ಲಕ್ನೋ: ಬಿರಿಯಾನಿ ಅಂಗಡಿಯ ಫ್ರೀಜರ್ನಲ್ಲಿ ವ್ಯಕ್ತಿಯ ಶವ ಪತ್ತೆ – Kannada News | Man’s Body Discovered Inside Freezer at Biryani Outlet in Lucknow
ಲಕ್ನೋ, ಮಾರ್ಚ್ 04: ಉತ್ತರ ಪ್ರದೇಶದ ಲಕ್ನೋದಲ್ಲಿರುವ ಬಿರಿಯಾನಿ ಅಂಗಡಿಯ ಫ್ರೀಜರ್ನಲ್ಲಿ 35 ವರ್ಷ ವ್ಯಕ್ತಿಯೊಬ್ಬರ ಶವ(Dead body )ಪತ್ತೆಯಾಗಿರುವ ಘಟನೆ ನಡೆದಿದೆ. ಬಕ್ಷಿ ಕಾ ತಾಲಾಬ್ ಪ್ರದೇಶದಲ್ಲಿರುವ ಅಂಡಗಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನ ವಿಜಯ್ ಪಾಲ್ ಎಂದು ಗುರುತಿಸಲಾಗಿದೆ. ಅವರು ಬಿಕೆಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಿಶನ್ಪುರ್ ಮಾಜ್ರಾ ನಿವಾಸಿಯಾಗಿದ್ದರು. ಅಂಗಡಿ ಮಾಲೀಕರಾದ ಶನಿ ರಾವತ್ ಅವರ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಅಂಗಡಿಯು ಕಳೆದ ನಾಲ್ಕು ದಿನಗಳಿಂದ ಮುಚ್ಚಿತ್ತು. ರಾವತ್ ಭಾನುವಾರ ಬೆಳಗ್ಗೆ…