ್ದ 15 ಮಂದಿ ಪಾಸ್! ಕೆಎಎಸ್ ಮುಖ್ಯಪರೀಕ್ಷೆ ಫಲಿತಾಂಶದ ಬಗ್ಗೆಯೇ ಹತ್ತಾರು ಸಂಶಯ – Kannada News | KPSC KAS Exam Scam: 15 Candidates From Same Room Pass Main Exam, Allegations Rock Karnataka PSC Results
ಬೆಂಗಳೂರು, ಮಾರ್ಚ್ 6: ಕರ್ನಾಟಕ (Karnataka) ಲೋಕಸೇವಾ ಆಯೋಗ (KPSC) ನಡೆಸಿದ ಕೆಎಎಸ್ (KAS) ಮುಖ್ಯಪರೀಕ್ಷೆಯ ಫಲಿತಾಂಶದ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ. ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂಬ ಆರೋಪದ ನಡುವೆ, ಒಂದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆದ 15 ಮಂದಿ ಅಭ್ಯರ್ಥಿಗಳು ಪಾಸಾಗಿ ಸಂದರ್ಶನಕ್ಕೆ ಆಯ್ಕೆಯಾಗಿರುವುದು ವ್ಯಾಪಕ ಸಂಶಯಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಾವಿರ ಕೋಟಿ ರೂಪಾಯಿ ಮಟ್ಟದ ಹಗರಣ ನಡೆದಿರಬಹುದು ಎಂಬ ಆರೋಪವನ್ನು ಕೆಲ ಅಭ್ಯರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಮಾಡಿವೆ….