Headlines

Feb Weekly Horoscope: ಈ ರಾಶಿಯವರಿಗೆ ನಿಮ್ಮ ನಿರ್ಧಾರಗಳು ಹಿನ್ನಡೆಗೆ ಕಾರಣವಾಗಬಹುದು – Kannada News | Rashibhavishya Feb 2026: Harness Your Enthusiasm This Week!

2026ರ ಫೆಬ್ರವರಿಯ ಎರಡನೇ ವಾರ ಇದಾಗಿದ್ದು ಕುಜನು ತನ್ನ ಉಚ್ಚಕ್ಷೇತ್ರವಾದ ಮಕರದಲ್ಲಿ ಹಾಗೂ ರವಿ, ಬುಧ, ಶುಕ್ರ, ರಾಹುಗಳು ಕುಂಭದಲ್ಲಿ ಇರುವರು. ಉತ್ಸಾಹವು ಎಲ್ಲರಲ್ಲಿಯೂ ಅಧಿಕವಾಗಿ ಕಂಡುಬರಲಿದ್ದು ಅದನ್ನು ಸರಿಯಾದ ಕಡೆಗೆ ಬಳಸಿಕೊಳ್ಳುಬ ಚಾಕಚಕ್ಯತೆ ಬುದ್ಧಿಗೆ ಬೇಕು. ಆ ವಿಚಾರದಲ್ಲಿ ಹಿನ್ನಡೆ ಸಾಧ್ಯತೆ ಇದೆ. ಪೂರ್ವಾಪರ ಯೋಚನೆ ಯೋಜನೆ ಇರಲಿ. ಮೇಷ: ನಿಮ್ಮ ಅದ್ಭುತ ಶಕ್ತಿ ಆಟೋಟಗಳಲ್ಲಿ ಮಿಂಚಲು ಸಹಕಾರಿ. ಅತಿಯಾದ ಅವಸರ ಬಿಟ್ಟು ಓದಿನತ್ತ ಗಮನಹರಿಸಿ, ನಾಯಕತ್ವದ ಗುಣಗಳು ನಿಮ್ಮನ್ನು ಗುರುತಿಸುವಂತೆ ಮಾಡುತ್ತವೆ. ​ವೃಷಭ: ನಿಮ್ಮ…

Read More

ನೆಲಮಂಗಲದಲ್ಲಿ ಜ್ಯುವೆಲರಿಗೆ ಕನ್ನ: ಗೋಡೆ ಕೊರೆದು 70 ಕೆಜಿ ಬೆಳ್ಳಿ ಕಳ್ಳತನ – Kannada News | Nelamangala Jeweller Robbed: Burglars Drill Wall, Loot 70 KG Silver Worth 1.2 Crore

ನೆಲಮಂಗಲ, ಮೇ 1: ಹಾವನೂರು ಲೇಔಟ್‌ನಲ್ಲಿರುವ ಎಂಬಿ ಜ್ಯುವೆಲರ್ಸ್​​ನಲ್ಲಿ ಭಾರಿ ಕಳ್ಳತನ ನಡೆದಿದೆ. ಖದೀಮರು ಗೋಡೆ ಕೊರೆದು ಅಂಗಡಿಯೊಳಗೆ ಪ್ರವೇಶಿಸಿ, ಸುಮಾರು 70 ಕೆಜಿ ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ. ದೋಚಿದ ಬೆಳ್ಳಿಯ ಮೌಲ್ಯ ಸುಮಾರು 1.2 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.  ಗೋಡೆಯನ್ನು ಕೊರೆದು, ಹಿಂಬದಿಯ ರೂಮ್‌ನ ಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು, ರಾತ್ರೋರಾತ್ರಿ ಈ ಕೃತ್ಯ ಎಸಗಿದ್ದಾರೆ. ಸದ್ಯ…

Read More

16 ಕ್ಯಾಚ್​ಗಳು… ಪಂಜಾಬ್ ಕಿಂಗ್ಸ್‌ನ ಫೀಲ್ಡರ್​ಗಳಿಂದ ಕಂಗೆಟ್ಟ ಚಹಲ್! – Kannada News | Yuzvendra Chahal’s Nightmare: 16 Chances Created, 8 Catches Dropped!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲಾರ್ಧದಲ್ಲಿ ಸೋಲಿಲ್ಲದ ಸರದಾರನಾಗಿ ಮಿಂಚಿದ್ದ ಪಂಜಾಬ್ ಕಿಂಗ್ಸ್​ ತಂಡವು ದ್ವಿತೀಯಾರ್ಧದಲ್ಲಿ ಹ್ಯಾಟ್ರಿಕ್ ಸೋಲನುಭವಿಸಿದೆ. ಈ ಸೋಲುಗಳಿಗೆ ಮುಖ್ಯ ಕಾರಣ ಪಂಜಾಬ್ ಕಿಂಗ್ಸ್​ ಫೀಲ್ಡರ್​ಗಳ ಕಳಪೆ ಪ್ರದರ್ಶನ. ಏಕೆಂದರೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೇ ಪಂಜಾಬ್ ಕಿಂಗ್ಸ್ ಫೀಲ್ಡರ್​ಗಳು 4 ಕ್ಯಾಚ್​ಗಳನ್ನು ಕೈಚೆಲ್ಲಿದ್ದಾರೆ. ಹೀಗೆ ಪಂಜಾಬ್ ಕಿಂಗ್ಸ್ ಫೀಲ್ಡರ್​ಗಳು ಕ್ಯಾಚ್ ಕೈಚೆಲ್ಲುತ್ತಿರುವುದು ಯುಜ್ವೇಂದ್ರ ಚಹಲ್ ಓವರ್​ನಲ್ಲಿ ಎಂಬುದು ಇಲ್ಲಿ ವಿಶೇಷ. ಚಹಲ್​ನ ದುರಾದೃಷ್ಟ: ಈ ಬಾರಿಯ ಸೀಸನ್‌ನಲ್ಲಿ ಯುಜ್ವೇಂದ್ರ ಚಹಲ್ ಇದುವರೆಗೆ…

Read More

ವೋಟ್ ಹಾಕಿದ ಪೊಲೀಸರಿಗೂ ಧನ್ಯವಾದ ಹೇಳಿದೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ – Kannada News | Bigg Boss Kannada Season 12 Winner Gilli Nata thanks police personnel for support

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಟ್ರೋಫಿ ಗೆದ್ದ ಗಿಲ್ಲಿ ನಟ ಅವರು ಅನೇಕ ಕಾರ್ಯಕ್ರಮಗಳಿಗೆ ಅತಿಥಿಯಾಗಿ ತೆರಳುತ್ತಿದ್ದಾರೆ. ಅವರನ್ನು ಇಷ್ಟಪಡುವ ದೊಡ್ಡ ಅಭಿಮಾನಿ ಬಳಗ ಇದೆ. ಕನಕಪುರದಲ್ಲಿ ನಡೆದ ಕನಕೋತ್ಸವ ಕಾರ್ಯಕ್ರಮದಲ್ಲಿ ಗಿಲ್ಲಿ ನಟ ಭಾಗಿ ಆಗಿದ್ದಾರೆ. ಈ ವೇಳೆ ಅವರು ಭಾವುಕವಾಗಿ ಮಾತನಾಡಿದರು. ತಮಗೆ ಬೆಂಬಲ ನೀಡಿದ ಪೊಲೀಸರಿಗೂ ಅವರು ಧನ್ಯವಾದ ತಿಳಿಸಿದರು. ‘ಇಷ್ಟೊಂದು ಪ್ರೀತಿ ಸಂಪಾದನೆ ಮಾಡುತ್ತೇನೆ ಅಂತ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಸತ್ಯವಾಗಲೂ ಅಂದುಕೊಂಡಿರಲಿಲ್ಲ. ನನ್ನ ಹೆಣ ಬೀಳುವವರೆಗೂ…

Read More

ಯಾದಗಿರಿ: ಎರಡು ಎಕರೆ ಜಮೀನಿಗಾಗಿ ರಕ್ತಚರಿತ್ರೆ; ದೊಡ್ಡಪ್ಪನ ಕುಟುಂಬದಿಂದಲೇ ಯುವಕನ ಬರ್ಬರ ಹತ್ಯೆ!

ಸುರಪುರ, ಮಾ.31: ಕೇವಲ ಎರಡು ಎಕರೆ ತುಂಡು ಭೂಮಿಗಾಗಿ ದಶಕಗಳಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹವೊಂದು ಯುವಕನ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ 27 ವರ್ಷದ ಪರಮೇಶ್ವರ ಎಂಬ ಯುವಕನನ್ನು ಆತನ ದೊಡ್ಡಪ್ಪ ಹನುಮಂತರಾಯ ಮತ್ತು ಆತನ ಮಕ್ಕಳು ಸೇರಿ ತಲ್ವಾರ್, ಬರ್ಚಿ ಹಾಗೂ ಕಲ್ಲುಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೊಲೆಯಾದ ಪರಮೇಶ್ವರನ ತಂದೆ ಮಲ್ಲಪ್ಪ ಮತ್ತು ಆರೋಪಿ ಹನುಮಂತರಾಯ ಸಹೋದರರು. ತಲಾ 13 ಎಕರೆ ಜಮೀನು ಹಂಚಿಕೆಯಾಗಿದ್ದರೂ, ಮಲ್ಲಪ್ಪನ ಹೆಸರಿಗಿದ್ದ ಹೆಚ್ಚುವರಿ…

Read More

Video: ನಾಲ್ಕು ತಿಂಗಳ ಬಳಿಕ ಮನೆಗೆ ಮರಳಿದ ಮಗನಿಗೆ ಅದ್ದೂರಿ ಸ್ವಾಗತ ಕೋರಿದ ತಾಯಿ – Kannada News | A mother’s lavish welcome as her son returns home after going to a distant town for studies

ಪ್ರತಿಯೊಬ್ಬ ತಂದೆ ತಾಯಂದಿರು (parents) ಮಕ್ಕಳ ಭವಿಷ್ಯ ಚೆನ್ನಾಗಿರಬೇಕೆಂದು ಬಯಸುವುದು ಸಹಜ. ಹೀಗಾಗಿ ಓದಿಗಾಗಿ, ಉದ್ಯೋಗಕ್ಕಾಗಿ ದೂರದ ಊರುಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿಕೊಡುತ್ತಾರೆ.  ಈ ವೇಳೆ ತಮ್ಮ ಮಕ್ಕಳು ಮನೆಗೆ ಬರುತ್ತಾರೆ ಎಂದರೆ ಹೆತ್ತವರಿಗೆ ಆಗುವ ಖುಷಿ ಅಷ್ಟಿಷ್ಟಲ್ಲ. ಈ ವಿಡಿಯೋ ಇದೀಗ ತಾಯಿಯ (mother) ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಓದಲು ದೂರದ ಊರಿಗೆ ಹೋದ ಮಗನು, ನಾಲ್ಕು ತಿಂಗಳ ಬಳಿಕ ಮನೆಗೆ ಮರಳುತ್ತಿದ್ದಂತೆ ತಾಯಿಯೂ ಅದ್ದೂರಿ ಸ್ವಾಗತ ಕೋರಿದ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ….

Read More

ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ, ಕಳಪೆ ಕಾಮಗಾರಿ ಬಯಲು – Kannada News | Police vehicle fell down into footpath at Bengaluru Over Heavy rain

ಬೆಂಗಳೂರು, (ಏಪ್ರಿಲ್​ 30): ಬುಧವಾರ (ಏಪ್ರಿಲ್ 29) ಸುರಿದ ಮಳೆಯು 25 ವರ್ಷದ ಬಳಿಕ ಹೊಸ ದಾಖಲೆ ಬರೆದಿದೆ. ಈ ವರ್ಷಧಾರೆಗೆ ರಾಜಧಾನಿ ತತ್ತರಿಸಿದ್ದಾರೆ. ಒಂದೇ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಗಳಂತಾಗಿವೆ. ಇನ್ನು ಎಲ್ಲೊಂದರಲ್ಲಿ ಗಿಡ ಮರಗಳು ಮುರಿದು ಬಿದ್ದಿವೆ. ಇನ್ನು  ವಿಧಾನಸೌದ ಬಳಿಯ ರಸ್ತೆ ಫುಟ್​​ಪಾತ್ ಕುಸಿದು ಬಿದ್ದಿದ್ದು, ಈ ಗುಂಡಿಗೆ ಪೊಲೀಸ್ ವಾಹನ ಸಹ ಬಿದ್ದಿದೆ. Source link

