Railway Recruitment 2026: ರೈಲ್ವೆಯಲ್ಲಿ ಕ್ರೀಡಾ ಕೋಟಾದಡಿ 54 ಜೂನಿಯರ್ ಹುದ್ದೆಗಳಿಗೆ ನೇಮಕಾತಿ – Kannada News | RRC South Eastern Railway Sports Quota Recruitment 2025 26: 54 Vacancies for Athletes

ರೈಲ್ವೆ ನೇಮಕಾತಿ ಕೋಶ (RRC) 2025-26ನೇ ಸಾಲಿಗೆ ಕೇಂದ್ರ ಸರ್ಕಾರದ ರೈಲ್ವೆ ಸಚಿವಾಲಯದ ಆಗ್ನೇಯ ರೈಲ್ವೆಯಲ್ಲಿ ಕ್ರೀಡಾ ಕೋಟಾದಡಿಯಲ್ಲಿ ಉದ್ಯೋಗಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಯಾವುದೇ ಅರ್ಹ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು. ಈ ಅಧಿಸೂಚನೆಯಡಿಯಲ್ಲಿ ಒಟ್ಟು 54 ಜೂನಿಯರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆನ್‌ಲೈನ್ ಅರ್ಜಿಗಳು ಜನವರಿ 10 ರಿಂದ ಪ್ರಾರಂಭವಾಗುತ್ತವೆ. ಖಾಲಿ ಹುದ್ದೆಗಳ ವಿವರ: ಗ್ರೂಪ್-ಸಿ ಹುದ್ದೆಗಳ ಸಂಖ್ಯೆ (ಹಂತ-4, ಹಂತ-5): 5 ಗ್ರೂಪ್-ಸಿ (ಮಟ್ಟ-2/3)…

Read More

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಅಧ್ಯಾಯ ವಿವಾದ, ಕ್ಷಮೆ ಕೇಳಿ ಇಡೀ ಪುಸ್ತಕವನ್ನೇ ಹಿಂಪಡೆದ ಎನ್​ಸಿಇಆರ್​ಟಿ

ನವದೆಹಲಿ, ಮಾರ್ಚ್​ 10: ದೇಶದ ಪಠ್ಯಪುಸ್ತಕಗಳನ್ನು ಪ್ರಕಟಿಸುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ( ಎನ್​ಸಿಆರ್​ಟಿ) ವಿವಾದಿತ ಅಧ್ಯಾಯದ ಬದಲಾಗಿ ಇಡೀ ಪುಸ್ತಕವನ್ನೇ ಹಿಂಪಡೆದಿದೆ. ಈ ಬಾರಿ 8ನೇ ತರಗತಿಯ ಹೊಸ ಸಮಾಜ ವಿಜ್ಞಾನ(Social Science) ಪುಸ್ತಕದ ಒಂದು ಅಧ್ಯಾಯದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ಸವಾಲುಗಳ ಬಗ್ಗೆ ಬರೆಯಲಾಗಿದೆ. ಅಲ್ಲದೇ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿಷಯವನ್ನು ಉಲ್ಲೇಖಿಸಿರುವುದು ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ನ್ಯಾಯಾಂಗದ ಗೌರವಕ್ಕೆ…

Read More

CBSE 12th Result 2026 Declared: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ರಿಸಲ್ಟ್​ ಪರಿಶೀಲಿಸಲು ಈ ಲಿಂಕ್ ಬಳಸಿ – Kannada News | CBSE 12th Result 2026 Declared: Check Marks and Download Scorecard Now!

