Headlines

Vasthu Shastra: ಮನೆಯಲ್ಲಿ ಬೆಕ್ಕು ಸಾಕುವುದು ಅಶುಭವೇ? ವಾಸ್ತು ಮತ್ತು ಜ್ಯೋತಿಷ್ಯ ತಜ್ಞರು ಹೇಳುವುದೇನು? – Kannada News

ಮನೆಯಲ್ಲಿ ಬೆಕ್ಕು ಸಾಕುವುದು ಅಶುಭವೇ? Image Credit source: Pinterest ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳನ್ನು ಸಾಕುವುದು ಅನೇಕರ ನೆಚ್ಚಿನ ಹವ್ಯಾಸವಾಗಿದೆ. ಅದರಲ್ಲೂ ವಿಶೇಷವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ಜಾಗದ ಅಭಾವ ಅಥವಾ ನಿರ್ವಹಣೆಯ ಕಾರಣಗಳಿಂದಾಗಿ ನಾಯಿಗಳಿಗಿಂತ ಬೆಕ್ಕುಗಳನ್ನು ಸಾಕುವುದರಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಆದಾಗ್ಯೂ, ಮನೆಯಲ್ಲಿ ಬೆಕ್ಕನ್ನು ಸಾಕುವುದು ಅದೃಷ್ಟವನ್ನು ತರುತ್ತದೆಯೇ ಅಥವಾ ದುರದೃಷ್ಟವನ್ನು ಉಂಟುಮಾಡುತ್ತದೆಯೇ ಎಂಬ ಗೊಂದಲ ಇಂದಿಗೂ ಅನೇಕರಲ್ಲಿದೆ. ಈ ಬಗ್ಗೆ ವಾಸ್ತು ಮತ್ತು ಜ್ಯೋತಿಷ್ಯ ತಜ್ಞರು ಏನು ಹೇಳುತ್ತಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ….

Read More

‘ಅವರಿಗೊಂದು ನ್ಯಾಯ, ನನಗೊಂದು ನ್ಯಾಯ’; ನಿವೃತ್ತಿ ಘೋಷಿಸಿ ಸಿಡಿದ ಉಸ್ಮಾನ್ ಖವಾಜಾ – Kannada News | Usman Khawaja Retires: Australian Cricketer Blasts ‘Racial Abuse’ Allegations

ಹೊಸ ವರ್ಷದ ಮೊದಲ ದಿನವೇ ಕ್ರಿಕೆಟ್ ಲೋಕಕ್ಕೆ ದಿಗ್ಗಜ ಆಟಗಾರನೊಬ್ಬ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ (Usman Khawaja) ನಿವೃತ್ತಿ ಘೋಷಿಸಿದ್ದಾರೆ. ವಾಸ್ತವವಾಗಿ ಖವಾಜಾ ನಿವೃತ್ತಿಯ ಬಗ್ಗೆ ಬಹಳ ದಿನಗಳಿಂದಲೂ ವರದಿಗಳು ಹರಿದಾಡುತ್ತಿದ್ದವು. ಅದರಂತೆ ಈಗ ಖವಾಜಾ ಕ್ರಿಕೆಟ್​ ಬದುಕಿನಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಆಶಸ್ ಸರಣಿಯ (Ashes series) ನಡುವೆ ಖವಾಜಾ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದರ ಜೊತೆಗೆ ಮಾಜಿನ ಕ್ರಿಕೆಟಿಗರ…

Read More

2026 ರ ಟಿ20 ವಿಶ್ವಕಪ್‌ನಲ್ಲಿ ಮ್ಯಾಚ್ ಫಿಕ್ಸಿಂಗ್..! ತನಿಖೆ ಪ್ರಾರಂಭಿಸಿದ ಐಸಿಸಿ – Kannada News | T20 World Cup 2026 Match Fixing Allegations: ICC Probes Canada vs NZ Game

ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆದಿದ್ದ 2026 ರ ಟಿ20 ವಿಶ್ವಕಪ್​ನಲ್ಲಿ (T20 World Cup 2026) ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ಐಸಿಸಿ (ICC) ಕೂಡ ಈಗಾಗಲೇ ತನಿಖೆ ನಡೆಸುತ್ತಿದೆ ಎಂತಲೂ ವರದಿಯಾಗಿದೆ. ವರದಿಯ ಪ್ರಕಾರ, ನ್ಯೂಜಿಲೆಂಡ್ ಹಾಗೂ ಕೆನಡಾ ನಡುವಿನ ಪಂದ್ಯದ ವೇಳೆ ಮ್ಯಾಚ್ ಫಿಕ್ಸಿಂಗ್ ನಡೆದಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ನಿಗ್ರಹ ಘಟಕ ಈ ಪಂದ್ಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ….