Read More

Kolkata Earthquake: ಕೇಂದ್ರ ಸಚಿವರು ವೇದಿಕೆಯಲ್ಲಿ ಮಾತನಾಡುತ್ತಿರುವಾಗಲೇ ಕಂಪಿಸಿದ ಭೂಮಿ – Kannada News | Powerful Tremors Shake Kolkata, Quake Origin Traced to Bangladesh

ಕೋಲ್ಕತ್ತಾ, ಫೆಬ್ರವರಿ 27: ಕೋಲ್ಕತ್ತಾದಲ್ಲಿ ವೇದಿಕೆಯ ಮೇಲೆ ಕೇಂದ್ರ ಸಚಿವ ಸುಕಾಂತ ಮಜುಂದಾರ್  ಮಾತನಾಡುತ್ತಿರುವಾಗಲೇ ಭೂಮಿ ಕಂಪಿಸಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.  ಕೋಲ್ಕತ್ತಾದಲ್ಲಿ ಇಂದು ಮಧ್ಯಾಹ್ನ ಹಠಾತ್ತನೆ ಭೂಮಿ ಕಂಪಿಸಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ನಗರದ ಹಲವು ಕಡೆಗಳಲ್ಲಿ ಸೌಮ್ಯದಿಂದ ಮಧ್ಯಮ ಪ್ರಮಾಣದ ಭೂಕಂಪ ಸಂಭವಿಸಿದೆ. ಹಠಾತ್ ಭೂಕಂಪನದಿಂದಾಗಿ ಒಂದು ಕ್ಷಣ ಜನರು ಭಯಭೀತರಾದರು.ತಮ್ಮ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಓಡಿಬಂದಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ,…

Read More

ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯನ್ನು ಒಪ್ಪಲಾಗದು; ಲೋಕಸಭೆಯಲ್ಲಿ ಪ್ರಧಾನಿ ಮೋದಿ ಖಂಡನೆ

ನವದೆಹಲಿ, ಮಾರ್ಚ್ 23: ಇಂದು ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಪ್ರಸ್ತಾಪಿಸಿದರು. “ಇರಾನ್ ಮತ್ತು ಅಮೆರಿಕ-ಇಸ್ರೇಲ್ ಮೈತ್ರಿಕೂಟದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಪರಿಸ್ಥಿತಿ ಚಿಂತಾಜನಕವಾಗಿದೆ. ಬಿಕ್ಕಟ್ಟು ಈ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತಿದೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ವಿಶ್ವದ ಜನರು ಮತ್ತು ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ” ಎಂದು ಅವರು ಹೇಳಿದರು. ಸಂಸತ್ತಿನ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ…

Read More

ಮಾರ್ಚ್ 11ರಂದು ತಮಿಳುನಾಡಿಗೆ ಪ್ರಧಾನಿ ಮೋದಿ ಭೇಟಿ; ಬಿಜೆಪಿಯ ಅದ್ಧೂರಿ ಸಾರ್ವಜನಿಕ ಸಭೆಯಲ್ಲಿ ಭಾಗಿ – Kannada News | PM Narendra Modi to visit Tamil Nadu on March 11

ತಿರುಚ್ಚಿ, ಮಾರ್ಚ್ 4: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾರ್ಚ್ 11ರಂದು ತಿರುಚ್ಚಿಯಲ್ಲಿ ನಡೆಯಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಭವ್ಯ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ತಮಿಳುನಾಡಿನಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ ತಿಂಗಳಲ್ಲಿ ಪ್ರಧಾನಿ ಮೋದಿ ಅವರು ತಮಿಳುನಾಡಿಗೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ಮುಂದಿನ ವಾರ ತಮಿಳುನಾಡು ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಲಿದೆ. ತಮಿಳುನಾಡು ಶೀಘ್ರದಲ್ಲೇ ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವುದರಿಂದ ವಿವಿಧ…

Read More