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟImage Credit source: gemini ai ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) 2026ನೇ ಸಾಲಿನ 12ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಬರೆದಿದ್ದ ಈ ಪರೀಕ್ಷೆಯ ಫಲಿತಾಂಶಕ್ಕಾಗಿ ದೀರ್ಘಕಾಲದ ಕಾಯುವಿಕೆ ಈಗ ಅಂತ್ಯಗೊಂಡಿದೆ. ಮಂಡಳಿಯು ತನ್ನ ಅಧಿಕೃತ ವೆಬ್‌ಸೈಟ್‌ಗಳಾದ cbseresults.nic.in ಮತ್ತು cbse.gov.in ನಲ್ಲಿ ಫಲಿತಾಂಶವನ್ನು ಪ್ರಕಟಿಸಿದ್ದು, ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ಮತ್ತು ಶಾಲಾ ಕೋಡ್ ಬಳಸಿ ಅಂಕಪಟ್ಟಿಗಳನ್ನು ವೀಕ್ಷಿಸಬಹುದಾಗಿದೆ. ಫಲಿತಾಂಶ…

Read More

ಮದುವೆ ಮನೆಯಲ್ಲಿ ಅತಿಥಿಗಳ ಮೇಲೆ ಬೀದಿ ನಾಯಿ ದಾಳಿ, 60ಕ್ಕೂ ಹೆಚ್ಚು ಮಂದಿಗೆ ಗಾಯ – Kannada News | Street Dog Attack at Badaun Wedding Injures more than 60 Guests in UP Chaos

ಸಾಂದರ್ಭಿಕ ಚಿತ್ರ Image Credit source: Free Press Journal ಲಕ್ನೋ, ಏಪ್ರಿಲ್ 23: ಮದುವೆ(Marriage) ಎಲ್ಲವೂ ಸುಸೂತ್ರವಾಗಿ ನೆರವೇರಿತ್ತು, ವಧುವನ್ನು ಬೀಳ್ಕೊಡುವ ಭಾವುಕ ಕ್ಷಣ ಅದು. ಆ ಸಮಯದಲ್ಲಿ ಬೀದಿ ನಾಯಿ ಮಂಟಪಕ್ಕೆ ನುಗ್ಗಿ ಅತಿಥಿಗಳ ಮೇಲೆ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಬುಡೌನ್​ನಲ್ಲಿ ನಡೆದಿದೆ. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಭಾಂಗಣದಲ್ಲಿ ಕಾಲ್ತುಳಿತದಂತಹ ಸನ್ನಿವೇಶ ಬಿಸೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲ್ಸಿ ರಸ್ತೆಯಲ್ಲಿರುವ ಅಭಿನಂದನ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ಈ ಘಟನೆ ಜರುಗಿದೆ….

Read More

ನಿತ್ಯ ಭವಿಷ್ಯ: ಇಂದು ಈ ರಾಶಿಯವರು ಅನ್ಯರ ಕಾರ್ಯದಲ್ಲಿ ತೊಡಗಿ, ಸ್ವಕಾರ್ಯ ನಷ್ಟ – Kannada News | June 13 Daily Horoscope: Uncover Your Zodiac Predictions and Astrological Insights Today

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ತ್ರಯೋದಶೀ ತಿಥಿಯ ಶನಿವಾರದಂದು ಅಧಿಕಾರಕ್ಕೆ ಪ್ರಯತ್ನ, ವಸ್ತು ದಾನ, ವಾಹನ ದುರಸ್ತಿ, ಲೆಕ್ಕಪತ್ರ ಸಿದ್ಧತೆ, ಅಸ್ಪಷ್ಟ ಚಿಂತನೆ, ಧಾರ್ಮಿಕ ನಂಬಿಕೆ ಇವೆಲ್ಲ ಈ ದಿನದ ಭವಿಷ್ಯ. ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಶನಿ, ಪಕ್ಷ :…

Read More

‘ಪರಾಶಕ್ತಿ’ ಸಿನಿಮಾ ಬ್ಯಾನ್ ಮಾಡಿ: ಕಾಂಗ್ರೆಸ್ ಆಗ್ರಹ, ಕಾರಣವೇನು? – Kannada News | Tamil Nadu congress demand ban on Parasakthi movie

ತಮಿಳುನಾಡು ಚಿತ್ರರಂಗಕ್ಕೆ ಈ ಸಂಕ್ರಾಂತಿ ಅಥವಾ ಪೊಂಗಲ್ ವಿವಾದಾತ್ಮಕವಾಗಿ ಪರಿಣಮಿಸಿದೆ. ಜನವರಿ 09ರಂದು ಬಿಡುಗಡೆ ಆಗಬೇಕಿದ್ದ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಬಿಡುಗಡೆ ಆಗಲಿಲ್ಲ. ಸಿನಿಮಾ ವಿವಾದದಲ್ಲಿ ಸಿಲುಕಿಕೊಂಡಿದ್ದು ಪ್ರಕರಣ ನ್ಯಾಯಾಲಯದಲ್ಲಿದೆ. ‘ಜನ ನಾಯಗನ್’ ಎದುರು ಬಿಡುಗಡೆ ಆದ ‘ಪರಾಶಕ್ತಿ’ಗೂ ಸಹ ಸೆನ್ಸಾರ್ ಸಮಸ್ಯೆ ಎದುರಾಗಿತ್ತು, ಬರೋಬ್ಬರಿ 23 ಕಟ್​​ಗಳನ್ನು ಸಿನಿಮಾಕ್ಕೆ ಸೂಚಿಸಲಾಗಿತ್ತು. ಆದರೆ ಕೊನೆಗೂ ಸಿನಿಮಾ ಬಿಡುಗಡೆ ಆಗಿದ್ದು, ಬಿಡುಗಡೆ ಆದ ಬಳಿಕ ಸಿನಿಮಾಕ್ಕೆ ಒಂದಾದ ಮೇಲೊಂದರಂತೆ ಸಮಸ್ಯೆ ಎದುರಾಗುತ್ತಲೇ…

Read More

ಜೀ ಕನ್ನಡದಲ್ಲಿ ಬರ್ತಿದೆ ‘ಸರಿಗಮಪ ಲಿಟ್ಲ್​ ಚಾಂಪ್ಸ್’; ಈ ಬಾರಿಯ ವಿಶೇಷತೆ ಏನು? – Kannada News | Zee Kannada SaReGaMaPa Li’l Champs: New Season, Judges and show starts Details

ಜೀ ಕನ್ನಡದ ವಾಹಿನಿಯಲ್ಲಿ ಒಂದಾದ ಬಳಿಕ ಒಂದು ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಲೇ ಇರುತ್ತವೆ. ಇತ್ತೀಚೆಗೆ ‘ಜೋಡಿ ನಂ.1’ ಶೋ ಪ್ರಸಾರ ಆರಂಭಿಸಿದೆ. ಇನ್ನು, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋ ಇತ್ತೀಚೆಗೆ ಪೂರ್ಣಗೊಂಡಿದೆ. ಹೀಗಿರುವಾಗಲೇ ಜನರ ಫೇವರಿಟ್ ಶೋ ಎನಿಸಿಕೊಂಡಿರುವ ‘ಸರಿಗಮಪ ಲಿಟ್ಲ್ ಚಾಂಪ್ಸ್’ (SAREGAMAPA) ಆಗಮನಕ್ಕೆ ಜೀ ಕನ್ನಡ ವೇದಿಕೆ ರೆಡಿ ಮಾಡಿದೆ. ಈ ವೀಕೆಂಡ್​​ನಿಂದ ಶೋ ಪ್ರಾರಂಭ ಆಗಲಿದೆ. ಇದಕ್ಕಾಗಿ ವೀಕ್ಷಕರು ಕಾದಿದ್ದಾರೆ. ‘ಸರಿಗಮಪ’ ಶೋ ಅಂದರೆನೇ ಅನೇಕರಿಗೆ ಇಷ್ಟ. ಅದರಲ್ಲೂ ಈ…

Read More

ಮಿಲ್ಲೆಟ್ ಟು ಮೈಕ್ರೋಚಿಪ್: ಹೇಗಿರಲಿದೆ ಗೊತ್ತಾ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ಭಾಗಿಯಾಗಲಿರುವ ಕರ್ನಾಟಕದ ಸ್ತಭ್ಧಚಿತ್ರ? – Kannada News | Karnataka’s ‘Millet to Microchip’ Tableau Set to Shine at the Republic Day 2026 Parade

ಬೆಂಗಳೂರು, ಜನವರಿ 23: ಜನವರಿ 26ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ಕರ್ನಾಟಕದಿಂದ ಮಿಲ್ಲೆಟ್ ಟು ಮೈಕ್ರೋಚಿಪ್ ಪರಿಲ್ಪನೆಯ ಸ್ತಬ್ಧಚಿತ್ರ ಭಾಗವಹಿಸಲಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದ್ದು, ಈ ಪಯಣವನ್ನು ಸಂಕೇತಿಸುವಂತೆ ಟ್ಯಾಬ್ಲೋ ಇರಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಭಾರತ ಪರ್ವದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ…

Read More

ಇರು ಅಂದ್ರೆ ಇರ್‍ತೀನಿ, ಬಿಡು ಅಂದ್ರೆ ಬಿಡ್ತೀನಿ: ಹೈಕಮಾಂಡ್​​ ನಿರ್ಧಾರವೇ ಫೈನಲ್; ಶಾಕಿಂಗ್ ಹೇಳಿಕೆ ನೀಡಿದ ಸಿದ್ದರಾಮಯ್ಯ – Kannada News | Karnataka CM Siddaramaiah on Cabinet Reshuffle, Local Polls, and Opposition Tactics

ಬೆಂಗಳೂರು, ಮೇ.6: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಐದು ವರ್ಷಗಳ ಮುಖ್ಯಮಂತ್ರಿ ಸ್ಥಾನದ ಅವಧಿಯ ಕುರಿತು ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ. “ನಮ್ಮ ಪಕ್ಷ ಐದು ವರ್ಷ ಪೂರ್ಣಗೊಳಿಸುತ್ತದೆ, ಆದರೆ ನನ್ನ ಸ್ಥಾನದ ಕುರಿತು ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದರಂತೆ ನಡೆಯುತ್ತೇನೆ” ಎಂದು ಅವರು ತಿಳಿಸಿದ್ದಾರೆ. ದೆಹಲಿ ಭೇಟಿ ಬಗ್ಗೆ ಕೇಳಿದ ಪ್ರಶ್ನೆಗೆ, ಹೈಕಮಾಂಡ್ ಕರೆದರೆ ಅಥವಾ ರಾಹುಲ್ ಗಾಂಧಿ ಅಪಾಯಿಂಟ್‌ಮೆಂಟ್ ನೀಡಿದರೆ ಸಂಪುಟ ಪುನರಚನೆ ಸೇರಿದಂತೆ ಇತರೆ ವಿಚಾರಗಳ ಕುರಿತು ಚರ್ಚಿಸಲು…

Read More

ಸಂಪಾಯಿತಲೇ ಪರಾಕ್: ಮೈಲಾರಲಿಂಗ ಕಾರ್ಣಿಕ ನುಡಿಯನ್ನ ಭಕ್ತರೇ ವಿಶ್ಲೇಷಣೆ ಮಾಡಲಿ ಎಂದ ಡಿಸಿ – Kannada News | Vijayangara: Mailara Lingeshwara Karnika: Sampayitale Parak; What did DC say

ಬಳ್ಳಾರಿ, ಫೆಬ್ರವರಿ 04: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ನುಡಿ ಹೊರಬಿದ್ದಿದೆ. ‘ಸಂಪಾಯಿತಲೇ ಪರಾಕ್’ ಎಂದು ಕಾರ್ಣಿಕ ಗೊರವಯ್ಯ ಭವಿಷ್ಯ ನುಡಿದಿದ್ದಾರೆ. ಸದ್ಯ ಈ ಕಾರ್ಣಿಕ ನುಡಿಯನ್ನು ರಾಜ್ಯ, ದೇಶದಲ್ಲಿ ಉತ್ತಮ ಮಳೆ-ಬೆಳೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಇನ್ನು ಈ ಬಗ್ಗೆ ವಿಜಯನಗರ ಡಿಸಿ ಕವಿತಾ ಮನ್ನೀಕೆರಿ ಮಾತನಾಡಿದ್ದು, ಕಾರ್ಣಿಕ ನುಡಿಯನ್ನು ಭಕ್ತರೇ ವಿಶ್ಲೇಷಣೆ ಮಾಡಲಿ ಎಂದು ಹೇಳಿದ್ದಾರೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. Source…

Read More