Read More

ಮೇ 5ರ ನಂತರ ಹೆಣ್ಣುಮಕ್ಕಳು ಭಯವಿಲ್ಲದೆ ಮಧ್ಯರಾತ್ರಿ 1 ಗಂಟೆಗೂ ಹೊರಗೆ ಓಡಾಡಬಹುದು; ಅಮಿತ್ ಶಾ ಭರವಸೆ – Kannada News | Girls can go out fearlessly in Mid night after May 5 Amit Shah slams Mamata Banerjee

ಕೊಲ್ಕತ್ತಾ, ಏಪ್ರಿಲ್ 25: ಪಶ್ಚಿಮ ಬಂಗಾಳದಲ್ಲಿ ನಡೆಯುವ 2ನೇ ಹಂತದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಜಮಾಲ್ಪುರದಲ್ಲಿ ಚುನಾವಣಾ ರ್ಯಾಲಿಯನ್ನು ನಡೆಸಿದರು. ಈ ವೇಳೆ ಮಾತನಾಡಿದ ಅವರು, “ಕಳೆದ 15 ವರ್ಷಗಳಲ್ಲಿ ಮಮತಾ ಬ್ಯಾನರ್ಜಿ ಅವರ ಆಳ್ವಿಕೆಯಲ್ಲಿ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಆರ್‌ಜಿ ಕರ್, ಸಂದೇಶಖಾಲಿ, ಕೊಲ್ಕತ್ತಾ ಕಾನೂನು ಕಾಲೇಜು ಮತ್ತು ದುರ್ಗಾಪುರ ಕಾಲೇಜಿನಂತಹ ಘಟನೆಗಳು ಮಹಿಳೆಯರ ವಿರುದ್ಧದ ದೌರ್ಜನ್ಯಗಳು ಎಲ್ಲೆಡೆ ನಡೆದಿವೆ ಎಂದು ಸಾಬೀತುಪಡಿಸುತ್ತಿವೆ. ಈಗ…

Read More

Yadgir Court Recruitment 2026: ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗವಕಾಶ; 10th ಪಾಸಾಗಿದ್ರೆ ಸಾಕು

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​ ಇಲ್ಲಿದೆ. ಅಧಿಕೃತ ಅಧಿಸೂಚನೆಯ ಮೂಲಕ ಯಾದಗಿರಿ ಇ-ಕೋರ್ಟ್ ಪ್ರಸ್ತುತ ಖಾಲಿ ಇರುವ ಒಟ್ಟು 14 ಪ್ರೊಸೆಸ್ ಸರ್ವರ್ ಮತ್ತು ಪಿಯೋನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 27,000 ರಿಂದ ರೂ. 61,300 ರವರೆಗೆ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10ನೇ…

Read More

ನೈಟ್ ಕ್ಲಬ್ ಫೈಟ್​​: ಸಹ ಆಟಗಾರರನ್ನು ರಕ್ಷಿಸಲು ಸುಳ್ಳು ಹೇಳಿದ ಬ್ರೂಕ್ – Kannada News | Harry Brook admits to lying about nightclub incident

ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಪ್ರಸ್ತುತ ಶ್ರೀಲಂಕಾದಲ್ಲಿದ್ದಾರೆ. ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿರುವ ಬ್ರೂಕ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ನೈಟ್ ಕ್ಲಬ್ ಫೈಟ್. ನ್ಯೂಝಿಲೆಂಡ್ ವಿರುದ್ಧದ ಸರಣಿ ವೇಳೆ ಬ್ರೂಕ್ ನೈಟ್ ಕ್ಲಬ್​ನಲ್ಲಿ ಗಲಾಟೆ ಮಾಡಿಕೊಂಡಿದ್ದರು. ನ್ಯೂಝಿಲೆಂಡ್ ವಿರುದ್ಧದ ಸರಣಿ ವೇಳೆ ವೆಲ್ಲಿಂಗ್ಟನ್​ನಲ್ಲಿನ ನೈಟ್ ಕ್ಲಬ್​ಗೆ ತೆರಳಿದ್ದ ಹ್ಯಾರಿ ಬ್ರೂಕ್ ಅಲ್ಲಿನ ಬೌನ್ಸರ್​ ಜೊತೆ ಹೊಡೆದಾಡಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಇಂಗ್ಲೆಂಡ್…

Read More

ಇಂದೋರ್​ನ ಈ ಕೋಟ್ಯಧಿಪತಿ ಭಿಕ್ಷುಕನ ಬಳಿಯಿದೆ 3 ಮನೆ, ಕಾರುಗಳು! – Kannada News | Indore’s crorepati beggar Mangilal owns 3 homes, cars, part time moneylending

ನವದೆಹಲಿ, ಜನವರಿ 19: ಇಂದೋರ್ ನಗರವನ್ನು ಭಿಕ್ಷುಕ (Beggar) ಮುಕ್ತಗೊಳಿಸಲು ನಡೆಯುತ್ತಿರುವ ಅಭಿಯಾನದ ವೇಳೆ ಅನಿರೀಕ್ಷಿತ ವಿಷಯವೊಂದು ಹೊರಬಿದ್ದಿದೆ. ಬೀದಿಗಳಲ್ಲಿ ಭಿಕ್ಷೆ ಬೇಡುವ ಅಂಗವಿಕಲ ವ್ಯಕ್ತಿಯೊಬ್ಬರು ಕೋಟ್ಯಾಧಿಪತಿ ಎಂಬ ವಿಷಯ ಬಯಲಾಗಿದೆ. ಮಧ್ಯಪ್ರದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ತಂಡದಿಂದ ಗುರುತಿಸಲ್ಪಟ್ಟ ನಂತರ ಸಾಕಷ್ಟು ಗಮನ ಸೆಳೆದಿರುವ ಭಿಕ್ಷುಕರೊಬ್ಬರು ಪ್ರತಿದಿನ 500ರಿಂದ 1,000 ರೂ. ವರೆಗೆ ನಡುವೆ ಗಳಿಸುತ್ತಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇತ್ತೀಚೆಗೆ ಪ್ರಾರಂಭಿಸಲಾದ ಇಂದೋರ್ ಭಿಕ್ಷುಕ ನಿರ್ಮೂಲನಾ ಅಭಿಯಾನದಲ್ಲಿ, ಮಧ್ಯಪ್ರದೇಶ ಸರ್ಕಾರವು ಭಿಕ್ಷಾಟನೆಯ…

Read More

‘ಸಾಯೋವರೆಗೆ ನಿಮ್ಮ ಮರೆಯಲ್ಲ’; ಸುದೀಪ್​​ಗೆ ತಲೆಬಾಗಿ ನಮಸ್ಕರಿಸಿ ಧನ್ಯವಾದ ಹೇಳಿದ ಗಿಲ್ಲಿ – Kannada News | Gilli Nata Special Thanks To Kichcha Sudeep Ahead of Winning Announcment

‘ಬಿಗ್ ಬಾಸ್ ಕನ್ನಡ ಸೀಸನ್ 12’ ಅಂತಿಮ ಹಂತಕ್ಕೆ ಬಂದಿದೆ. ಗಿಲ್ಲಿ ಕಪ್ ಎತ್ತಿದ್ದಾರೆ ಎಂದು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಇದು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ. ಹೀಗಿರುವಾಗಲೇ ಗಿಲ್ಲಿ ಅವರು ಸುದೀಪ್​​ಗೆ ಧನ್ಯವಾದ ಹೇಳಿದ್ದಾರೆ. ತಲೆಬಾಗಿ ಅವರು ನಮಸ್ಕರಿಸಿದ್ದಾರೆ. ಇದಕ್ಕೆ ಕಾರಣವನ್ನು ಅವರು ನೀಡಿದ್ದಾರೆ. ಗಿಲ್ಲಿ ನಟ ಅವರ ವಿಟಿಯನ್ನು ಹಾಕಿದರು. ಇದು ತುಂಬಾನೇ ಅದ್ಭುತವಾಗಿತ್ತು. ಈ ವಿಡಿಯೋ ಗಮನ ಸೆಳೆಯಿತು. ಗಿಲ್ಲಿ ಅವರಿಗೆ ಇದನ್ನು ನೋಡಿ ಒಂದು ಸಿನಿಮಾ ನೋಡಿದಂತೆ ಆಯಿತು. ಆ ಬಳಿಕ ಮಾತನಾಡಿದ ಗಿಲ್ಲಿ,…

Read More

ಬಂಡೆ ಬ್ಲಾಸ್ಟ್​​ನಿಂದ 4 ಚಿರತೆಗಳು ಸಾವು: ಹೋರಾಟದ ಎಚ್ಚರಿಕೆ ಕೊಟ್ಟ ST ಸೋಮಶೇಖರ್, ಖಂಡ್ರೆ ಹೇಳಿದ್ದಿಷ್ಟು – Kannada News | Bengaluru: Four Leopards Killed in Rock Blasting Incident; MLA ST Somashekhar Warns of Protest

ಬೆಂಗಳೂರು, ಜನವರಿ 01: ನಾಲ್ಕು ಚಿರತೆಗಳ (Leopard) ಮೃತದೇಹ ಛಿದ್ರ ಛಿದ್ರವಾಗಿದೆ. ಕ್ವಾರಿಯಿಂದ  ಸಿಡಿದ (Quarry Blast) ಕಲ್ಲು ನಾಲ್ಕು ಚಿರತೆಗಳ ಪ್ರಾಣ ತೆಗೆದಿದೆ. ಗರ್ಭಿಣಿ ಚಿರತೆ ಮತ್ತು ಚಿರತೆಯ ಹೊಟ್ಟೆಯಲ್ಲಿದ್ದ ಮೂರು ಮರಿಗಳು ಹುಟ್ಟುವ ಮೊದಲೇ ಸತ್ತು ಹೋಗಿವೆ. ಚಿರತೆ ಕೊಂದವರ ವಿರುದ್ಧ ಯಶವಂತಪುರ ಕ್ಷೇತ್ರದ ಶಾಸಕ ಎಸ್‌.ಟಿ ಸೋಮಶೇಖರ್ ಕಿಡಿಕಾರಿದ್ದಾರೆ. ಏನಿದು ಪ್ರಕರಣ? ಯಶವಂತಪುರ ಕ್ಷೇತ್ರ ವ್ಯಾಪ್ತಿಗೆ ಬರುವ ಕೆಂಗೇರಿ ಹೋಬಳಿಯ ಚಿಕ್ಕನಹಳ್ಳಿ ಗ್ರಾಮ ಪಂಚಾಯ್ತಿ ವಾಪ್ತಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಕಲ್ಲು…

Read More

‘ಸರ್ಸೆ ಸೆರಗು’ ಹಾಡಿಗೆ ಅಶ್ಲೀಲ ನೃತ್ಯ, ನೋರಾ ಫತೇಹಿ ವಿರುದ್ಧ ಫತ್ವಾ

ಪ್ರೇಮ್ (Prem) ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿ: ದಿ ಡೆವಿಲ್’ ಸಿನಿಮಾದ ‘ಸರ್ಸೆ ಸೆರಗು’ ಹಾಡು ಭಾರಿ ವಿವಾದ ಹುಟ್ಟುಹಾಕಿದೆ. ಹಾಡಿನ ಹಿಂದಿ ಆವೃತ್ತಿಯಾದ ‘ಸರ್ಕೆ ಚುನರಿ’ ಹಾಡಿನ ವಿರುದ್ಧ ತೀವ್ರ ಟೀಕೆ ಮತ್ತು ವಿರೋಧ ವ್ಯಕ್ತವಾಗಿದ್ದು, ಈಗಾಗಲೇ ಸಿಬಿಎಫ್​​ಸಿ, ಸೈಬರ್ ಪೊಲೀಸರಿಗೆ ದೂರು ದಾಖಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ ಸಹ ಹಾಡಿನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ನಿರ್ದೇಶಕ ಮತ್ತು ಗೀತರಚನೆಕಾರ ಪ್ರೇಮ್ ಸೇರಿದಂತೆ ನೋರಾ ಫತೇಹಿ, ಸಂಜಯ್ ದತ್ ಇನ್ನೂ ಹಲವರಿಗೆ ನೊಡೀಸ್…

Read More