ವಿದ್ಯಾಭ್ಯಾಸ ಮುಗಿದರೂ ಸಿಗದ ಕೆಲಸ, ಸಾಲಬಾಧೆ, ಅಮೆರಿಕದಲ್ಲಿ ಭಾರತೀಯ ಯುವಕ ಆತ್ಮಹತ್ಯೆ – Kannada News | Indian Student Suicide in US: Unemployment and Debt Burden Drive Tragedy
ಕರ್ನೂಲ್, ಮೇ 1: ದೊಡ್ಡ ದೊಡ್ಡ ಕನಸ್ಸುಗಳನ್ನು ಹೊತ್ತು ಅಮೆರಿಕ(America)ಕ್ಕೆ ಓದಲು ಹೋಗಿದ್ದ ಭಾರತೀಯ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ 26 ವರ್ಷದ ಚಂದು ಮೃತ ಯುವಕ. ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ ಅರಸುತ್ತಿದ್ದ ಯುವಕನ ಅಕಾಲಿಕ ಸಾವು ಆತನ ಕುಟುಂಬವನ್ನು ಅಕ್ಷರಶಃ ಬೀದಿಗೆ ತಳ್ಳಿದೆ. ಚಂದು ಚಿಕಾಗೋದ ಡಿಪಾಲ್ ವಿಶ್ವವಿದ್ಯಾಲಯದಿಂದ ಇತ್ತೀಚೆಗಷ್ಟೇ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಕಳೆದ ಹಲವು ವಾರಗಳಿಂದ ಉದ್ಯೋಗ ಹುಡುಕುತ್ತಿದ್ದರೂ ಸಿಕ್ಕಿರಲಿಲ್ಲ. ಕರ್ನೂಲ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ…